ಹಿಂದೂ-ಮುಸ್ಲಿಮರ ನಡುವೆ ಜಗಳ ತಂದಿದ್ದೇ ಬ್ರಿಟಿಷರು: ಮೋಹನ್ ಭಾಗವತ್

ಮುಂಬೈ: ಹಿಂದೂಗಳು ಮತ್ತು ಮುಸ್ಲಿಮರ ನಡುವೆ ತಪ್ಪು ಕಲ್ಪನೆ ಸೃಷ್ಟಿಸುವ ಮೂಲಕ ಇಬ್ಬರೂ ಕಿತ್ತಾಡುವಂತೆ ಮಾಡಿದವರು ಬ್ರಿಟಿಷರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಹೇಳಿದ್ದಾರೆ.
ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳನ್ನು ಭೇಟಿ ಮಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ , ಬ್ರಿಟಿಷರು ಮುಸ್ಲಿಮರಿಗೆ ಬಹುಸಂಖ್ಯಾತ ಹಿಂದೂ ಭಾರತದಲ್ಲಿ ನೀವೂ ಏನನ್ನೂ ಪಡೆಯುವುದಿಲ್ಲ ಎಂದು ಹೇಳಿದರು. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಬಹುಮತ ಆಳುತ್ತದೆ. ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ ಅವರು ಮಾತ್ರ ಚುನಾಯಿತರಾಗುತ್ತಾರೆ ಮತ್ತು ಆಡಳಿತ ನಡೆಸುತ್ತಾರೆ ಎಂದು ಬ್ರಿಟಿಷರು ಮುಸ್ಲಿಮರಲ್ಲಿ ತಪ್ಪು ಕಲ್ಪನೆ ಸೃಷ್ಟಿಸಿದರು. ಈ ದೇಶದಲ್ಲಿ ಮುಸ್ಲಿಮರು ಏನನ್ನೂ ಪಡೆಯುವುದಿಲ್ಲ. ಅವರ ಬೇಡಿಕೆಗಳನ್ನು ಈಡೇರಿಸಲಾಗುವುದಿಲ್ಲ. ಅಲ್ಲದೆ ಮುಸ್ಲಿಮರು ಹಿಂದೂಗಳೊಂದಿಗೆ ಬದುಕಲು ನಿರ್ಧರಿಸಿದರೆ ಅವರಿಗೆ ಏನೂ ಸಿಗುವುದಿಲ್ಲ, ಹಿಂದೂಗಳು ಮಾತ್ರ ಚುನಾಯಿತರಾಗುತ್ತಾರೆ. ಹೀಗಾಗಿ ನೀವು ಪ್ರತ್ಯೇಕ ರಾಷ್ಟ್ರ ಬೇಡಿಕೆ ಇಡುವಂತೆ ಬ್ರಿಟಿಷರು ಮುಸ್ಲಿಮರಿಗೆ ತಾಕೀತು ಮಾಡಿದರು ಎಂದು ಹೇಳಿದ್ದಾರೆ.
ಇಸ್ಲಾಂ ಭಾರತದಿಂದ ಕಣ್ಮರೆಯಾಗುತ್ತದೆ ಎಂದು ಬ್ರಿಟಿಷರು ಹೇಳಿದ್ದರು. ಆದರೆ ಅದು ಸಾಧ್ಯವಾಗಿದೆಯೇ? ಇಲ್ಲ. ಮುಸ್ಲಿಮರು ಎಲ್ಲ ಹುದ್ದೆಗಳನ್ನು ಹೊಂದಬಹುದು. ಮುಸ್ಲಿಂ ಆಡಳಿತಗಾರರ ಆಗಮನದ ಸಮಯದಿಂದ ಮತ್ತು ಇಂದಿನವರೆಗೂ, ಮುಸ್ಲಿಂ ಧರ್ಮವು ಕಣ್ಮರೆಯಾಗಿಲ್ಲ. ಹಾಗಾಗಿ ಬ್ರಿಟಿಷರು ತಪ್ಪು ಮಾಹಿತಿ ಹರಡಿದ್ದಾರೆ. ಮುಸ್ಲಮರು ಕೂಡ ಭಾರತದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ ಎಂದು ಭಾಗವತ್ ಹೇಳಿದರು.
ಬ್ರಿಟಿಷರು ತಪ್ಪು ಕಲ್ಪನೆಯನ್ನು ಸೃಷ್ಟಿಸಿದ್ದಾರೆ ಎಂದ ಅವರು ಬ್ರಿಟಿಷರು ಎರಡೂ ಸಮುದಾಯಗಳನ್ನು ಕಿತ್ತಾಡುವಂತೆ ಮಾಡಿದರು. ಆ ಹೋರಾಟ ಮತ್ತು ನಂಬಿಕೆಯ ಕೊರತೆಯ ಪರಿಣಾಮವಾಗಿ ಈಗ ಇಬ್ಬರೂ ಪರಸ್ಪರ ಅಂತವನ್ನು ಕಾಯ್ದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಾವು ನಮ್ಮ ದೃಷ್ಟಿಯನ್ನು ಬದಲಾಯಿಸಿಕೊಳ್ಳಬೇಕು ಎಂದರು.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement