ಮರಿಯಾನೆ ತಂಟೆಗೆ ಬಂದ ಮೊಸಳೆಯನ್ನು ಕೊಂದೇ ಹಾಕಿದ ತಾಯಿ ಆನೆ.. ಕೋಪ ನೋಡಿದ್ರೆ ಬೆರಗಾಗ್ತೀರಾ..! ದೃಶ್ಯ ವಿಡಿಯೊದಲ್ಲಿ ಸೆರೆ

ಕೆಲವೊಂದು ಪ್ರಾಣಿಗಳು ಶಕ್ತಿಶಾಲಿಯಾಗಿದ್ದರೂ ಬೇರೆ ಪ್ರಾಣಿಗಳ ಮೇಲೆ ದಾಳಿ ಮಾಡುವುದಿಲ್ಲ. ತಮ್ಮಷ್ಟಕ್ಕೆ ತಾವು ಇರುತ್ತವೆ. ಅದರೆ ಕೆಣಕಿದರೆ ಅಥವಾ ಅದರ ಮರಿಗಳ ಸುದ್ದಿಗೆ ಬಂದರೆ ದಾಳಿ ಮಾಡುತ್ತವೆ.. ಇಂಥ ಪ್ರಾಣಿಗಳಲ್ಲಿ ಆನೆ ಪ್ರಮುಖವಾದದ್ದು. ಹಿಂಡುಗಳಲ್ಲೇ ವಾಸಿಸುವ ಆನೆಗಳು ಸಾಮಾನ್ಯವಾಗಿ ಯಾವ ಪ್ರಾಣಿಗಳ ತಂಡೆಗೂ ಹೋಗುವುದಿಲ್ಲ,. ಅವುಗಳಿಗೆ ಸಿಟ್ಟು ಬಂದರೆ ಉಳಿದ ಪ್ರಾಣಿಗಳಿಗೆ ದೂರ ಹೋಗುವಂತೆ ಕೂಗಿ ಮುನ್ಸೂಚನೆ ನೀಡುತ್ತದೆ. ಮುನ್ಸೂನೆಯನ್ನು ಕೇಳದಿದ್ದರೆ ಮಾತ್ರ ದಾಳಿ ಮಾಡುತ್ತವೆ. ಅದರ ನೆನಪಿನ ಶಕ್ತಿಯೂ ಅಗಾಧ.
ಆನೆಗಳು ದಾಳಿ ಮಾಡುವುದು ಒಂದೋ ಗಂಡಿಗೆ ಮದವೇರಿದಾಗ ಅಥವಾ ಆನೆ ಮರಿ ಹಾಕಿದಾಗ. ಈ ಎರಡೂ ಸಮಯದಲ್ಲಿ ಆನೆ ಬಹಳ ಅಪಾಯಕಾರಿ ಎನ್ನುತ್ತಾರೆ ಪ್ರಾಣಿ ತಜ್ಞರು. ಇಂಥದ್ದೇ ಒಂದು ಘಟನೆಯಲ್ಲಿ ಮರಿಯಾನೆ ಸುದ್ದಿಗೆ ಹೋದ ಮೊಸಳೆ ಪ್ರಾಣವನ್ನೇ ಕಳೆದುಕೊಂಡ ವಿಡಿಯೋ ವೈರಲ್‌ ಆಗಿದೆ. 1 ನಿಮಿಷದ 4೦ ಸೆಕೆಂಡಿನ ವಿಡಿಯೊದಲ್ಲಿ ಮೊಸಳೆಯನ್ನು ತಾಯಿ ಆನೆಯೊಂದು ತನ್ನ ಕಾಲಿನಿಂದ ತುಳಿದು, ಹಣೆಯಿಂದ ಹೊಸಕಿ ಕೊಂದು ಹಾಕಿದೆ. ಈ ವಿಡಿಯೋ ಅಂತರ್ಜಾಲದಲ್ಲಿ ಸಖತ್​ ವೈರಲ್ ​(Viral) ಆಗುತ್ತಿದೆ.

ಮರಿ ಸುದ್ದಿಗೆ ತಂಟೆಗೆ ಬಂದ ಮೊಸಳೆಗೆ ಬಂತು ಸಾವು..:
ಈ ಘಟನೆ ಆಫ್ರಿಕಾದ ಜಾಂಬಿಯಾದ ಸಫಾರಿಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಸಫಾರಿಗೆ ಬಂದಿರುವಹ್ಯಾನ್ಸ್ ಹೆನ್ರಿಕ್ ಎಂಬುವವರು ಅಪರೂಪದ ದೃಶ್ಯದ ವಿಡಿಯೋಮಾಡಿ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜಾಂಬೆಜಿ ಕಣಿವೆಯ ಬೈನ್ಸ್ ನದಿಯ ಹತ್ತಿರ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಹೆಣ್ಣು ಆನೆಯೊಂದು ತನ್ನ ದೈತ್ಯ ಕಾಲಿನಿಂದ ಮೊಸಳೆ ಕೊಲ್ಲಲು ತನ್ನ ಸೊಂಡಿಲನ್ನು ಬಳಸುವುದರೊಂದಿಗೆ ವಿಡಿಯೋ ಶುರುವಾಗುತ್ತದೆ. ಮೊಸಳೆಯು ಆನೆಯ ಹೊಡೆತಕ್ಕೆ ತನ್ನನ್ನು ತಾನು ಕಾಪಾಡಿಕೊಳ್ಳಲಾಗದೆ ಸ್ವಲ್ಪವೂ ಅಲುಗಾಡದೆ ಹಾಗೆ ನೀರಿನಲ್ಲಿರುವುದನ್ನು ನೋಡಬಹುದು. ಆನೆ ಸೊಂಡಿಲಿನಿಂದ ಎಳೆದು ಹಿಡಿದು, ತನ್ನ ಹಣೆಯಿಂದ ಹೊಸಕಿ, ಕಾಲಿನಿಂದ ತುಳಿಯುತ್ತದೆ. ಕೊನೆಯಲ್ಲಿ, ಆನೆ ತನ್ನ ಸೊಂಡಿಲನ್ನು ಬಳಸಿ ಮೊಸಳೆಯ ಬಾಲ ಎತ್ತಿಕೊಂಡು ತನ್ನ ಹಣೆಯಿಂದ ಮೊಸಳೆಯನ್ನು ಹೊಸಕಿ ಕೊಂದೇ ಬಿಡುತ್ತದೆ.
ಆನೆಗಳು ನೀರು ಕುಡಿಯಲು ನದಿಗೆ ಇಳಿದಾಗ ಈ ಮೊಸಳೆಯು ಮರಿ ಆನೆಯ ಮೇಲೆ ಕಣ್ಣಿ ಹಾಕಿ ಅದರತ್ತ ಧಾವಿಸಿದ್ದೇ ಮೊಸಳೆ ಸಾವಿಗೆ ಕಾರಣವಾಯಿತು.
ಮೊಸಳೆಯ ಕಪಟ ಗೊತ್ತಾಗಿ ತಾಯಿ ಆನೆ ಏಕಾಏಕಿ ಮೊಸಳೆಯ ಮೇಲೆ ದಾಳಿ ಮಾಡಿದೆ. ತಾಯಿ ಆನೆಯ ಕೋಪ ಎಷ್ಟಿತ್ತೆಂದರೆ ಮೊಸಳೆ ಸತ್ತು ಹೋದರೂ ಬಿಡದೆ ಕಾಲಿನಿಂದ ತುಳಿಯುತ್ತಲೇ ಇತ್ತು. ಆನೆ ಸ್ವಭಾವತ ಶಾಂತ ಪ್ರಾಣಿ. ಆದರೆ ಅದರ ತಂಟೆಗೆ ಬಂದರೆ ಮುಗಿಯಿತು. ಮೊಸಳೆಗೆ ನೀರಿನಲ್ಲಿ ತಪ್ಪಿಸಿಕೊಳ್ಳಲು ಅವಕಾಶವಿದ್ದರೂ ಅದನ್ನು ಬಿಡೆದೆ ಕೊಂದು ಆನೆ ಅದನ್ನು ಹಾಕಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ದುಬೈನಲ್ಲಿ 1.5 ವರ್ಷಕ್ಕೆ ಬೀಳುವಷ್ಟು ಮಳೆ ಒಂದೇ ದಿನ ಸುರಿಯಿತು...! ಜನಜೀವನ ಅಸ್ತವ್ಯಸ್ತ; ರಸ್ತೆಗಳು ಜಲಾವೃತ, ವಿಮಾನಗಳ ಹಾರಾಟ ರದ್ದು

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement