ವಾಟ್ಸಪ್, ಜಿಮೇಲ್ ಬಳಸುತ್ತಿರುವ ಮುಸ್ಲಿಂ ಮಹಿಳೆಯರನ್ನು ವಶಕ್ಕೆ ಪಡೆಯುತ್ತಿರುವ ಚೀನಾ ಪೊಲೀಸರು

ಬೀಜಿಂಗ್: ಉಯ್ಗಿರ್ ಮುಸ್ಲಿಮರ (Uyghurs) ಮೇಲಿನ ದಾಳಿಯನ್ನು ಚೀನಾ ತೀವ್ರಗೊಳಿಸಿದೆ. ಮಾಧ್ಯಮಗಳ ವರದಿ ಪ್ರಕಾರ, ಚೀನಾದ ಸೈನಿಕರು ಮತ್ತು ಪೊಲೀಸರು ವಾಟ್ಸಪ್ ಮತ್ತು ಜಿಮೇಲ್ ಬಳಸುತ್ತಿರುವ ಮುಸ್ಲಿಂ ಮಹಿಳೆಯರನ್ನು ವಶಕ್ಕೆ ತೆಗೆಕೊಳ್ಳುತ್ತಿದ್ದಾರೆ.
ಚೀನಾ ಸರ್ಕಾರ ಇವರನ್ನು ‘ಪ್ರಿ-ಕ್ರಿಮಿನಲ್ಸ್’ ಎಂದು ಹೇಳುತ್ತಿದೆ. ಅಂದ್ರೆ ವಾಟ್ಸಪ್ ಮತ್ತು ಜಿ ಮೇಲ್ ಬಳಸುತ್ತಿರುವ ಮಹಿಳೆಯರು ಭವಿಷ್ಯದಲ್ಲಿ ಗಂಭೀರ ಅಪರಾಧಗಳನ್ನು ಮಾಡುವ ಸಾಧ್ಯತೆಗಳಿರುತ್ತವೆ. ಇದನ್ನು ಸೈಬರ್ ಕ್ರೈಂ ಎಂದೂ ವ್ಯಾಖ್ಯಾನಿಸಲಾಗುತ್ತಿದೆ. ‘ಇನ್ ದ ಕ್ಯಾಂಪಸ್: ಚೀನಾ ಹೈ ಟೆಕ್ ಪೆನಲ್’ (In The Camps: China’s High-Tech Penal Colony) ಎಂಬ ಪುಸ್ತಕದಲ್ಲಿ ಚೀನಾದ ವರ್ತನೆಯನ್ನು ಬಹಿರಂಗಗೊಳಿಸಲಾಗಿದೆ.
ಈ ಪುಸ್ತಕದ ಬಗ್ಗೆ ‘ಬ್ಯುಸಿನೆಸ್ ಇನ್ ಸೈಡರ್’ ಲೇಖನವೊಂದನ್ನ ಪ್ರಕಟಿಸಿದೆ. ಚೀನಾದಲ್ಲಿ ಸಾರ್ವಜನಿಕರು ವಾಟ್ಸಪ್ ಮತ್ತು ಜಿ ಮೇಲ್ ಬಳಸುವಂತಿಲ್ಲ. ಕಾರಣ ಇವೆರಡೂ ಸರ್ಕಾರಿ ಪ್ಲಾಟ್‍ಫಾರಂಗಳು. ಆದರೆ ಕೆಲವರು ವರ್ಚುವಲ್ ಪ್ರೈವೇಟ್ ನೆಟ್‍ವರ್ಕ್ Virtual Private Network) ಮೂಲಕ ಈ ಎರಡೂ ಪ್ಲಾಟ್‍ಫಾರಂಗಳನ್ನು ಬಳಸುತ್ತಿದ್ದಾರೆ. ವಾಷಿಂಗ್ಟನ್ ನಲ್ಲಿದ್ದ ಚೀನಾ ವಿದ್ಯಾರ್ಥಿನಿ ಶಿನಿಜಿಂಯಾಂಗ್ ಚೀನಾಕ್ಕೆ ತೆರಳಿದ್ದರು. ಅಲ್ಲಿ ವಾಟ್ಸಪ್ ಮತ್ತು ಜಿ ಮೇಲ್ ಬಳಸುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿನಿಯನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು. 2017ರಲ್ಲಿ ಇದು ಕೊನೆಯ ಘಟನೆಯಾಗಿತ್ತು. ವೇರಾ ಜೋವಾ ಹೆಸರಿನ ವಿದ್ಯಾರ್ಥಿ ಪ್ರಕಾರ 2018ರ ಹೊಸ ವರ್ಷದವರೆಗೂ ಜೈಲಿನಲ್ಲಿದ್ದಳು.
ಆರು ತಿಂಗಳ ನಂತರ ಬಿಡುಗಡೆ:
ವಾಟ್ಸಪ್ ಮತ್ತು ಜಿ ಮೇಲ್ ಬಳಸಿದ ಪರಿಣಾಮ ವೇರಾ ಜೋವಾ ಆರು ತಿಂಗಳು ಜೈಲುವಾಸ ಅನುಭವಿಸುವಂತಾಯ್ತು. ಆರು ತಿಂಗಳ ಬಳಿಕ ಕಾನೂನು ನಿಯಮಗಳನ್ನು ಪಾಲಿಸಬೇಕು, ಪ್ರತಿನಿತ್ಯ ಸ್ಥಳೀಯ ಪೊಲೀಸ್ ಠಾಣೆಯ ಮುಂದೆ ಹಾಜರಾಗಬೇಕು ಎಂಬ ಷರತ್ತುಗಳನ್ನು ಹಾಕಿ ವೇರಾ ಜೋವಾಗೆ ಜಾಮೀನು ನೀಡಲಾಗಿತ್ತು. ಚೀನಾದಲ್ಲಿ ಉಯ್ಗಿರ್ ಮತ್ತು ಹುಯಿ ಎಂಬ ಎರಡು ಮುಸ್ಲಿಂ ಸಮುದಾಯಗಳಿವೆ. ಈ ಎರಡೂ ಸಮುದಾಯಗಳ ಮೇಲೆ ಚೀನಾ ಪೊಲೀಸ್ ಹದ್ದಿನ ಕಣ್ಣು ಇರಿಸಿದೆ. ಇದುವರೆಗೂ ಸುಮಾರು 10 ಲಕ್ಷ ಚೀನಿ ಮುಸ್ಲಿಮರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ನಾನು ವಾಟ್ಸಪ್ ಆಯಪ್ ಇನ್ ಸ್ಟಾಲ್ ಮಾಡಿಕೊಂಡಿದ್ದರಿಂದ ನನ್ನನ್ನು ಬಂಧಿಸಲಾಯ್ತು. ನಾನು ವಾಟ್ಸಪ್ ನಲ್ಲಿ ಕಜಕ್‍ಸ್ತಾನದಲ್ಲಿರುವ ಸಂಬಂಧಿ ಜೊತೆ ಚಾಟ್ ಮಾಡುತ್ತಿದ್ದೆ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳೆ ಹೇಳಿಕೆ ನೀಡಿದ್ದಾರೆ. ಮತ್ತೊಬ್ಬ ಮಹಿಳೆ ಮಾತನಾಡಿ, ಮಗುವಿನ ಶಾಲೆಗಾಗಿ ಜಿಮೇಲ್ ಮೂಲಕ ಲಾಗಿನ್ ಆಗಿದ್ದರಿಂದ ನನ್ನನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಹೇಳಿದ್ದಾರೆ
ಜೋವಾ ಪ್ರಕಾರ ತಮ್ಮ ಜೊತೆ 11 ಮುಸ್ಲಿಂ ಮಹಿಳೆಯರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಚೀನಾ ಸರ್ಕಾರ 2017ರಲ್ಲಿ ಪ್ರಿ ಕ್ರಿಮಿನಿಲ್ಸ್ ಕಾನೂನು ಜಾರಿಗೆ ತಂದಿದ್ದು, ಇದರ ಆಧಾರದ ಮೇಲೆ ಸಾವಿರಾರು ಜನರನ್ನು ಚೀನಾ ಪೊಲೀಸರು ಮತ್ತು ಸೈನಿಕರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.
ವಶಕ್ಕೆ ಪಡೆದುಕೊಳ್ಳುತ್ತಿರುವ ಜನರ ಮೇಲೆ ಚೀನಾ ಸರ್ಕಾರ ಹೈಟೆಕ್ ಮಾನಿಟರಿಂಗ್ ಆರೋಪಗಳನ್ನು ಮಾಡುತ್ತಿದೆ. ಜನರು ಸರ್ಕಾರದ ವಿರುದ್ಧ ಯಾವುದೇ ಆನ್‍ಲೈನ್ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ಯಾರೋ ಒಬ್ಬರ ಮೇಲೆ ಸಣ್ಣ ಅನುಮಾನ ಮೂಡಿದರೂ ಅವರನ್ನು ಪ್ರಿ ಕ್ರಿಮಿನಿಲ್ಸ್ ಕಾನೂನಿನಡಿಯಲ್ಲಿ ವಶಕ್ಕೆ ಪಡೆಯಲಾಗುತ್ತದೆ. ಇಂಟರ್ನೆಟ್ ಪೂರೈಕೆದಾರರು ತಮ್ಮ ಬಳಕೆದಾರರ ಡೇಟಾವನ್ನು ಸರ್ಕಾರದ ಜೊತೆ ಹಂಚಿಕೊಳ್ಳಬೇಕು ಎಂಬುಬುವುದು ಪ್ರಿ ಕ್ರಿಮಿನಲ್ಸ್ ನಿಯಮದಲ್ಲಿದೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement