ಕುಮಟಾದಲ್ಲಿ ದೂರವಾದ ಬಾಂಬ್‌ ಆತಂಕ ;ಜನತೆ ನಿಟ್ಟುಸಿರು

posted in: ರಾಜ್ಯ | 0

ಕಾರವಾರ : ಉತ್ತರ ಕನ್ನಡ ಜಿಲ್ಲೆ ಕುಮಟಾದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಹಿಂಬದಿ ಆವರಣದಲ್ಲಿ ಬಾಂಬ್ ಮಾದರಿ ವಸ್ತು ಪತ್ತೆಯಾದ ಬೆನ್ನಲ್ಲೇ ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದವರು ತಪಾಸಣೆ ನಡೆಸಿ ವಸ್ತುವನ್ನು ನಿಷ್ಕ್ರಿಯ ಗೊಳಿಸಿದ್ದಾರೆ‌. ಹಾಗೂ ಇದು ಬಾಂಬ್‌ ಅಲ್ಲ, ಅದೇ ಮಾದರಿಯಲ್ಲಿರುವ ವಸ್ತು ಎಂದು ತಿಳಿಸಿದ್ದಾರೆ.
ನಗರದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಹಿಂಬದಿ ಆವರಣದಲ್ಲಿ ಬಾಂಬ್ ಮಾದರಿ ವಸ್ತು ಪತ್ತೆಯಾದ ಸುದ್ದಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು, ಆದರೆ ಈಗ ಈ ಬಗ್ಗೆ ಸಮಾಧಾನದ ಸುದ್ದಿಯೊಂದು ದೊರೆತಿದ್ದು,ಮಂಗಳೂರಿನಿಂದ ಆಗಮಿಸಿದ ಬಾಂಬ್‌ ನಿಷ್ಕ್ರಿಯ ದಳ ಇದನ್ನು ನಿಷ್ಕ್ರಿಯಗೊಳಿಸಿದೆ.
ಬಾಂಬ್ ಮಾದರಿ ವಸ್ತುವಿನಲ್ಲಿ ಪೈಪ್ ಗಳು ಪೇಪರ್ ತುಂಡುಗಳು ,ವಯರ್ ಗಳನ್ನು ಸುತ್ತಿ ಅದಕ್ಕೆ ಷಲ್ ಗಳನ್ನು ಕನೆಕ್ಟ್ ಮಾಡಲಾಗಿತ್ತು. ಅದರ ಜೊತೆಗೆ ಸರ್ಕಿಟ್ ಬೋರ್ಡ ಅನ್ನು ಹಾಕಿ ಬಾಂಬ್ ಮಾದರಿ ತಯಾರು ಮಾಡಿ ಇಡಲಾಗಿತ್ತು. ಸದ್ಯ ಬಾಂಬ್ ಎಂಬ ಆತಂಕ ದೂರವಾಗಿದೆ. ಆದರೆ ಇದನ್ನು ಇಟ್ಟವರು ಯಾರು ಎಂಬ ಬಗ್ಗೆ ತನಿಖೆ ಮುಂದುವರೆದಿದೆ.

ಓದಿರಿ :-   ಪರಿಷತ್ ಚುನಾವಣೆ‌ : ಮೂರೂ ಪಕ್ಷಗಳಿಂದ ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ಸಾಧ್ಯತೆ, ಅಚ್ಚರಿ ಅಭ್ಯರ್ಥಿಯೋ? ಹೈಕಮಾಂಡ್‌ಗೆ ಕಳುಹಿಸಿದ ಪಟ್ಟಿಗೆ ಮಾನ್ಯತೆಯೋ..?

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ