ಎಮ್ಮೆ ಹಾಲು ಕೊಡ್ತಿಲ್ಲ, ಯಾರೋ ಮಾಟ ಮಾಡಿದ್ದಾರೆಂದು ಠಾಣೆಗೆ ಬಂದು ದೂರು ನೀಡಿದ ರೈತ…!

ನವದೆಹಲಿ: ಒಂದು ವಿಲಕ್ಷಣ ಘಟನೆಯಲ್ಲಿ ಮಧ್ಯಪ್ರದೇಶದ ಭಿಂದ್‌ನ ರೈತ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲವೆಂದು ಪೊಲೀಸ್‌ ಠಾಣೆಗೆ ಬಂದು ದೂರು ದಾಖಲಿದ್ದಾನೆ…!
ತನ್ನ ಅಸಾಮಾನ್ಯ ದೂರಿನಲ್ಲಿ ಈ ರೈತ ಯಾರೋ ವಾಮಾಚಾರ ಮಾಡಿದ್ದರಿಂದ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ತಿಳಿಸಿದ್ದಾನೆ..!!
ಶನಿವಾರ ನಯಗಾಂವ್ ಗ್ರಾಮದಲ್ಲಿ ರೈತ ಪೊಲೀಸರಿಂದ ನೆರವು ಕೋರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗ್ರಾಮಸ್ಥ ಬಾಬುಲಾಲ್ ಜಾತವ್ (45) ಶನಿವಾರ ನಯಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಕಳೆದ ಕೆಲವು ದಿನಗಳಿಂದ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಅರವಿಂದ್ ಷಾ ಹೇಳಿದ್ದಾರೆ.
ದೂರುದಾರರ ಪ್ರಕಾರ, ಕೆಲವು ಗ್ರಾಮಸ್ಥರು ವಾಮಾಚಾರ ಮಾಡಿದ್ದಾರೆ, ಅದಕ್ಕಾಗಿ ಹಾಲುಕೊಡುತ್ತಿಲ್ಲ ಎಂದು ಹೇಳಿದ್ದಾರೆ. ನಂತರ ಈ ರೈತ ಪೊಲೀಸ್‌ ಠಾಣೆಗೆ ಬಂದು ದೂರು ದಾಖಲಿಸಿದ್ದಾನೆ ಎಂದು ಅವರು ಹೇಳಿದ್ದಾರೆ.
ದೂರು ದಾಖಲಿಸಿದ ನಾಲ್ಕು ತಾಸುಗಳ ನಂತರ ಮತ್ತೊಮ್ಮೆ ಪೊಲೀಸರ ಸಹಾಯವನ್ನು ಕೋರಿ ರೈತ ತನ್ನ ಎಮ್ಮೆಯೊಂದಿಗೇ ಠಾಣೆಗೆ ಬಂದಿದ್ದಾನೆ.
“ಗ್ರಾಮಸ್ಥರಿಗೆ ಕೆಲವು ಪಶುವೈದ್ಯರ ಸಲಹೆ ಪಡೆದು ಸಹಾಯ ಮಾಡಲು ನಾನು ಪೊಲೀಸ್ ಠಾಣೆಯ ಉಸ್ತುವಾರಿಗೆ ಹೇಳಿದ್ದೆ. ಅದರ ನಂತರ ಭಾನುವಾರ ಬೆಳಗ್ಗೆ ಎಮ್ಮೆ ಹಾಲು ಕೊಡುತ್ತಿದೆ ಎಂದು ಮತ್ತೆ ಇಂದು ಪೊಲೀಸ್ ಠಾಣೆಗೆ ಬಂದು ಗ್ರಾಮಸ್ಥರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಡಿಎಸ್ಪಿ ಶಾ ಹೇಳಿದರು.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement