2021: ತಾಂಜಾನಿಯಾ ಕಾದಂಬರಿಕಾರ ಅಬ್ದುಲ್​ರಜಾಕ್ ಗುರ್ನಾಹ್​ಗೆ ಸಾಹಿತ್ಯದ ನೊಬೆಲ್

ತಾಂಜಾನಿಯಾ ದೇಶದ ಕಾದಂಬರಿಕಾರ ಅಬ್ದುಲ್​ರಜಾಕ್ ಗುರ್ನಾಹ್ ಅವರಿಗೆ 2021ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.
ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಬುಧವಾರ ಮಹತ್ವದ ಈ ಪ್ರಶಸ್ತಿಗೆ ಅಬ್ದುಲ್​ರಜಾಕ್ ಗುರ್ನಾಹ್ ಅವರ ಹೆಸರನ್ನು ಘೋಷಿಸಿದೆ. ಗಲ್ಫ್ ದೇಶಗಳಲ್ಲಿನ ನಿರಾಶ್ರಿತರ ಮೇಲೆ ವಸಾಹತುಶಾಹಿಯ ಪರಿಣಾಮ ಮತ್ತು ಅವರ ಸಂಸ್ಕೃತಿಯಲ್ಲಿ ಒಳನುಸುಳುವಿಕೆಯ ಕುರಿತು ರಾಜಿಯಿಲ್ಲದ ಮತ್ತು ಉದಾತ್ತವಾದ ಸಾಹಿತ್ಯ ಸೃಷ್ಟಿಯನ್ನು ಪರಿಗಣಿಸಿ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಗಿದೆ.
ಅಬ್ದುಲ್​ರಜಾಕ್ ಗುರ್ನಾಹ್ ಅವರು 1948ರಲ್ಲಿ ಜನಿಸಿದ್ದು, ಜಾಂಜಿಬಾರ್​ನ ದ್ವೀಪವೊಂದರಲ್ಲಿ ತಮ್ಮ ಬಾಲ್ಯವನ್ನು ಕಳೆದರು. ಆದರೆ 1960ರ ದಶಕದ ಉತ್ತರಾರ್ಧದಲ್ಲಿ ನಿರಾಶ್ರಿತರಾತಿ ಇಂಗ್ಲೆಂಡ್​ಗೆ ವಲಸೆ ಬಂದರು. ಕಳೆದ ಕೆಲ ವರ್ಷಗಳವರೆಗೂ ಅವರು ಕೆಂಟ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಮತ್ತು ವಸಾಹತು ನಂತರದ ಸಾಹಿತ್ಯದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ತಮ್ಮ 21ನೇ ವರ್ಷದಲ್ಲಿ ಇಂಗ್ಲೀಷ್ನಲ್ಲಿ ಬರವಣಿಗೆಯನ್ನು ಆರಂಭಿಸಿದ ಅಬ್ದುಲ್​ರಜಾಕ್ ಗುರ್ನಾಹ್​ ಅದಕ್ಕೂ ಮುನ್ನ ಸ್ವಾಹಿಲಿ ಎಂಬ ಭಾಷೆಯಲ್ಲಿ ಬರೆಯುತ್ತಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement