ಲಖಿಂಪುರ್ ಖೇರಿ ಪ್ರಕರಣ; ಸುಪ್ರೀಕೋರ್ಟ್‌ ಸುರ್ದಿಯಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದ ವಕೀಲರು

ನವದೆಹಲಿ: ಉತ್ತರ ಪ್ರದೇಶದ ಇಬ್ಬರು ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರಿಗೆ ಪತ್ರ ಬರೆದಿದ್ದು, ಲಖಿಂಪುರ್ ಖೇರಿಯಲ್ಲಿ ( Lakhimpur Kheri) ನಡೆದ ಘಟನೆಗಳ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ನಿವೃತ್ತ ನ್ಯಾಯಾಧೀಶರಿಂದ ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸುವುದಾಗಿ … Continued

ಕೋವಿಡ್‌ ವ್ಯಾಕ್ಸಿನ್ ಸಿಬ್ಬಂದಿ ನೋಡಿ ಎತ್ತಿನ ಗಾಡಿಯಿಂದ ಜಿಗಿದು ಓಡಿದ ಯುವಕ..!

ಯಾದಗಿರಿ: ವ್ಯಾಕ್ಸಿನ್ ಹಾಕುವ ಸಿಬ್ಬಂದಿಯ ಮಾತಿಗೆ ಜಗ್ಗದ ಯುವಕ ನನಗೆ ವ್ಯಾಕ್ಸಿನ್ ಬೇಡ ಎನ್ನುತ್ತ ಚಕ್ಕಡಿ ಗಾಡಿಯಿಂದ ಜಿಗಿದು ಓಡಿ ತಪ್ಪಿಸಿಕೊಂಡಿರುವ ಘಟನೆ ನಡೆಸ ಬಗ್ಗೆ ವರದಿಯಾಗಿದೆ. ಯಾದಗಿರಿ ತಾಲೂಕಿನ ಹೆಡಗಿಮುದ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಜಿಲ್ಲೆಯ ಕೆಲವಡೆ ವ್ಯಾಕ್ಸಿನ್ ತೆಗೆದುಕೊಳ್ಳಲು ಜನ ಹಿಂಜರಿಯುತ್ತಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳೇ ಖುದ್ದಾಗಿ ಮನೆ ಮನೆಗೆ … Continued

ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಮೂವರು ನಾಗರಿಕರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ತೋರಿದ್ದು ಮೂವರು ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಮೂರು ಗಂಟೆಯ ಅವಧಿಯಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ. ಶ್ರೀನಗರದಲ್ಲಿ ಉಗ್ರರ ಗುಂಡು ಹಾರಿಸಿ ಹಿಂದೂ ವ್ಯಾಪಾರಿಯನ್ನು ಹತ್ಯೆ ಮಾಡಿದ್ದಾರೆ. ಇಕ್ಬಾಲ್ ಪಾರ್ಕ್ ನಲ್ಲಿ ವ್ಯಾಪಾರಿ ಮಖನ್ ಲಾಲ್ ಬಿಂದ್ರೂನನ್ನು ಹತ್ಯೆ ಮಾಡಲಾಗಿದೆ. ಬಳಿಕ ಶ್ರೀನಗರದ ಹೊರವಲಯದಲ್ಲಿನ ಮದೀನ್ ಸಾಹೀಬ್ ನಲ್ಲಿ … Continued

ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷೆ ಪರಿಚಯಸಲಿರುವ ವಿಟಿಯು

ತೆರೆದ ಪುಸ್ತಕ ಪರೀಕ್ಷೆ ಪರಿಚಯಿಸಲಿರುವ ವಿಟಿಯು.. ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ತೆರೆದ ಪುಸ್ತಕ ಪರೀಕ್ಷೆ’ಯನ್ನು ಪರಿಚಯಿಸಲು ಹೊರಟಿದೆ. ರಾಜ್ಯದಲ್ಲಿ ಆಯ್ದ ಎಂಜಿನಿಯರಿಂಗ್ ಕೋರ್ಸ್‌ಗಳ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಿಂದ (2021-22) ತೆರೆದ ಪುಸ್ತಕ ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತಿಳಿಸಿದೆ. ವಿಟಿಯು ಉಪಕುಲಪತಿ (VC) ಡಾ. ಕರಿಸಿದ್ದಪ್ಪ, ‘ವಿನ್ಯಾಸ ಆಧಾರಿತ … Continued

ಕ್ರೂಸ್ ಡ್ರಗ್ ಪ್ರಕರಣ: ದೆಹಲಿ ಮೂಲದ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ 4 ಉದ್ಯೋಗಿಗಳ ಬಂಧಿಸಿದ ಎನ್‌ಸಿಬಿ

ನವದೆಹಲಿ: :ಕ್ರೂಸ್ ಲೈನರ್ ಡ್ರಗ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಇನ್ನೂ ನಾಲ್ಕು ಜನರನ್ನು ಬಂಧಿಸಿದೆ. ಈ ಬೆಳವಣಿಗೆಯೊಂದಿಗೆ, ಪ್ರಕರಣದ ಒಟ್ಟು ಬಂಧನಗಳ ಸಂಖ್ಯೆ 16 ಕ್ಕೆ ಏರಿದೆ. ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಸೇರಿದಂತೆ ಎಂಟು ಜನರನ್ನು … Continued

ಮಹಾವೀರ ಉಪಾದ್ಯೆಗೆ ಶಿಕ್ಷಕ-ಸಿರಿ ಪ್ರಶಸ್ತಿ

ಧಾರವಾಡದ ಸರಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಉಪನ್ಯಾಸಕರ ಕ್ರೀಯಾ ಸಮಿತಿ(ರಿ) ಬೆಂಗಳೂರು ಇವರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿದ್ಯಾಗಿರಿಯ ಜೆ.ಎಸ್.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಹಾವೀರ ಉಪಾದ್ಯೆ ಯವರಿಗೆ ರಾಜ್ಯ ಮಟ್ಟದ ಶಿಕ್ಷಕ-ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದತ್ತ ಪೀಠ: ಹೈಕೋರ್ಟ್ ತೀರ್ಪು ಜಾರಿಗೆ ಸಂಪುಟ ಉಪ ಸಮಿತಿ ರಚನೆ

ಬೆಂಗಳೂರು : ದತ್ತಪೀಠಕ್ಕೆ ಅರ್ಚಕರ ನೇಮಕ ಕುರಿತು ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ . ಚಿಕ್ಕಮಗಳೂರು ಜಿಲ್ಲೆಯ ದತ್ತ ಪೀಠ ಅಥವಾ ಬಾಬಾಬುಡನಗಿರಿ ಗುಹೆಯಲ್ಲಿ ಪೂಜಾ ವಿಧಿವಿಧಾನಗಳನ್ನು ನಡೆಸಲು ಮುಜಾವರರನ್ನು ನೇಮಿಸಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಶ್ರೀಗುರು ದತ್ತಾತ್ರೇಯ … Continued

ಸಿಂಧಗಿ, ಹಾನಗಲ್ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ

ಬೆಂಗಳೂರು: ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಅಶೋಕ ಮನಗೂಳಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಶ್ರೀನಿವಾಸ್ ಮಾನೆ ಅವರನ್ನು ಅಭ್ಯರ್ಥಿಗಳಾಗಿ ಕಾಂಗ್ರೆಸ್‌ ಘೋಷಣೆ ಮಾಡಿದೆ. ಅಕ್ಟೋಬರ್ 30 ರಂದು ಈ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಅಶೋಕ ಮನಗೂಳಿ ಅವರಿಗೆ ಟಿಕೆಟ್ ಖಾತರಿಯಾಗಿತ್ತು. ಹಾನಗಲ್ ವಿಧಾನಸಭಾ … Continued

ಆರ್ಯನ್‌ ಖಾನ್‌ಗೆ ವಿದೇಶಿ ಡ್ರಗ್ ಪೆಡ್ಲರ್‌ಗಳ ನಂಟು

ಮುಂಬೈ: ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದಿರುವ ಬಾಲಿವುಡ್ ನಟ ಆರ್ಯನ್ ಖಾನ್ ಮತ್ತು ಇತರ ಇಬ್ಬರ ವಾಟ್ಸಾಪ್ ಚಾಟ್ ಬಹಿರಂಗವಾಗಿದ್ದು, ಈ ಮೂವರಿಗೆ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್‌ಗಳ ಸಂಪರ್ಕವಿರುವ ಬಗ್ಗೆ ಮಾದಕ ವಸ್ತು ನಿಗ್ರಹದಳ ಪತ್ತೆ ಹಚ್ಚಿದೆ. ಈ ಬಗ್ಗೆ ತನಿಖೆ ಕೈಗೊಂಡಿರುವ ಎನ್‌ಸಿಬಿ ಮಧ್ಯವರ್ತಿಯೊಬ್ಬರಿಂದ ಡ್ರಗ್ ಸರಬರಾಜುರಾಗಿರುವುದು ಪತ್ತೆಯಾಗಿದೆ. ಈ … Continued

ಒಂದೇ ದಿನ 40 ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಹುಚ್ಚು ನಾಯಿ

ಮಂಡ್ಯ : ಇಲ್ಲಿ ಹುಚ್ಚು ನಾಯಿ ಇನ್ನಿಲ್ಲದಂತೆ ಅವಾಂತರ ಸೃಷ್ಟಿಸಿದೆ. ಒಂದೇ ದಿನ ಬರೋಬ್ಬರಿ 40ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಚ್ಚಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆದಿದೆ. ಕೆ.ಆರ್. ಪೇಟೆ ತಾಲೂಕಿನ ಸುತ್ತಮುತ್ತಲ ಗ್ರಾಮದಲ್ಲಿ ಹುಚ್ಚು ನಾಯಿಯ ಹಾವಳಿ ಹೆಚ್ಚಾಗಿದ್ದು, ಸುಮಾರು 40ಕ್ಕೂ ಹೆಚ್ಚು ಜನರಿಗೆ ಕಚ್ಚಿದೆ ಎಂದು ತಿಳಿದುಬಂದಿದೆ. ಸದ್ಯ … Continued