ನಕಲಿ ಕೋವಿಡ್‌ ಲಸಿಕೆ ಪತ್ತೆ ಹಚ್ಚುವುದು ಹೇಗೆ?: ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಜನರು ಪಡೆದ ಕೋವಿಡ್‌ ಲಸಿಕೆ ನಕಲಿಯೇ ಅಸಲಿಯೇ ಎಂಬುವುದನ್ನು ಪತ್ತೆ ಹಚ್ಚಲು ಕೇಂದ್ರ ಸರ್ಕಾರವು ಮಾರ್ಗಸೂಚಿಯನ್ನು ಪ್ರಕಟಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಆಗ್ನೇಯ ಏಷ್ಯಾ ಹಾಗೂ ಆಫ್ರಿಕಾದಲ್ಲಿ ಕೋವಿಶೀಲ್ಡ್‌ ಲಸಿಕೆಗಳ ನಕಲಿ ಮಾದರಿ ಕಂಡು ಬಂದಿದೆ ಎಂದು ಹೇಳಿದ ಒಂದು ದಿನದ ನಂತರ ಕೇಂದ್ರ ಸರ್ಕಾರ ಕೋವಿಡ್‌ ಲಸಿಕೆಯು ನಕಲಿಯೇ ಅಸಲಿಯೇ ಎಂಬುವುದನ್ನು ಪತ್ತೆ ಹಚ್ಚಲು ಮಾರ್ಗಸೂಚಿಯನ್ನು ಪ್ರಕಟ ಮಾಡಿದೆ..
ಭಾರತದಲ್ಲಿ ಸೀರಮ್‌ ಇನ್ಸಿಟ್ಯೂಟ್‌ ಆಫ್‌ ಇಂಡಿಯಾದ ಕೋವಿಶೀಲ್ಡ್‌, ಭಾರತ್‌ ಬಯೋಟಿಕ್‌ನ ಕೋವ್ಯಾಕ್ಸಿನ್‌ ಹಾಗೂ ರಷ್ಯಾದ ಸ್ಪುಟ್ನಿಕ್‌ ವಿ ಲಸಿಕೆಯನ್ನು ನೀಡಲಾಗುತ್ತಿದೆ. ಇವುಗಳು ನಕಲಿಯೇ ಅಸಲಿಯೇ ಎಂದು ತಿಳಿಯಲು ಸಾಧ್ಯವಾಗಲು ಈ ಲಸಿಕೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿದೆ.

ಕೋವಿಶೀಲ್ಡ್‌ ಲಸಿಕೆ ನಕಲಿಯೇ ಎಂದು ಪರಿಶೀಲಿಸುವುದು ಹೇಗೆ?

* ಕೋವಿಶೀಲ್ಡ್‌ನ ಲೇಬಲ್‌ ಕಡು ಹಸಿರು ಬಣ್ಣದಲ್ಲಿರುತ್ತದೆ. ಹಾಗೆಯೇ ಅಲ್ಯೂಮಿನಿಯಂ ಫ್ಲಿಪ್-ಆಫ್ ಸೀಲ್‌ನ ಬಣ್ಣ  ಕಡುಹಸಿರು ಆಗಿದೆ.
* ಅಕ್ಷರಗಳನ್ನು ವಿಶೇಷವಾದ ಬಿಳಿ ಶಾಯಿಯಲ್ಲಿ ಮುದ್ರಿಸಲಾಗಿರುತ್ತದೆ, ಹೆಚ್ಚು ಸ್ಪಷ್ಟವಾಗಿರುತ್ತದೆ ಹಾಗೂ ಓದಲು ಸಾಧ್ಯವಾಗುತ್ತದೆ.
* ಟ್ರೇ‌ಡ್‌ ಮಾರ್ಕ್‌ನೊಂದಿಗೆ ಬ್ರ್ಯಾಂಡ್‌ನ ಹೆಸರು ನಿಜವಾದ ಲಸಿಕೆಯಲ್ಲಿ ಹಾಕಲಾಗಿರುತ್ತದೆ.
* ಜೆನೆರಿಕ್‌ ಫಾಂಟ್‌ನಲ್ಲಿ ಅಕ್ಷರಗಳು ಇರುತ್ತದೆ ಹಾಗೂ ಬೋಲ್ಡ್‌ ಇರುವುದಿಲ್ಲ
* CGS NOT FOR SALE ಎಂದು ಪ್ರಿಂಟ್‌ ಮಾಡಲಾಗಿರುತ್ತದೆ
* ಎಸ್‌ಎಸ್‌ಐನ ಲೋಗೋ ಅನ್ನು ವಿಶಿಷ್ಟ ಮಾದರಿಯಲ್ಲಿ ಪ್ರಿಂಟ್‌ ಮಾಡಲಾಗಿರುತ್ತದೆ. ಇದು ಕೇವಲ ನಿಖರವಾದ ವಿವರಗಳ ಬಗ್ಗೆ ತಿಳಿದಿರುವ ಕೆಲವರಿಗೆ ಮಾತ್ರ ಗುರುತಿಸಲು ಸಾಧ್ಯವಾಗುತ್ತದೆ.
* ಸಂಪೂರ್ಣ ಲೇಬಲ್‌ಗೆ ವಿಶೇಷ ಎಫೆಕ್ಟ್‌ ನೀಡಲಾಗಿದೆ, ಇದು ನಿರ್ದಿಷ್ಟ ಕೋನದಲ್ಲಿ ಮಾತ್ರ ಗೋಚರಿಸುತ್ತದೆ
* ಈ ವಿಶೇಷ ವಿನ್ಯಾಸವನ್ನು ಆಯಕಟ್ಟಿನ ಸ್ಥಳಗಳಲ್ಲಿ ಸ್ವಲ್ಪ ಬದಲಿಸಲಾಗಿದೆ ಮತ್ತು ಕೆಲವು ಹೆಚ್ಚುವರಿ ವಿಶೇಷ ಅಂಶಗಳನ್ನು ವಿನ್ಯಾಸಕ್ಕೆ ಸೇರಿಸಲಾಗಿದೆ. ಅವು ಸಾಮಾನ್ಯವಾಗಿ ಜನರಿಗೆ ಗೋಚರಿಸುವುದಿಲ್ಲ. ಆದರೆ ಸೂಕ್ಷ್ಮ ಬದಲಾವಣೆಗಳ ಬಗ್ಗೆ ತಿಳಿದಿರುವವರು ಲೇಬಲ್ ಮತ್ತು ಬಾಟಲಿಯ ಸತ್ಯಾಸತ್ಯತೆ ಸುಲಭವಾಗಿ ಪರಿಶೀಲಿಸಬಹುದು. .

 

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

ಕೋವ್ಯಾಕ್ಸಿನ್‌ ಅಸಲಿಯೇ ಪರಿಶೀಲಿಸುವುದು ಹೇಗೆ?

* ಕೋವಾಕ್ಸಿನ್ ಮೇಲೆ ಹೊಲೊಗ್ರಾಫಿಕ್ ಎಫೆಕ್ಟ್‌ ಇರುತ್ತದೆ
* ಕೋವ್ಯಾಕ್ಸಿನ್‌ ಲೇಬಲ್ ಮೇಲೆ ಯುವಿ ಹೆಲಿಕ್ಸ್ ಅಥವಾ ಡಿಎನ್‌ಎ ತರಹದ ರಚನೆ ಇದೆ. ಇದು ಯುವಿ ಬೆಳಕಿನಲ್ಲಿ ಮಾತ್ರ ಕಾಣಿಸುತ್ತದೆ.
* ಲೇಬಲ್‌ನಲ್ಲಿ ಅಡಗಿರುವ ಮೈಕ್ರೋ ಟೆಕ್ಸ್ಟ್‌ನಲ್ಲಿ ಕೋವಾಕ್ಸಿನ್‌ ಎಂದು ಬರೆಯಲಾಗಿದೆ
* Covaxin ನ X ನಲ್ಲಿ ಹಸಿರು ಹಾಳೆಯ ಎಫೆಕ್ಟ್‌ ಇದೆ

ಸ್ಪುಟ್ನಿಕ್‌ ವಿ ಲಸಿಕೆ ಅಸಲಿಯೇ ನಕಲಿಯೇ ಪತ್ತೆ ಹೇಗೆ?

* ರಷ್ಯಾದ ಕೋವಿಡ್ -19 ಲಸಿಕೆಯನ್ನು ಉತ್ಪಾದಿಸುವ ಎರಡು ಬೃಹತ್ ಉತ್ಪಾದನಾ ತಾಣಗಳಿಗೆ ವಿಭಿನ್ನ ಲೇಬಲ್‌ಗಳಿವೆ. ತಯಾರಕರ ಹೆಸರನ್ನು ಹೊರತುಪಡಿಸಿ ಎಲ್ಲಾ ಇತರ ಮಾಹಿತಿ ಮತ್ತು ವಿನ್ಯಾಸ ಒಂದೇ ಆಗಿರುತ್ತದೆ.
* ಇಂಗ್ಲೀಷ್ ಲೇಬಲ್ ಇದುವರೆಗೆ ಆಮದು ಮಾಡಿದ ಎಲ್ಲಾ ಉತ್ಪನ್ನಗಳಿಗೆ 5 ಲಸಿಕೆಯ ಸಣ್ಣ ಪ್ಯಾಕ್‌ನ ಮುಂಭಾಗ ಮತ್ತು ಹಿಂಭಾಗದಲ್ಲಿ ಮಾತ್ರ ಲಭ್ಯವಿದೆ. ಲಸಿಕೆಯ ಪ್ರಾಥಮಿಕ ಲೇಬಲ್ ಸೇರಿದಂತೆ ಎಲ್ಲವೂ ರಷ್ಯಾ ಭಾಷೆಯಲ್ಲಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement