ಉತ್ತರಾಖಂಡದಲ್ಲಿ ದುರ್ಘಟನೆ: ಹಿಮಪಾತದಿಂದ ನಾಪತ್ತೆಯಾಗಿದ್ದ 17 ಚಾರಣಿಗರಲ್ಲಿ 12 ಮಂದಿ ಶವವಾಗಿ ಪತ್ತೆ

ನವದೆಹಲಿ: ಭಾರೀ ಪ್ರಮಾಣದ ಹಿಮಪಾತದಿಂದ ಉತ್ತರಾಖಂಡದಲ್ಲಿ ಅಕ್ಟೋಬರ್​ 18ರಂದು ದಾರಿ ತಪ್ಪಿದ್ದ 17 ಚಾರಣಿಗರಲ್ಲಿ 12 ಮಂದಿಯ ಮೃತದೇಹವನ್ನು ವಾಯುಸೇನೆ ವಶಕ್ಕೆ ಪಡದುಕೊಂಡಿದ್ದು, ತನ್ನ ಬಹುದೊಡ್ಡ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದೆ.
ಅ.18ರಂದು ಮಾರ್ಗದರ್ಶಕ, ಹಮಾಲರು ಮತ್ತು ಪ್ರವಾಸಿಗರು ಸೇರಿ 17 ಜನರು ಚಾರಣಕ್ಕೆ ತೆರಳಿದ್ದರು. ಆದರೆ, ಹಿಮಪಾತದಿಂದ ಎಲ್ಲರು ದಾರಿತಪ್ಪಿದ್ದರು. ಸಮುದ್ರ ಮಟ್ಟದಿಂದ 17,000 ಅಡಿ ಎತ್ತರವಿರುವ ಲಂಖಗಾ ಪಾಸ್​ ನಲ್ಲಿ ಈ ಘಟನೆ ನಡೆದಿದೆ. ದರೆ, ಪ್ರತಿಕೂಲ ಹವಾಮಾನದಿಂದ ಉಂಟಾದ ಹಿಮಪಾತದಿಂದ ಎಲ್ಲರು ದಾರಿತಪ್ಪಿದ್ದರು. ಅ.20ರಂದು ಅಧಿಕಾರಿಗಳು ಮಾಡಿದ ತುರ್ತು ಕರೆಗೆ ಸ್ಪಂದಿಸಿದ ಭಾರತೀಯ ವಾಯುಸೇನೆ, ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್​ಎಚ್​) ಅನ್ನು ಘಟನಾ ಸ್ಥಳಕ್ಕೆ ತೆರಳಲು ಬಳಸಿತ್ತು.
ವಾಯುಸೇನೆಯು ಅ.20ರಂದು ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಈ ಕಾರ್ಯಕ್ಕೆ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣ ತಂಡ ಸಾಥ್ ನೀಡಿದೆ. ಅ.21ರಂದು 15,700 ಅಡಿ ಎತ್ತರದಲ್ಲಿ 4 ಮೃತದೇಹಗಳು ಪತ್ತೆಯಾದರೆ, ಅ.22ರಂದು 16,500 ಅಡಿ ಎತ್ತರದಲ್ಲಿ ಮತ್ತೆ 5 ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಓರ್ವ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ.
ಇನ್ನೂ ಎರಡು ಶವಗಳನ್ನು ಅದೇ ದಿನ ಪತ್ತೆ ಮಾಡಲಾಗಿದ್ದು, ಮೃತದೇಹಗಳನ್ನು ಡೋಗ್ರಾ ಸ್ಕೌಟ್ಸ್, 4 ಅಸ್ಸಾಂ ಮತ್ತು ಎರಡು ಐಟಿಬಿಪಿ ತಂಡಗಳ ಜಂಟಿ ಗಸ್ತು ಮೂಲಕ ನಿತಲ್ ತಾಚ್ ಶಿಬಿರಕ್ಕೆ ಮರಳಿ ತರಲಾಗಿದೆ.
ರಕ್ಷಣಾ ತಂಡಗಳು ಸ್ಥಳೀಯ ಪೊಲೀಸರಿಗೆ ಶವಗಳನ್ನು ಹಸ್ತಾಂತರಿಸಿವೆ. ಬದುಕುಳಿದವರನ್ನು ಉತ್ತರಕಾಶಿಯ ಜಿಲ್ಲಾ ಆಸ್ಪತ್ರೆಗೆ ಕಳುಹಿಸುವ ಮೊದಲು ಹರ್ಸಿಲ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು.
ಉಳಿದ ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಶೋಧ ಕಾರ್ಯವನ್ನು ಎಎಲ್​ಎಚ್​ ಸಿಬ್ಬಂದಿ ಶನಿವಾರ ಮುಂದುವರಿಸಲಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ