ಕರ್ನಾಟಕದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌.. ಆದರೆ ಷರತ್ತುಗಳು ಅನ್ವಯ..

ಬೆಂಗಳೂರು: ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದ್ದು ಆದರೆ ಷರತ್ತುಗಳು ಅನ್ವಯಿಸುತ್ತದೆ. ಸಂಘ, ಸಂಸ್ಥೆಗಳಿಂದ ಭಾರೀ ಒತ್ತಡ ಇದ್ದ ಹಿನ್ನೆಲೆಯಲ್ಲಿ ಅಂತಿಮವಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಒಪ್ಪಿಗೆ ನೀಡಲಾಗಿದೆ.
ಅನುಮತಿ ನೀಡಬೇಕೋ ಅಥವಾ ಬೇಡವೋ? ನೀಡುವುದಾದರೆ ಯಾವೆಲ್ಲ ಮಾರ್ಗಸೂಚಿಗಳನ್ನು ನಿಗದಿಪಡಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಭಾನುವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಲಾಗಿದೆ. ಮೂರು ದಿನಗಳ ಸಾರ್ವಜನಿಕ ಮಾತ್ರ ಗಣೇಶೋತ್ಸವಕ್ಕೆ ಅವಕಾಶ ಕೊಡಲಾಗಿದೆ. ಆದರೆ, ಇದೇವೇಳೆ ಮೆರವಣಿಗೆಗೆ, ಮನರಂಜನೆ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಜ್ಞರಾದ ಡಾ.ದೇವಿಶೆಟ್ಟಿ, ಡಾ.ಮಂಜುನಾಥ್, ವೈರಾಲಜಿಸ್ಟ್ ಡಾ.ರವಿ, ಡಾ.ಸುದರ್ಶನ್, ಕಂದಾಯ ಸಚಿವ ಅಶೋಕ್, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಗಣಪತಿ ಮೂರ್ತಿಗಳನ್ನು ನಿಗದಿತ ಸ್ಥಳಗಳಲ್ಲಿ ಮಾತ್ರ ವಿಸರ್ಜನೆ ಮಾಡಲು ಅವಕಾಶ ನೀಡಲಾಗಿದ್ದು, ಬಿಬಿಎಂಪಿ, ಆಯಾ ಜಿಲ್ಲಾಡಳಿತಗಳು ಸೂಚಿಸಿದ ಸ್ಥಳದಲ್ಲಿಯೇ ವಿಸರ್ಜಿಸಬೇಕು ಎಂದು ನಿರ್ಧಾರ ಮಾಡಲಾಗಿದೆ.ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರದ ಅನುಮತಿ ಸಿಕ್ಕಿದೆಯಾದರೂ ಬೀದಿಗೆ ಒಂದರಂತೆ ಗಣೇಶ ಪ್ರತಿಷ್ಠಾಪಿಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಬೇಕು, ಪ್ರತಿ ಪ್ರದೇಶಕ್ಕೆ ಇಂತಿಷ್ಟೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯವಾಗಿದ್ದು, ಬಿಬಿಎಂಪಿ, ಜಿಲ್ಲಾಡಳಿತದ ಅನುಮತಿ ಪಡೆಯಲೇಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ 3 ದಿನ ಮಾತ್ರ ಸರಳವಾಗಿ ಗಣೇಶೋತ್ಸವ ಇರಲಿದೆ. ಸಾರ್ವಜನಿಕ ಸ್ಥಳದಲ್ಲಿಯೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರೂ ಅದು ಸರಳವಾಗಿ ಇರಬೇಕು. ಅದ್ಧೂರಿ ಆಚರಣೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡುವ ಬಗ್ಗೆ ಸರ್ಕಾರ ಹಲವು ಷರತ್ತುಗಳನ್ನು ಹಾಕಿದೆ.

ಶುಕ್ರವಾರ, ಶನಿವಾರ, ಭಾನುವಾರ, ಸೋಮವಾರ, ಮಂಗಳವಾರ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದ್ದು, ಮಂಗಳವಾರದೊಳಗೆ ಮೂರ್ತಿಗಳ ವಿಸರ್ಜನೆ‌ ಮಾಡಬೇಕು.
ಗರಿಷ್ಠ ಐದು ದಿನಗಳು ಮಾತ್ರ ಗಣೇಶೋತ್ಸವ ಆಚರಣೆಗೆ ಅವಕಾಶ
ನೂರಾರು ಜನರು ಸೇರಿ ಗಣೇಶನ ಮೆರವಣಿಗೆ ಮಾಡುವಂತಿಲ್ಲ
ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆರ್ಕೇಸ್ಟ್ರಾ, ಡಿಜೆ ಸೌಂಡ್​ಗೆ ಬ್ರೇಕ್
ಜನಜಂಗುಳಿ ಅವಕಾಶವಿಲ್ಲ, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಖಾಲಿ ಜಾಗದಲ್ಲಿ ಗಣೇಶ ಮೂರ್ತಿಗಳನ್ನು ಕೂಡ್ರಿಸಲು ಸೂಚನೆ
ಐವತ್ತು ಜನಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ.
50 × 50 ಜಾಗದಲ್ಲಿ ಪೆಂಡಲ್ ಹಾಕಲು ಅವಕಾಶ
ಗಣೇಶ ವಿಸರ್ಜನೆ ಮಾಡವಾಗ ಕೆಲವೇ ಜನರಿಗೆ ಸೀಮಿತಗಡಿ ಜಿಲ್ಲೆಯ ಭಾಗದಲ್ಲಿ ಕೋವಿಡ್ ದರ ಶೇಕಡ 2 ಕ್ಕಿಂತ ಕಡಿಮೆ ಇದ್ದರೆ ಗಣೇಶೋತ್ಸವಕ್ಕೆ ಅನುಮತಿ
ವಾರ್ಡ್​​ಗೆ ಒಂದೇ ಗಣೇಶ ಪ್ರತಿಷ್ಠಾಪನೆಗೆ ಅವಕಾಶ
ಅಪಾರ್ಟ್‌ಮೆಂಟಿನಲ್ಲಿ ಗಣೇಶ ಮುರ್ತಿ ಕೂಡ್ರಿಸಬಹುದು, 20 ಜನರು ಮಾತ್ರ ಸೇರಬೇಕು.
9 ಗಂಟೆ ಮೇಲೆ ಗಣೇಶ ಮೂರ್ತಿ ವಿಸರ್ಜನೆ ಮಾಡುವಂತಿಲ್ಲ

5 ದಿನಗಳು ಮಾತ್ರ ಆಚರಣೆ ಅವಕಾಶ
ಶಾಲಾ ಕಾಲೇಜುಗಳಲ್ಲಿ ಗಣೇಶೋತ್ಸವ ಆಚರಿಸುವಂತಿಲ್ಲ
ಗಣೇಶೋತ್ಸವ ಆಯೋಜಕರು ವ್ಯಾಕ್ಸಿನ್‌ ಪಡೆದಿರಬೇಕು, ಕಡ್ಡಾಯ
ದೇಗುಲಗಳಲ್ಲಿ ಗಣೇಶ ಮೂರ್ತಿ ಕೂರಿಸುವಂತಿಲ್ಲ
ಮನೆಯಲ್ಲಿ 2 ಅಡಿ, ಸಾರ್ವಜನಿಕವಾಗಿ 4 ಅಡಿ ಮೂರ್ತಿ ಇರಬೇಕು
ನಗರ ಪ್ರದೇಶ ವಾರ್ಡ್‌ಗೆ ಒಂದರಂತೆ ಗಣೇಶ ಮೂರ್ತಿ ಕೂರಿಸಲು ಅವಕಾಶ
ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು.
ಪ್ರತಿಷ್ಠಾಪನೆ ಸ್ಥಾಳವನ್ನ ಸ್ಯಾನಿಟೈಸ್‌ ಮಾಡಿರಬೇಕು
ದರ್ಶನಕ್ಕೆ ಬರುವವರಿಗೆ ಥರ್ಮಲ್‌ ಸ್ಕ್ರಿನಿಂಗ್‌

ಇನ್ನು ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ಎನ್‌ಡಿಎಂಎ 2005, ಐಪಿಸಿ ಸೆಕ್ಷನ್‌ 188ರಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ಗಣೇಶ ಉತ್ಸವಕ್ಕೆ ಅವಕಾಶ ಕೊಡುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ತಜ್ಞರ ತಂಡ ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ಕೊಟ್ಟಿತು. ವಿವಿಧ ರಾಜ್ಯಗಳು ಮತ್ತು ದೇಶಗಳಲ್ಲಿ ಕೋವಿಡ್ ಮೂರನೇ ಅಲೆ ಬಗ್ಗೆ ಮಾಹಿತಿ ನೀಡಿತು. ಸಭೆಯಲ್ಲಿ ಸಚಿವರಾದ ಆರ್ ಅಶೋಕ್ , ನಾಗೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಭಾಗಿಯಾಗಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement