ನಾಯಿಪಾಡು ಎನ್ನಬೇಡಿ.. .ಯಾಕೆಂದ್ರೆ ಈ ನಾಯಿ ಆಸ್ತಿ ಕೇಳಿದ್ರೆ ಬೆಚ್ಚಿ ಬೀಳ್ತೀರಿ.. ಅದರ ಒಂದು ಭವನ 238 ಕೋಟಿ ರೂ.ಗೆ ಮಾರಾಟ..! ವೀಕ್ಷಿಸಿ

ನಾಯಿ ಪಾಡು ಎಂದು ಮೂಗು ಮುರಿಯಬೇಡಿ. ಯಾಕೆಂದರೆ ಇಲ್ಲೊಂದು ನಾಯಿಯ ಆಸ್ತಿ ಕೇಳಿದರೆ ಎಂಥವನಾದರೂ ಹೌಹಾರಲೇಬೇಕು. ಅದರ ಆಸ್ತಿ ಒಂದು ಕೋಟಿಯಲ್ಲ, ಹತ್ತು ಕೋಟಿಯಲ್ಲ, ನೂರು ಕೋಟಿಯಲ್ಲ.. ಸಾವರ ಕೋಟಿಯಲ್ಲ…ಈ ನಾಯಿಯ ಬಳಿ ಆಸ್ತಿ 3715 ಕೋಟಿ ರೂ.ಗಳು..(500 ಮಿಲಿಯನ್ ಡಾಲರ್‌)…! ಇದು ಈಗ ವಿಶ್ವದ ಅತ್ಯಂತ ಶ್ರೀಮಂತ ನಾಯಿ..!!
ಈ ನಾಐಇ ಇರುವುದು ಅಮೆರಿಕದ ಮಿಯಾಮಿಯಲ್ಲಿ, ವಿಶೇಷವೆಂದರೆ ಈ ನಾಯಿಗೆ ಈ ಆಸ್ತಿ ಅನುವಂಶಿಕವಾಗಿ ಬಂದಿದೆಯಂತೆ. ಅಂದರೆ ಪಿತ್ರಾರ್ಜಿತವಾಗಿ ಬಂದಿದ್ದು..!
ಈ ಜರ್ಮನ್‌ ಶೆಫರ್ಡ್‌ ನಾಯಿಯ ಹೆಸರು ಗುಂಥರ್ -VI. ಈಗ ಅದು ತನ್ನ ವಿಶಾಲವಾದ ಮಿಯಾಮಿ ಭವನವನ್ನು $32 ಮಿಲಿಯನ್ (ಅಂದಾಜು 238 ಕೋಟಿ ರೂ.ಗಳು) ಗೆ ಮಾರಾಟ ಮಾಡುತ್ತಿದೆ…!
ಈ ನಾಯಿಗೆ ತನ್ನ ಅಜ್ಜ ಗುಂಥರ್ IVರಿಂದ $500 ಮಿಲಿಯನ್ ಸಂಪತ್ತನ್ನು ಆನುವಂಶಿಕವಾಗಿ ಪಡೆದಿದೆಯಂತೆ. ಗುಂಥರ್ ಕುಟುಂಬದಲ್ಲಿ ಈಗ ಸಂಪತ್ತು ಹೆಚ್ಚುತ್ತ ಸಾಗುತ್ತಿದೆ !
ಸುದ್ದಿ ವರದಿಗಳ ಪ್ರಕಾರ, ಜರ್ಮನ್ ಕೌಂಟೆಸ್ ಕಾರ್ಲೋಟಾ ಲೈಬೆನ್‌ಸ್ಟೈನ್, 1992 ರಲ್ಲಿ ನಿಧನರಾದಾಗ, ತನ್ನ ನಾಯಿ ಗುಂಥರ್ IIIಗೆ$ 58 ಮಿಲಿಯನ್ ಮೌಲ್ಯ ಡಾಲರ್ ಟ್ರಸ್ಟ್ ಉಡುಗೊರೆ ಕೊಟ್ಟ. ಅಂದರೆ ಭಾರತದ ರೂಪಾಯಿಗಳ ಪ್ರಕಾರ ಸುಮಾರು 430 ಕೋಟಿ ರೂಪಾಯಿಗಳು..! ಇದರ ನಂತರ, ಈ ನಾಯಿ ಪರಂಪರೆ ಮುಂದುವರಿಯಿತು. ಮತ್ತು ಸಂಪತ್ತು ಹೆಚ್ಚಾಗುತ್ತ ಹೋಯಿತು. ಈಗ ಅದರ ಸಂಪತ್ತು 3715 ಕೋಟಿ ರೂ.ಗಳು ( 500 ಮಿಲಿಯನ್ ಅಮೆರಿನ್‌ ಡಾಲರ್‌).  ನಿರ್ವಹಿಸುವವರ ಗುಂಪು ಪಾರಂಪರಿಕವಾಗಿ ಹಾಗೂ ಅನುಕ್ರಮವಾಗಿ ನಾಯಿಗಳ ಶ್ರೀಮಂತ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ. Wion ನಲ್ಲಿನ ವರದಿಯ ಪ್ರಕಾರ, ಎಸ್ಟೇಟ್ ಅನ್ನು ದಿ ಗುಂಥರ್ ಗ್ರೂಪ್ ಅಡಿ ಇಟಾಲಿಯನ್ ಉದ್ಯಮಿಗಳ ಗುಂಪು ನಿರ್ವಹಿಸುತ್ತದೆ, ಆದರೆ ಮಿಯಾಮಿಯಲ್ಲಿರುವ ಮಹಲು ಗ್ರೂಪ್‌ನ ಭಾಗವಾಗಿರುವ ದಿ ಗುಂಥರ್ ಕಾರ್ಪೊರೇಶನ್‌ನ ಮಾಲೀಕತ್ವದಲ್ಲಿದೆ ಮತ್ತು ಅದೇ ನಿರ್ವಹಿಸುತ್ತದೆ.
ಈ ಟಸ್ಕನ್-ಶೈಲಿಯ ದೊಡ್ಡ ಮಹಲು ಒಮ್ಮೆ ಮಡೋನಾಗೆ ಸೇರಿತ್ತು. ಆದರೆ 2000 ರಲ್ಲಿ ಅವಳಿಂದ $7.5 ಮಿಲಿಯನ್‌ಗೆ ಇದನ್ನು ಖರೀದಿಸಲಾಯಿತು. 1928 ರಲ್ಲಿ ನಿರ್ಮಿಸಲಾದ ಈ ಮಹಲು ಐಷಾರಾಮಿ ಮಹಲಾಗಿದೆ. ಇದು ಒಂಬತ್ತು ಮಲಗುವ ಕೋಣೆಗಳು ಮತ್ತು 8 ಸ್ನಾನಗೃಹಗಳನ್ನು ಹೊಂದಿದೆ. ಒಳಾಂಗಣದಲ್ಲಿ ಭವ್ಯವಾದ ಹವಳದ ಮೆಟ್ಟಿಲು, ಕಮಾನಿನ ಕಲ್ಲಿನ ಪ್ರವೇಶದ್ವಾರಗಳು, ಬೆಂಕಿಗೂಡುಗಳು ಮತ್ತು ಸೇವಕರ ಕ್ವಾರ್ಟರ್ಸ್ ಸೇರಿವೆ. ವರದಿಗಳ ಪ್ರಕಾರ, ಬಿಸ್ಕೇನ್ ಬೇ ಮೇಲೆ ಹೊರಾಂಗಣ ಈಜುಕೊಳ ಸಹ ಇದೆ. ಎಸ್ಟೇಟ್ ಖಾಸಗಿ ಗೇಟೆಡ್ ನಿವಾಸದಲ್ಲಿದೆ. ಅಕ್ಕಪಕ್ಕ ಪ್ರತಿಷ್ಠಿತ ನೆರೆಹೊರೆಯವರಿದ್ದಾರೆ. ಹೊರಾಂಗಣವು ಒಳಾಂಗಣದಂತೆಯೇ ಅದ್ಭುತವಾಗಿದೆ.
ದಿ ಅಸ್ಸೌಲಿನ್ ತಂಡದ ರೂಥಿ ಮತ್ತು ಎಥಾನ್ ಅಸ್ಸೌಲಿನ್ ಎಂಬವರು ಈ ಮನೆ ಮಾರಾಟದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರಿಗೆ ಈ ಮನೆಯ ಮಾಲೀಕರು ನಾಯಿ ಎಂದು ಹೇಳಿದಾಗ ಅದನ್ನುತಮಗೆ ನಂಬಲು ಸಾಧ್ಯವಾಗಲಿಲ್ಲ ಎಂದು ರೂಥಿ ತಿಳಿಸಿದ್ದಾರೆ.

ನಾವು ಲೆಕ್ಕವಿಲ್ಲದಷ್ಟು ಕೋಟ್ಯಂತರ ಮೌಲ್ಯದ ಮನೆಗಳನ್ನು ಮಾರಾಟ ಮಾಡಿದ್ದೇವೆ, ಆದರೆ ನಾಯಿ ಒಡೆತನದ ಮನೆಯನ್ನು ಮಾರಾಟ ಮಾಡುವುದು ಖಂಡಿತವಾಗಿಯೂ ಮೊದಲನೆಯದು. ಆರಂಭದಲ್ಲಿ ನಾಯಿಯೊಂದು ಆಸ್ತಿಯನ್ನು ಹೊಂದಿದೆ ಎಂದು ನಿರ್ವಾಹಕರು ನನಗೆ ಹೇಳಿದಾಗ, ನಾಯಿಗೆ ಇಷ್ಟೊಂದು ಆಸ್ತಿಯೇ ಎಂದು ನಾನು ಅದನ್ನು ನಂಬಲಿಲ್ಲ ಎಂದು ಅವರು ಹೇಳುತ್ತಾರೆ.
ನಾಯಿ ಗುಂಥರ್ -VI ಅಲ್ಟ್ರಾ-ಖಾಸಗಿ ಗೇಟೆಡ್ ಎಸ್ಟೇಟ್ ರಾಯಲ್ ಪಾಮ್ ಮರಗಳು, ಸೊಂಪಾದ ಭೂದೃಶ್ಯ ಮತ್ತು ಗಾಳಿ ಹಾಗೂ ವೀಕ್ಷಣೆ ಇರುವ ವಿಸ್ತಾರವಾದ ಜಾಗದಲ್ಲಿ ಗಾಂಭೀರ್ಯದಲ್ಲಿ ಕುಳಿತುಕೊಳ್ಳುತ್ತದೆ.
ಗುಂಥರ್ -VI (ನಾಯಿ) ಖಂಡಿತವಾಗಿಯೂ ‘ಇದು ನಾಯಿ ಪಾಡು’ ಎಂಬುದಕ್ಕೆ ಸಂಪೂರ್ಣವಾಗಿ ಹೊಸ ಅರ್ಥವನ್ನು ನೀಡಿದೆ..!
ಏನಂತೀರಿ..?

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ