ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ತಂತಿಗೆ ಕುತ್ತಿಗೆ ಸಿಲುಕಿ ಉಸಿರುಗಟ್ಟಿ ಗಂಡು ಜಿರಾಫೆ ಸಾವು

ಬೆಂಗಳೂರು: ಬನ್ನೇರು ಘಟ್ಟ ಜೈವಿಕ ಉದ್ಯಾನದಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದ ಮೂರೂವರೆ ವರ್ಷದ ಜಿರಾಫೆ ಭಾನುವಾರ ದಾರುಣವಾಗಿ ಮೃತಪಟ್ಟಿದೆ.
11 ಅಡಿ ಎತ್ತರದ ಯದುನಂದನ ಎಂಬ ಹೆಸರಿನ ಗಂಡು ಚಿರತೆ ಆಹಾರ ತಿನ್ನಲು ಉದ್ಯಾನ ಆವರಣದ ತಂತಿಯಿಂದ ಕುತ್ತಿಗೆ ಹೊರಚಾಚಿದಾಗ ಅದರಲ್ಲಿ ಕುತ್ತಿಗೆ ಸಿಲುಕಿ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜಿರಾಫೆ ಸೂಕ್ಷ್ಮ ಪ್ರಾಣಿಯಾಗಿರುವುದರಿಂದ ಉಸಿರುಗಟ್ಟಿ ಕೊನೆಯುಸಿರೆಳೆಯಿತು ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಣಿ ವಿನಿಮಯ ಯೋಜನೆಯಡಿ ಮೈಸೂರು ಮೃಗಾಲಯದಿಂದ ಹೆಣ್ಣು ಜಿರಾಫೆ ಗೌರಿಯನ್ನು 2018ರಲ್ಲಿ ತರಲಾಗಿತ್ತು. ಅದು ಏಕಾಂಗಿ ಆಗುತ್ತದೆ ಎಂದು 2020ಕ್ಕೆ ಯದುನಂದನನ್ನು ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಿಂದಲೇ ಇಲ್ಲಿಗೆ ತರಲಾಗಿತ್ತು. ಯದುನಂದನ ಸಾವಿನಿಂದ ಗೌರಿ ಮತ್ತೆ ಏಕಾಂಗಿಯಾಗಿದೆ.
ಜಿರಾಫೆ ಚಿಕಿತ್ಸಾ ವಲಯದ ತಂತಿ ಬೇಲಿಯೊಳಗೆ ಕುತೂಹಲದಿಂದ ತಲೆ ತೂರಿಸಿದಾಗ ಕೋಡುಗಳು ಸಿಕ್ಕಿ ಹಾಕಿಕೊಂಡವು. ಇದರಿಂದ ಗಾಬರಿಗೊಂಡ ಯದುನಂದನ ಬಿಡಿಸಿಕೊಳ್ಳಲು ಎಳೆದಾಟ ನಡೆಸಿತು. ಎಳೆದಾಟದಿಂದ ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದವು.
‘ಕುತ್ತಿಗೆ ಸಿಕ್ಕಿಕೊಂಡ ವಿಷಯ ತಿಳಿಸಿದ ತಕ್ಷಣವೇ ಪಶು ವೈದ್ಯರು ಮತ್ತು ಪ್ರಾಣಿಗಳ ಪಾಲಕರು ಧಾವಿಸಿ, ಯದುನಂದನನ ಉಳಿಸುವ ಪ್ರಯತ್ನ ನಡೆಸಲಾಯಿತು. ಆದರೆ ಉಳಿಯಲಿಲ್ಲ.

ಪ್ರಮುಖ ಸುದ್ದಿ :-   ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ: 625ಕ್ಕೆ 625 ಅಂಕ ಪಡೆದ ಅಂಕಿತಾ ರಾಜ್ಯಕ್ಕೆ ಟಾಪರ್, ಉಡುಪಿ ಜಿಲ್ಲೆಗೆ ಮೊದಲ ಸ್ಥಾನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement