ಅಫ್ಘಾನ್ ಲೈಂಗಿಕ ಕೆಲಸಗಾರರ ಕೊಲೆ ಪಟ್ಟಿ ಸಿದ್ಧ ಮಾಡಲು ಅಶ್ಲೀಲ ಜಾಲತಾಣ ಹುಡುಕುತ್ತಿರುವ ತಾಲಿನಾಬ್‌: ವರದಿ

ಕಾಬೂಲ್: ಅಫ್ಘಾನಿಸ್ತಾನದಿಂದ ತಾಲಿಬಾನಿ ಕೈವಶವಾದ ನಂತರ ಕ್ರೂರ ನಿಯಮಗಳು ಜಾರಿಯಾಗುತ್ತಿದೆ.ಇದರ ಮಧ್ಯೆಯೇ ಈಗ ಮತ್ತೊಮದು ಆತಂಕಕಾರಿ ಸುದ್ದಿ ವರದಿಯಾಗಿದೆ.
ತಾಲಿಬಾನ್ ಉಗ್ರರು ಲೈಂಗಿಕ ಕಾರ್ಯಕರ್ತೆಯರು, ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿರುವವರ ಪಟ್ಟಿ ಮಾಡುತ್ತಿದ್ದಾರಂತೆ. ಅವರ್ಯಾರೆಂದು ಪಟ್ಟಿ ಮಾಡಿ ಅವರನ್ನೆಲ್ಲ ಕೊಲ್ಲಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಒಂದು ವರದಿಯ ಪ್ರಕಾರ, ತಾಲಿಬಾನಿಗಳು ಅಫ್ಘಾನ್ ಲೈಂಗಿಕ ಕೆಲಸಗಾರರ “ಕೊಲ್ಲುವ ಪಟ್ಟಿ” ಮಾಡಲು ಅಶ್ಲೀಲ ತಾಣಗಳನ್ನು ಹುಡುಕುತ್ತಿದ್ದಾರೆ. ಅಫ್ಘಾನ್ ವೇಶ್ಯೆಯರನ್ನು ಒಳಗೊಂಡ ವೀಡಿಯೋಗಳನ್ನು ತಾಲಿಬಾನ್ ಡೆತ್ ಸ್ಕ್ವಾಡ್‌ಗಳು ಪ್ರಮುಖ ಅಶ್ಲೀಲ ತಾಣಗಳಲ್ಲಿ ಪತ್ತೆ ಮಾಡಿವೆ ಎಂದು ಸನ್ ಆನ್‌ಲೈನ್ ವರದಿ ಮಾಡಿದೆ. ಮೇಲೆ ಉಲ್ಲೇಖಿಸಿದ ಜನರು ಬ್ರಿಟಿಷ್ ಟ್ಯಾಬ್ಲಾಯ್ಡ್‌ಗೆ ತಾಲಿಬಾನರು “ಶಿರಚ್ಛೇದ, ಕಲ್ಲೆಸೆಯುವ ಅಥವಾ ನೇಣು ಹಾಕುವ ಮುನ್ನ ಭಯೋತ್ಪಾದಕರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುತ್ತಾರೆ” ಎಂದು ಹೇಳಿದೆ.
ತಾಲಿಬಾನಿಗಳು ಮಹಿಳೆಯರ ವಿಷಯದಲ್ಲಿ ಕಠಿಣ ಕಾನೂನುಗಳನ್ನು ಜಾರಿಗೊಳಿಸಿದ್ದಾರೆ. ಮಹಿಳೆಯರು ಮುಖ ಮುಚ್ಚಿಕೊಳ್ಳದೆ, ರಕ್ತಸಂಬಂಧಿ ಪುರುಷ ಅಥವಾ ಪತಿ ಇಲ್ಲದೆ ಮನೆ ಬಿಟ್ಟು ಹೊರಗೆ ಬರುವಂತೆಯೂ ಇಲ್ಲ ಎಂಬ ಕಾನೂನು ಇದೆ. ವೇಶ್ಯಾವಾಟಿಕೆ ನಡೆಸುತ್ತಿರುವ ಮಹಿಳೆಯ ಪಟ್ಟಿ ಮಾಡಿ, ಅವರಿಗೆ ಮರಣ ದಂಡನೆ ನೀಡುವ ಸಿದ್ಧತೆಯಲ್ಲಿ ಉಗ್ರರು ತೊಡಗಿದ್ದಾರೆ.
ತಾಲಿಬಾನ್‌ನಲ್ಲಿ ಒಂದು ಡೆತ್ ಸ್ಕ್ವಾಡ್ ಇದೆ. ಅದೀಗ ಲೈಂಗಿಕ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರನ್ನು ಹುಡುಕಲು ಪ್ರಾರಂಭಿಸಿದೆ. ಅಷ್ಟೇ ಅಲ್ಲ, ಅಶ್ಲೀಲ ವೆಬ್‌ಸೈಟ್‌ಗಳನ್ನೂ ಜಾಲಾಡುತ್ತಿದೆ ಎಂದು ದಿ ಸನ್ ವರದಿ ಮಾಡಿದೆ. ಈ ಕೆಲಸಕ್ಕೆಂದೇ ಡೆತ್ ಸ್ಕ್ವಾಡ್ ಒಂದು ಅಭಿಯಾನವನ್ನೂ ಶುರು ಮಾಡಿದೆ ಎಂದೂ ಹೇಳಿದೆ.
ಅಫ್ಘಾನಿಸ್ತಾನದಲ್ಲಿ 1996 ರಿಂದ 2001ರವರೆಗೆ ಆಡಳಿತ ನಡೆಸಿದ್ದ ತಾಲಿಬಾನ್, ಆಗ ಕೂಡ ಹೀಗೇ ಮಾಡಿತ್ತು. ಲೈಂಗಿಕ ಕಾರ್ಯಕರ್ತೆಯರನ್ನು ಹುಡುಕಿ ಕೊಂದಿತ್ತು. ಇಲ್ಲವೇ, ತಮ್ಮ ಕಾಮದಾಹ ತೀರಿಸಿಕೊಳ್ಳಲು ಉಗ್ರರು ಅವರನ್ನು ಬಳಸಿಕೊಳ್ಳುತ್ತಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ