ಹುಬ್ಬೇರಿಸಬೇಡಿ.. ಗಿಡದ ಒಂದೇ ಕಾಂಡದಲ್ಲಿ ಬರೋಬ್ಬರಿ 839 ಟೊಮೆಟೋ ಬೆಳೆದ…! ವಿಶ್ವ ದಾಖಲೆ ಮಾಡಿದ ಈ ಕೃಷಿಕ..!!

ಬ್ರಿಟನ್‌ ನಲ್ಲಿ ತೋಟಗಾರರೊರ ಟೊಮೆಟೊ ಗಿಡದ ಒಂದೇ ಕಾಂಡದಲ್ಲಿ 839 ಟೊಮೆಟೊಗಳನ್ನು (Tomato) ಕೊಯ್ಲು ಮಾಡಿದ್ದಾರೆ. ಇದರಿಂದ ಈಗ ಅವರು ಗಿನ್ನೆಸ್ ದಾಖಲೆ ಬರೆಯಲು ಸಿದ್ಧತೆ ನಡೆಸಿದ್ದಾರೆ.
ಇಂಗ್ಲೆಂಡಿನ ಸ್ಟಾನ್ ಸ್ಟೆಡ್ ಅಬೋಟ್ಸ್ ನ 43 ವರ್ಷದ ಡೌಗ್ಲಾಸ್ ಸ್ಮಿತ್ ಹಿಂದಿನ ದಾಖಲೆಗಳನ್ನು (Record) ಮುರಿಯಲು ಸಿದ್ಧರಾಗಿದ್ದಾರೆ. ಸ್ಮಿತ್​ 2010ರಲ್ಲಿ ರೆಕಾರ್ಡ್ ಮಾಡಿದ್ದ ಶ್ರೋಪ್‌ಶೈರ್‌ನ ಗ್ರಹಾಂ ಟ್ರಾಂಟರ್ ದಾಖಲೆಗೆ ಸಡ್ಡು ಹೊಡೆಯಲು ತಯಾರಾಗಿದ್ದಾರೆ. ಗ್ರಹಾಂ ಒಂದೇ ಕಾಂಡದಿಂದ 488 ಟೊಮೆಟೋಗಳನ್ನು ಕಟಾವು ಮಾಡಿದ ಹಿಂದಿನ ದಾಖಲೆಯನ್ನು ಮುರಿಯಲು ಸ್ಮಿತ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮಾರ್ಚ್​​ನಲ್ಲಿ ಟೊಮೆಟೋ ಬೀಜಗಳನ್ನು ಬಿತ್ತಿ ಸೆಪ್ಟೆಂಬರ್​ನಲ್ಲಿ ಒಂದೇ ಕಾಂಡದಿಂದ ಇಷ್ಟು ದೊಡ್ಡ ಮೊತ್ತದ ಟೊಮೆಟೋಗಳನ್ನು ಅವರು ಕೊಯ್ಲು (Harvest) ಮಾಡಿದ್ದಾರೆ.
ಸ್ಮಿತ್ ತಮ್ಮ ಮನೆಯ ಹಿತ್ತಲಲ್ಲಿ 88 ಅಡಿ ಹಸಿರುಮನೆಯಲ್ಲಿ ಟೊಮೆಟೋ ಬೀಜ ನೆಟ್ಟು ಬೆಳೆ ತೆಗೆದು ಈ ದಾಖಲೆ ಮಾಡಿದ್ದಾರೆ. ಕಳೆದ ವರ್ಷ ವಿಶ್ವದ ಅತಿ ದೊಡ್ಡ ಟೊಮೆಟೋ ಸಸ್ಯ ಬೆಳೆಸುವ ಮೂಲಕ ಸುದ್ದಿಯಾಗಿದ್ದ ಅವರು ಈ ಬಾರಿ ಒಂದೇ ಕಾಂಡದಿಂದ 839 ಟೊಮೆಟೊಗಳನ್ನು ಬೆಳೆದು ಮತ್ತೊಂದು ದಾಖಲೆ ಮಾಡಿದ್ದಾರೆ. ಎಸ್​​ಡಬ್ಲ್ಯೂಎನ್​ಎಸ್​​​ ಸುದ್ದಿ ಸಂಸ್ಥೆಯ ಪ್ರಕಾರ, ಅವರು ಸರಿ ಸುಮಾರು 4.24 ಕೆಜಿ ತೂಕದ 839 ಟೊಮೆಟೋ ಕಟಾವು ಮಾಡಿದ್ದಾರೆ.
ಕಳೆದ ಚಳಿಗಾಲದಲ್ಲಿ, ಸ್ಮಿತ್ ಬಹಳಷ್ಟು ವೈಜ್ಞಾನಿಕ ಪತ್ರಿಕೆಗಳನ್ನು ಓದುವ ಮೂಲಕ ಟೊಮೆಟೋ ಬೆಳೆಯುವ ಕೌಶಲ್ಯ ಹೆಚ್ಚಿಸಿಕೊಂಡಿದ್ದರು ಎನ್ನುವ ಮಹತ್ವದ ಅಂಶವನ್ನು ಹೇಳಿದ್ದಾರೆ.
ಸ್ಮಿತ್ ಮಾಹಿತಿ ತಂತ್ರಜ್ಞಾನ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಟೊಮೆಟೊ ಸಂಖ್ಯೆಗಳ ಎಣಿಕೆಗೆ ಸಾಕ್ಷಿಯಾಗಿ, ದೃಢೀಕರಿಸಲು ಸ್ಥಳೀಯ ಪಾದ್ರಿ ಮತ್ತು ಪೋಲೀಸರ ಸಹಾಯವನ್ನು ಪಡೆದಿದ್ದಾರೆ. ಆ ಮೂಲಕ ಗಿನ್ನೆಸ್ ದಾಖಲೆಗಳಿಗೆ ಬೇಕಾದ ದೃಢೀಕರಣಕ್ಕೆ ಟೊಮೆಟೋ ತುಂಬಿದ ಕಾಂಡಗಳಿಂದ ಟೂಮೆಟೋ ಕಿತ್ತುಕೊಳ್ಳುವುದನ್ನು ವಿಡಿಯೋ ಚಿತ್ರೀಕರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಸ್ಮಿತ್ ಪ್ರಯತ್ನಗಳನ್ನು ಈಗ ಗಿನ್ನೆಸ್ ವಿಶ್ವ ದಾಖಲೆ (Guinness World Record) ತಜ್ಞರು ಮೌಲ್ಯಮಾಪನ ಮಾಡಲಿದ್ದಾರೆ. ಅವರ ಈ ಪ್ರಯತ್ನವನ್ನು ದಾಖಲೆ-ಕೀಪಿಂಗ್ ಸಂಸ್ಥೆಗೆ ಅಧಿಕೃತ ಅಂಗೀಕಾರಕ್ಕಾಗಿ ಸಲ್ಲಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಸ್ಮಿತ್ 2020ರ ಆರಂಭದಲ್ಲಿ ಬ್ರಿಟನ್ನಿನ ಅತಿ ಎತ್ತರದ ಸೂರ್ಯಕಾಂತಿ ಬೆಳೆಸಿದ ದಾಖಲೆ ನಿರ್ಮಿಸಿದರು. ಇದು 20 ಅಡಿ ಎತ್ತರದಲ್ಲಿ ಅರಳಿ ನಿಂತಿದೆ. ಅಲ್ಲದೇ ಅತಿ ಹೆಚ್ಚು ಟೊಮೆಟೋ ಬೆಳೆಯುವ ದಾಖಲೆಯನ್ನು ಹೊಂದಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಸ್ಮಿತ್ 27.5 ಇಂಚು ಸುತ್ತಳತೆಯೊಂದಿಗೆ 3 ಕೆಜಿ ಟೊಮೆಟೋ ಸಂಗ್ರಹಿಸಿದ್ದರು. ಆ ಮೂಲಕ ತಮ್ಮ ವೃತ್ತಿ ಜೊತೆಗೆ ಕೃಷಿಯನ್ನು ಪ್ರೀತಿಸುತ್ತಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement