ಗಂಡನ ಮನೆಯಲ್ಲಿ ಶೌಚಾಲಯವಿಲ್ಲ ಎಂದು ಗಂಡನಿಗೆ ವಿಚ್ಛೇದನ ನೀಡಿದ ಪತ್ನಿ..!

ಗಾಂಧಿನಗರ: ಗುಜರಾತಿ​​ನ ಗಾಂಧಿನಗರದ ರಂದೇಶನ್​ ಗ್ರಾಮದ ದಂಪತಿ ಶೌಚಾಲಯದ ವಿಚಾರವಾಗಿ ವಿಚ್ಛೇದನ​ ಪಡೆದಿದ್ದಾರೆ.
ಎಂಟು ವರ್ಷಗಳ ಹಿಂದೆ ಯುವತಿ ರಂದೇಶನ್​​ ಗ್ರಾಮದ ಯುವಕನನ್ನು ಮದುವೆಯಾಗಿದ್ದರು. ಆದರೆ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲ ಎಂದು ಯುವತಿ ವಿಚ್ಛೇದನ ಪಡೆದಿದ್ದಾರೆ. ಯುವತಿ ಹತ್ತನೇ ತರಗತಿವರೆಗೆ ಓದಿದ್ದಾರೆ. ಗಂಡನ ಮನೆಯವರಿಗೆ 6 ಎಕರೆ ಭೂಮಿ ಇದ್ದು, ತಿಂಗಳಿಗೆ 10 ಸಾವಿರ ರೂ. ಆದಾಯ ಬರುತ್ತಿತ್ತು. ಆದರೂ ಕೂಡ ಶೌಚಾಲಯ ಕಟ್ಟಿಸಿರಲಿಲ್ಲವಂತೆ.
ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಯುವತಿ ಎಷ್ಟೇ ಹೇಳಿದ್ರೂ ಶೌಚಾಲಯ ಕಟ್ಟಿಸದ ಕಾರಣ ಬೇಸತ್ತ ಪತ್ನಿ ತವರು ಮನೆಗೆ ಹೋಗಿದ್ದಾಳೆ. ಮತ್ತೆ ಹೇಗೋ ರಾಜಿ ಸಂಧಾನ ಮಾಡಿಕೊಂಡು ಪತಿಯು ಆಕೆಯನ್ನು ಮನೆಗೆ ಕರೆತಂದಿದ್ದ. ಬಳಿಕ ನಿತ್ಯ ಆಕೆಗೆ ಚಿತ್ರಹಿಂಸೆ ನೀಡಲು ಶುರು ಮಾಡಿದ. ಇದರಿಂದ ಮನನೊಂದ ಪತ್ನಿ ಠಾಣೆಗೆ ದೂರು ನೀಡಿದ್ದರು. ಕೊನೆಗೆ ಇನ್ನು ಸಾಧ್ಯವಿಲ್ಲ ಎಂದು ಪತ್ನಿ ಈಗ ಗಂಡನಿಂದ ವಿಚ್ಛೇದನ ಪಡೆದಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ