ವಿಪರೀತ ಕಾರು, ಬೈಕ್ ಕ್ರೇಜ್ ಹೊಂದಿದ್ದ ಶಾಸಕರ ಪುತ್ರ : ಕೆಲವೇ ತಿಂಗಳ ಅಂತರದಲ್ಲಿ ಪತ್ನಿ, ಮಗ- ಭಾವೀ ಸೊಸೆ ಕಳೆದುಕೊಂಡ ಹೊಸೂರು ಶಾಸಕ ಪ್ರಕಾಶ

ಬೆಂಗಳೂರು: ನಗರದ ಕೋರಮಂಗಲ ಬಳಿ ಕಳೆದ ಮಧ್ಯರಾತ್ರಿ ಸಂಭವಿಸಿದ ಭೀಕರ ಆಡಿ ಕಾರು ಅಪಘಾತದಲ್ಲಿ ತಮಿಳುನಾಡು ಹೊಸೂರಿನ ಡಿಎಂಕೆ ಶಾಸಕ ವೈ. ಪ್ರಕಾಶ್ ಅವರ ಏಕೈಕ ಪುತ್ರ ಕರುಣಾಸಾಗರ್ ಮತ್ತು ಆತನ ಭಾವಿ ಪತ್ನಿ ಬಿಂದು ಸೇರಿದಂತೆ ಏಳು ಜನ ಮೃತಪಟ್ಟಿದ್ದಾರೆ.
ಶಾಸಕರ ಪುತ್ರ ಕರುಣಾಸಾಗರ್ ಉದ್ಯಮ ನಡೆಸುತ್ತಿದ್ದ. ಕಾರು, ಬೈಕ್ ಕ್ರೇಜ್ ವಿಪರೀತವಾಗಿತ್ತು ಎಮದು ಹೇಳಲಾಗಿದೆ.
ಶಾಸಕರ ಪುತ್ರ, ಒಬ್ಬನೇ ಮಗ, ಐಷಾರಾಮಿ ಬದುಕು, ಹೀಗಾಗಿ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಐಷಾರಾಮಿ ದುಬಾರಿ ಕಾರು, ಬೈಕ್ ಗಳನ್ನು ರೈಡ್ ಮಾಡುವುದು, ಫೋಟೋಶೂಟ್ ಮಾಡಿಸುವ ಹುಚ್ಚು ಕರುಣಾಸಾಗರ್ ಗೆ ಇತ್ತು. ಕರುಣ ಸಾಗರ ಬಳಿ ಹಲವು ಕಾರು ಮತ್ತು ಬೈಕ್ ಸಂಗ್ರಹವಿತ್ತು ಎಂದು ತಿಳಿದುಬಂದಿದೆ. ಕೊನೆಗೂ ಅದರಿಂದಲೇ ಸಾವು ಸಂಭವಿಸುವಂತಾಗಿದೆ. ನಿನ್ನೆ (ಸೋಮವಾರ) ಮಧ್ಯರಾತ್ರಿ ಅಪಘಾತವಾಗುವುದಕ್ಕೆ ಮೊದಲು ತನ್ನ ಇನ್ಸ್ಟಾಗ್ರಾಂನಲ್ಲಿ ಕಾರು ಡ್ರೈವಿಂಗ್ ನ ಕೆಲವೇ ಸೆಕೆಂಡುಗಳ ವಿಡಿಯೊವೊಂದನ್ನು ಅಪ್ ಲೋಡ್ ಮಾಡಿದ್ದರು ಕರುಣ ಸಾಗರ.

ಇವರು ಚಲಾಯಿಸುತ್ತಿದ್ದ ಆಡಿ ಕಾರು ಬಹಳ ವೇಗವಾಗಿ ಸಾಗಿ ಫೂಟ್​ಪಾತ್ ತಡೆಗೋಡೆ ಗುದ್ದಿ ಬಳಿಕ ಬ್ಯಾಂಕ್ ಕಟ್ಟಡಕ್ಕೆ ಗುದ್ದಿ ಅಪಘಾತವಾಗಿದೆ. ಕಾರಿನಲ್ಲಿದ್ದ ಎಲ್ಲಾ ಏಳು ಮಂದಿಯೂ ದಾರುಣ ಸಾವು ಕಂಡಿದ್ಧಾರೆ. ತಡರಾತ್ರಿ ಈ ಅಪಘಾತ ಸಂಭವಿಸುವುದಕ್ಕೂ ಮುನ್ನ ಪೊಲೀಸರ ಕಣ್ಣಿಗೆ ಈ ಕಾರು ಬಿದ್ದಿತ್ತಂತೆ. ರಾತ್ರಿ 10:35ರ ಸುಮಾರಿಗೆ ಅತಿವೇಗವಾಗಿ ಸಾಗುತ್ತಿದ್ದ ಈ ಕಾರನ್ನು ಕೋರಮಂಗಲದ ಅಪೋಲೋ ಆಸ್ಪತ್ರೆ ಬಳಿಯ ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆದಿದ್ದರು. ಈ ಘಟನೆಯ ವಿವರ ನೀಡಿದ ಕಾನ್ಸ್​ಟೆಬಲ್ ಪ್ರಶಾಂತ್, ತಾವು ಯಾಕೆ ರ್ಯಾಷ್ ಡ್ರೈವಿಂಗ್ ಮಾಡಿದಿ ಎಂದು ಪ್ರಶ್ನಿಸಿದ್ದರಂತೆ. ಇದೇ ರಸ್ತೆಯಲ್ಲಿ ತಮ್ಮ ಮನೆ ಇದೆ. ಎಲ್ಲರೂ ಅಲ್ಲಿಗೆ ಹೋಗುತ್ತಿದ್ದೇವೆ ಎಂದು ಕರುಣ್ ಸಾಗರ್ ತಮಗೆ ತಿಳಿಸಿದರು. ನೈಟ್ ಕರ್ಫ್ಯೂ ಇದೆ. ಹುಷಾರಾಗಿ ನಿಧಾನವಾಗಿ ಹೋಗಿ ಎಂದು ತಾನು ಅವರಿಗೆ ತಿಳಿಹೇಳಿದ್ದಾಗಿ ಪೊಲೀಸ್ ಕಾನ್ಸ್​ಟೆಬಲ್ ಪ್ರಶಾಂತ್ ತಿಳಿಸಿದ್ದಾರೆ ಎಂದು ನ್ಯೂಸ್‌ 18 ಕನ್ನಡ  ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

ಸದ್ಯ ಬೆಂಗಳೂರಿನ ಸೇಂಟ್‌ ಜಾನ್ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ಮುಗಿದು ಶವಗಳನ್ನು ಹಸ್ತಾಂತರಿಸಲಾಗುತ್ತಿದೆ. ಶಾಸಕ ವೈ ಪ್ರಕಾಶ್ ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಾರೆ.

ಪತ್ನಿ ಸಾವಿನ ಕೆಲ ತಿಂಗಳ ಬಳಿಕ ಏಕೈಕ ಮಗನೂ ವಿಧಿವಶ

ಇನ್ನು ಕೆಲ ತಿಂಗಳ ಹಿಂದೆಯಷ್ಟೇ ಹೊಸೂರು ಡಿಎಂಕೆ ಶಾಸಕ ವೈ.ಪ್ರಕಾಶ್ ಪತ್ನಿ ಮೃತಪಟ್ಟಿದ್ರು. ಇದೀಗ ಅವರ ಏಕೈಕ ಮಗನನ್ನ ಕಳೆದುಕೊಂಡಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಾದ ಅಪಘಾತದಲ್ಲಿ ಕಾರಿನಲ್ಲಿ ಕರುಣಾಸಾಗರ್ ಜೊತೆಗೆ ಬಿಂದು(28) ಕೂಡ ಮೃತಪಟ್ಟಿದ್ದಾರೆ. ಕುರಣಾಸಾಗರ್ ಮದುವೆಯಾಗಬೇಕಿದ್ದ  ಬಿಂದು, ಸಂಬಂಧಿ. ಅವರು ಬೆಂಗಳೂರಿನವರಾಗಿದ್ದು ಚೆನ್ನೈಯಲ್ಲಿ  ಕೆಲಸಕ್ಕೆ ಸೇರಿದ್ದರು ಎನ್ನಲಾಗಿದೆ.

ಕರುಣಾಸಾಗರ್ ಮತ್ತು ಬಿಂದು ಮದುವೆ ಮಾಡಿಕೊಳ್ಳಲು ನಿಶ್ಚಯಿಸಿದ್ದರು. ಆದರೆ ಬಿಂದುವಿನ ತಂದೆ ಮನೆಯವರಿಗೆ ಈ ಸಂಬಂಧ ಅಷ್ಟೊಂದು ಇಷ್ಟವಿರಲಿಲ್ಲ, ಕಾರಣ ಶಾಸಕರ ಪುತ್ರ, ಜೊತೆಗೆ ಆರ್ಥಿಕ, ಸಾಮಾಜಿಕವಾಗಿ ನಮಗೂ ಅವರಿಗೂ ದೊಡ್ಡ ಅಂತರವಿರುತ್ತದೆ ಎಂದು ಬಿಂದುವಿನ ತಂದೆ ಈ ಮದುವೆ ಸರಿ ಹೊಂದುವುದಿಲ್ಲ ಎಂದು  ಹೇಳಿದ್ದರಂತೆ. ಆದರೆ ಮಗಳು ಹಠ ಮಾಡಿದ ಕಾರಣ ಕರುಣ ಸಾಗರ್ ಜೊತೆ ಮದುವೆ ಮಾಡಿಕೊಡರು ಒಪ್ಪಿಕೊಂಡಿದ್ದರಂತೆ ಎಂದು ಕನ್ನಡಪ್ರಭ.ಕಾಮ್‌ ವರದಿ ಮಾಡಿದೆ.
ಟಿ ವಿ ಚಾನೆಲ್ ಮೂಲಕ ಬಿಂದು ಸಾವಿನ ಮಾಹಿತಿ ಪಡೆದ ತಂದೆ: ಚೆನ್ನೈಯಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಸಿಕ್ಕಿ ಪಿಜಿಯಲ್ಲಿ ಉಳಿದುಕೊಂಡಿದ್ದ ಬಿಂದು ನಿನ್ನೆ ರಾತ್ರಿ 8 ಗಂಟೆಗೆ ತನ್ನ ತಂದೆಗೆ ಫೋನ್ ಮಾಡಿ ಚೆನ್ನೈಯಲ್ಲಿದ್ದೇನೆ, ಊಟ ಮಾಡಿ ಮಲಗುತ್ತೇನೆ ಎಂದು ಸುಳ್ಳು ಹೇಳಿದ್ದಳಂತೆ. ಬೆಂಗಳೂರಿಗೆ ಕರುಣಾಸಾಗರ್ ಜೊತೆ ಬಂದಿದ್ದ ವಿಷಯ ಬಿಂದು ತಂದೆಗೆ ಗೊತ್ತಿರಲಿಲ್ಲ ಎಂದು ವರದಿ ಹೇಳಿದೆ.
ಇಂದು ಬೆಳಗ್ಗೆ ಟಿವಿಯಲ್ಲಿ ನೋಡಿದಾಗಲೇ ಮಗಳು-ಭಾವಿ ಅಳಿಯ ನಿಧನರಾಗಿದ್ದಾರೆ ಎಂದು ಗೊತ್ತಾಗಿದ್ದು. ಸುದ್ದಿ ತಿಳಿದ ಕೂಡಲೇ ಸೈಂಟ್ ಜಾನ್ಸ್ ಆಸ್ಪತ್ರೆಗೆ ಬಂದ ಬಿಂದು ತಂದೆ ಮಗಳ ಸಾವಿನಿಂದ ತೀವ್ರ ನೊಂದು ಹೋಗಿದ್ದಾರೆ.
ಆಡಿ ಕಾರು ಅಪಘಾತವಾಗುವುದಕ್ಕೆ ಮೊದಲು ಬಿಂದುವಿನ ಪಿಜಿಗೆ ಬಂದು ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋದ ಕರುಣಾಸಾಗರ್ ಜೊತೆ ಅವರ ಇತರ ಸ್ನೇಹಿತರು ಇದ್ದರು. ಬೆಂಗಳೂರಿನಲ್ಲಿ ಸುತ್ತಾಡಿ ನಂತರ ಹೊಟೇಲ್ ಗೆ ಹೋಗಿ ಊಟ ಮಾಡಿದ್ದಾರೆ. ಅಲ್ಲಿಂದ ವಾಪಸ್ ತಮಿಳು ನಾಡು ಕಡೆ ಮಧ್ಯರಾತ್ರಿ ಹೊರಟಿದ್ದರು ಎಂದು ಹೇಳಲಾಗುತ್ತಿದೆ.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement