ತೈವಾನ್​ನಲ್ಲಿ ಬೆಂಕಿ ದುರಂತ; 46 ಜನರ ಸಜೀವ ದಹನ, 41ಕ್ಕೂ ಹೆಚ್ಚು ಮಂದಿಗೆ ಗಾಯ

ತೈವಾನ್: ದಕ್ಷಿಣ ತೈವಾನ್‌ನ ನಗರವಾದ ಕಾಹೊಹ್‌ಸ್ಯುಂಗ್​ನಲ್ಲಿ ಬುಧವಾರ ರಾತ್ರಿ ಕಟ್ಟಡವೊಂದಕ್ಕೆ ಬೆಂಕಿ ತಗುಲಿದ್ದು, 46 ಜನರು ಸಾವನ್ನಪ್ಪಿದ್ದಾರೆ. 13 ಮಹಡಿಗಳ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಅಗ್ನಿ ದುರಂತದಲ್ಲಿ ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳದವರು ಅದನ್ನು ನಿಯಂತ್ರಣಕ್ಕೆ ತರುವ ಮುನ್ನ ಅನೇಕ ಮಹಡಿಗಳಿಗೆ ಬೆಂಕಿ ವ್ಯಾಪಿಸಿದೆ.
13 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಹಲವು ಮಹಡಿಗಳು ಸುಟ್ಟು ಕರಕಲಾಗಿವೆ. ಈ ದುರಂತದಲ್ಲಿ 41 ಜನರು ಗಾಯಗೊಂಡಿದ್ದು, 46 ಮಂದಿ ಸಜೀವ ದಹನವಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕರು 7ನೇ ಮಹಡಿಯಲ್ಲಿ ವಾಸವಾಗಿದ್ದವರು. ಈ ಮಹಡಿಯಲ್ಲಿ ಸಾಕಷ್ಟು ಬಾಡಿಗೆ ಮನೆಗಳಿದ್ದು, ರಾತ್ರಿ ಎಲ್ಲರೂ ನಿದ್ರೆ ಮಾಡುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಉಳಿದ ಮಹಡಿಗಳಲ್ಲಿ ಕಮರ್ಷಿಯಲ್ ಅಂಗಡಿಗಳು ಕೂಡ ಇದ್ದು, ಹೆಚ್ಚೇನೂ ಅನಾಹುತಗಳು ಸಂಭವಿಸಿಲ್ಲ. ಮೊದಲ 5 ಮಹಡಿಗಳನ್ನು ಕಮರ್ಷಿಯಲ್ ಬಳಕೆಗೆ ನೀಡಲಾಗಿತ್ತು. ರಾತ್ರಿಯ ವೇಲೆ ಎಲ್ಲರೂ ಮನೆಗೆ ತೆರಳಿದ್ದರಿಂದ ಆ ಮಹಡಿಗಳಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿ ಆರ್ಥಿಕ ನಷ್ಟ ಮಾತ್ರ ಸಂಭವಿಸಿದೆ. ಅಲ್ಲಿ ಪ್ರಾಣಹಾನಿಯೇನೂ ಆಗಿಲ್ಲ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ