ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ: ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾಗೆ ಜಾಮೀನು ನಿರಾಕರಣೆ

ಲಖಿಂಪುರ್ ಖೇರಿ: ಚಂಡಮಾರುತದ ಮಧ್ಯಭಾಗದಲ್ಲಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಅಕ್ಟೋಬರ್ 3 ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ ಬುಧವಾರ ಜಾಮೀನು ನಿರಾಕರಿಸಿದೆ. ಆಶಿಶ್ ಮಿಶ್ರಾ ಮತ್ತು ಆತನ ಸಹಚರ ಆಶಿಶ್ ಪಾಂಡೆ ಇಂದು ತಮ್ಮ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಮುಖ್ಯ … Continued

ಅಪ್ರಾಪ್ತರು, ಅತ್ಯಾಚಾರದ ಗರ್ಭಧಾರಣೆಯಲ್ಲಿ 24 ವಾರಗಳ ವರೆಗೆ ಗರ್ಭಪಾತಕ್ಕೆ ಅವಕಾಶ: ಹೊಸ ನಿಯಮಕ್ಕೆ ಕೇಂದ್ರದಿಂದ ಅಧಿಸೂಚನೆ

ನವದೆಹಲಿ: ದುರ್ಬಲ ಮಹಿಳೆಯರ ಕೆಲವು ವರ್ಗಗಳಿಗೆ ಗರ್ಭಪಾತಕ್ಕೆ ಗರಿಷ್ಠ ಸಮಯಾವಕಾಶದ ಮಿತಿಯನ್ನು ಬುಧವಾರ ಪರಿಷ್ಕರಿಸಿರುವ ಕೇಂದ್ರ ಸರಕಾರವು ಅದನ್ನು 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸಿದೆ. ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ನಿಯಮಗಳು 2021ರಡಿ ಹೊಸ ನಿಯಮಗಳ ಬಗ್ಗೆ ಕೇಂದ್ರವು ಅಧಿಸೂಚನೆ ಹೊರಡಿಸಿದೆ. ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ನಿಷಿದ್ಧ ಲೈಂಗಿಕ ಸಂಪರ್ಕಕ್ಕೆ ಒಳಗಾದ ಮಹಿಳೆಯರು ಮತ್ತು … Continued

ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಇಲ್ಲ: ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟನೆ

ನವದೆಹಲಿ: ದೇಶದಲ್ಲಿ ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಕೊರತೆ ಇಲ್ಲ ಎಂದು ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ದೇಶದಲ್ಲಿ 20 ಲಕ್ಷ ಟನ್ ಕಲ್ಲಿದ್ದಲಿಗೆ ಬೇಡಿಕೆಯಿದೆ. ಇಂಧನ ಇಲಾಖೆಯ ಬೇಡಿಕೆಯಂತೆ ಪೂರ್ಣ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಮೊದಲು 19 ಲಕ್ಷ ಟನ್‌ ಕಲ್ಲಿದ್ದಲಿಗೆ … Continued

ಭಾರತದ ಭೂ ಸಾರಿಗೆ ಇತಿಹಾಸದಲ್ಲಿ ಹೊಸ ದಾಖಲೆ: ಪುಣೆ-ಮುಂಬೈ ಮಾರ್ಗದಲ್ಲಿ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ

ಹೈದರಾಬಾದ್: ದೇಶದ ಮುಂಚೂಣಿ ಇಲೆಕ್ಟ್ರಿಕ್‌ ಬಸ್​ ಕಾರ್ಯಾಚರಣೆ ಸಂಸ್ಥೆ ಇವಿ ಟ್ರಾನ್ಸ್​ ಪ್ರೈವೇಟ್ ಲಿಮಿಟೆಡ್​ ‘ಪುರಿಬಸ್’ (PuriBus) ಬ್ರಾಂಡ್​ ಅಡಿಯಲ್ಲಿ ಪುಣೆ-ಮುಂಬೈ ಮಾರ್ಗದಲ್ಲಿ ಬುಧವಾರ ಇಲೆಕ್ಟ್ರಿಕ್‌ ಬಸ್​ ಸೇವೆ ಆರಂಭಿಸಿದೆ. ಮೇಘಾ ಎಂಜಿನಿಯರಿಂಗ್ ಲಿಮಿಟೆಡ್ (MEIL) ಗ್ರೂಪ್​ನ ಭಾಗವಾಗಿರುವ ಈ ಕಂಪನಿಯು ಇದೇ ಮೊದಲ ಬಾರಿಗೆ ದೇಶದಲ್ಲಿ ಎರಡು ಮುಖ್ಯ ನಗರಗಳ ನಡುವೆ ಇಲೆಕ್ಟ್ರಿಕ್‌ ಬಸ್​ … Continued

ಕರ್ನಾಟಕದಲ್ಲಿ ಬುಧವಾರ 332 ಮಂದಿಗೆ ಹೊಸ ಕೋವಿಡ್‌ ಸೋಂಕು, ಹತ್ತು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲು

ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ 332 ಮಂದಿಗೆ ಹೊಸದಾಗಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದ್ದು 11 ಮದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 515 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,81,732 ಕ್ಕೆ ಏರಿಕೆಯಾಗಿದೆ ಹಾಗೂ ಚೇತರಿಸಿಕೊಂಡವರ ಸಂಖ್ಯೆ 29,34,085 ಕ್ಕೆ ಹೆಚ್ಚಳವಾಗಿದೆ.ಸೋಂಕಿನಿಂದ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 37,906 ಕ್ಕೆ ಹೆಚ್ಚಳವಾಗಿದೆ. ಎಂದು ರಾಜ್ಯದಲ್ಲಿ … Continued

ವರುಣ್ ಗಾಂಧಿ ಪಕ್ಷಕ್ಕೆ ಸ್ವಾಗತಿಸುವ ಪೋಸ್ಟರ್ ಹಂಚಿಕೊಂಡಿದ್ದಕ್ಕೆ ಕಾಂಗ್ರೆಸ್‌ ನಾಯಕನಿಗೆ ಶೋಕಾಸ್‌ ನೋಟಿಸ್‌…!

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಸ್ಥಳೀಯ ಕಾಂಗ್ರೆಸ್ ನಾಯಕ ಇರ್ಷಾದ್ ಉಲ್ಲಾ (Irshad Ullah), ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi )ಮತ್ತು ಬಿಜೆಪಿ ಸಂಸದ ವರುಣ್ ಗಾಂಧಿ(BJP MP Varun Gandhi) ಅವರ ಭಾವಚಿತ್ರವಿರುವ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದು ಈಗ ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು ಅವರಿಗೆ ನೋಟಿಸ್ ನೀಡಲಾಗಿದೆ. ಪಿಲಿಭಿತ್‌ ನಿಂದ ಲೋಕಸಭಾ … Continued

ಮುಂದೂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗೆ ನವೆಂಬರ್‌ 21ರಂದು ಚುನಾವಣೆ

ಬೆಂಗಳೂರು: ಕೋವಿಡ್-19 ಎರಡನೇ ಅಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯನ್ನು ನವೆಂಬರ್ 21ರಂದು ನಡೆಸಲು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಕಸಾಪ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಈ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಕಸಾಪ ಚುನಾವಣೆ ನಿಮಿತ್ತ ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮತ್ತು ಮತಯಾಚನೆ ಕಾರ್ಯ ಆರಂಭವಾಗಿ ಸ್ಥಗಿತಗೊಂಡಿತ್ತು. ಮುಂದೂಡಿದ ಹಂತದಿಂದ ಯಥಾವತ್ತಾಗಿ … Continued

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲು

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್‌ ಅವರು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ನಿನ್ನೆಯಿಂದ (ಮಂಗಳವಾರದಿಂದ) ಜ್ವರ ಹಾಗೂ ಅಶಕ್ತತೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಏಮ್ಸ್‌ಗೆ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಲಾಗಿದೆ. ಈ ವರ್ಷದ ಆರಂಭದಲ್ಲಿ, 89 ವರ್ಷದ ಮಾಜಿ ಪ್ರಧಾನಿ … Continued

ಉಪಚುನಾವಣೆ: ನಾಮಪತ್ರ ಹಿಂಪಡೆದ ಹಾನಗಲ್ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ

ಹಾವೇರಿ: ಜಿಲ್ಲೆಯ ಹಾನಗಲ್ ಉಪಚುನಾವಣೆಯ ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಆರ್.ಬಳ್ಳಾರಿ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. ಹಾನಗಲ್‌ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಆರ್.ಬಳ್ಳಾರಿಗೆ ಟಿಕೆಟ್ ಲಭಿಸಿರಲಿಲ್ಲ. ಹೀಗಾಗಿ, ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈಗ ಅವರು ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಇಂದು (ಬುಧವಾರ) ನಾಮಪತ್ರ ಹಿಂಪಡೆದಿದ್ದಾರೆ. ಸಚಿವ ಮುರುಗೇಶ ನಿರಾಣಿಯವರ ಕಾರಿನಲ್ಲಿ ತಹಶೀಲ್ದಾರ … Continued

ಕಾಶ್ಮೀರ: ಪುಲ್ವಾಮ ಎನ್ಕೌಂಟರ್, ಜೈಶ್ ಉನ್ನತ ಕಮಾಂಡರ್ ಶಾಮ್ ಸೋಫಿ ಹತ್ಯೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಾರತೀಯ ಸೇನೆಯ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಜೈಷ್ ಇ ಮೊಹಮದ್ ಉಗ್ರ ಸಂಘಟನೆಯ ಟಾಪ್ ಕಮಾಂಡರನನ್ನು ಸೇನಾಪಡೆಗಳು ಹೊಡೆದುರುಳಿಸಿವೆ. ದಕ್ಷಿಣ ಕಾಶ್ಮೀರದ ಅವಂತಿಪೋರಾದಲ್ಲಿ ಜೈಶ್ ಇ ಮೊಹಮ್ಮದ್ ಭಯೋತ್ಪಾದನೆ ಸಂಘಟನೆಯ ಟಾಪ್ ಕಮಾಂಡರ್ ಶಾಮ್ ಸೋಫಿ ಎಂಬ ಉಗ್ರನನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದೆ ಎಂದು … Continued