ಧಾರವಾಡ:  ಜೆಎಸ್ಎಸ್ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಕೀರ್ತಿ ಲೋಕುರ, ವರ್ಷಾ ಹುದ್ದಾರಗೆ ಸುವರ್ಣ ಪದಕಗಳ ಗರಿಮೆ

posted in: ರಾಜ್ಯ | 0

ಧಾರವಾಡ: ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಆಂಗ್ಲಭಾಷಾ ಸ್ನಾತಕೋತ್ತರ ವಿಭಾಗದಲ್ಲಿ ೨೦೧೮-೧೯ ನೇ ಸಾಲಿನಲ್ಲಿ ಅಧ್ಯಯನ ಮಾಡುತ್ತಿದ್ದ ಕೀರ್ತಿ ಲೋಕುರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಅಂತಿಮ ವರ್ಷದಲ್ಲಿ ಆರು (೬) ಸುವರ್ಣ ಪದಕಗಳನ್ನು ಗಳಿಸಿದ್ದಾರೆ ಮತ್ತು ೨೦೧೯-೨೦ ನೇ ಸಾಲಿನಲ್ಲಿ ವರ್ಷಾ ಹುದ್ದಾರ ಐದು (೫) ಸುವರ್ಣ ಪದಕ ಗಳಿಸಿ ಸಂಸ್ಥೆಗೆ ಹಾಗೂ ಆಂಗ್ಲಭಾಷಾ ವಿಭಾಗಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಈ ಸಾಧನೆಗಳು ಆಂಗ್ಲಭಾಷಾ ವಿಭಾಗಕ್ಕೆ ಸರ್ವಕಾಲೀನ ದಾಖಲೆಯಾಗಿದೆ. ಈ ಇಬ್ಬರು ಸಾಧಕಿಯರು ಭವಿಷ್ಯದಲ್ಲಿ ಪ್ರಾಧ್ಯಾಪಕರಾಗುವ ಕನಸನ್ನು ಹೊಂದಿದ್ದಾರೆ.
ಇವರ ಸಾಧನೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ, ವಿತ್ತಾಧಿಕಾರಿಗಳು ಮತ್ತು ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದ, ಹಾಗೂ ಆಂಗ್ಲ ಸ್ನಾತಕೋತ್ತರ ಭಾಷಾವಿಭಾಗದ ಮುಖ್ಯಸ್ಥರಾದ ಪ್ರೊ. ಬಿ. ಜೆ. ಕುಂಬಾರ ಮತ್ತು ಪ್ರಾಧ್ಯಾಪಕ ವೃಂದ – ಪ್ರೊ. ಪ್ರವೀಣ ಕೊರ್ಲಹಳ್ಳಿ, ಶ್ರೀಮತಿ. ಸ್ಮಿತಾ ಪಾಟೀಲ, ಡಾ. ಆರ್. ವಿ. ಚಿಟಗುಪ್ಪಿ, ಡಾ. ಪ್ರಶಾಂತ ಮಾಂಡ್ರೆ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ರಕ್ಷಣಾ ಸಚಿವಾಲಯದಿಂದ ಧರ್ಮಸ್ಥಳ 'ಮಂಜೂಷಾ' ವಸ್ತು ಸಂಗ್ರಹಾಲಯಕ್ಕೆ ಟಿ-565 ಟ್ಯಾಂಕ್ ಕೊಡುಗೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement