ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆ ಮೇಲೆ ಐಸಿಸ್ ಉಗ್ರರ ಕಣ್ಣು?: ತಲೆಯಿಲ್ಲದ ಶಿವನ ಪ್ರತಿಮೆ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಟ

ಕಾರವಾರ: ಪ್ರಸಿದ್ಧ ಪ್ರವಾಸಿ ತಾಣ ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು ಬಿದ್ದಿದೆಯೇ ಎಂಬ ಪ್ರಶ್ನೆ ಮೂಡುವ ಮಾಹಿತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದೇಶದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಭಟ್ಕಳ ತಾಲೂಕಿನ ಮುರ್ಡೇಶ್ವರದ ಶಿವನ ಬೃಹತ್ ಪ್ರತಿಮೆಯನ್ನು ವಿಕೃತಗೊಳಿಸಿರುವ ಫೊಟೋ ಒಂದನ್ನು ಐಸಿಸ್ ಸಂಘಟನೆಯ ಮ್ಯಾಗಜೀನ್​ನ ಕವರ್ … Continued

ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆ ಮುಂದೂಡುವಂತೆ ಮುಂಬೈ ನ್ಯಾಯಾಲಯಕ್ಕೆ ಸೂಚಿಸಿದ ಬಾಂಬೆ ಹೈಕೋರ್ಟ್

ಮುಂಬೈ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಸದಸ್ಯರೊಬ್ಬರು ಹೂಡಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್‌ 20ರ ವರೆಗೆ ಮುಂದೂಡುವಂತೆ ಸೋಮವಾರ ಬಾಂಬೆ ಹೈಕೋರ್ಟ್‌ ಆದೇಶಿಸಿದೆ. ರಾಜಸ್ಥಾನದಲ್ಲಿ 2018ರಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಕಮ್ಯಾಂಡರ್‌ ಇನ್‌ ಥೀಫ್‌’ (ಕಳ್ಳರ ಮುಖ್ಯಸ್ಥ) ಎಂದು ರಾಹುಲ್‌ ಗಾಂಧಿ ಕರೆದಿದ್ದರು ಎಂದು ಆರೋಪಿಸಿ … Continued

ಸಮೀರ್ ವಾಂಖೆಡೆ-ಕುಟುಂಬದ ವಿರುದ್ಧ ನವಾಬ್ ಮಲಿಕ್ ಹೇಳಿಕೆ ನೀಡದಂತೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಕಾರ

ಮುಂಬೈ: ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ಮತ್ತವರ ಕುಟುಂಬದ ವಿರುದ್ಧ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು ಸಾರ್ವಜನಿಕ ತಾಣಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಹೇಳಿಕೆ ನೀಡದಂತೆ ತಡೆ ನೀಡಲು ಬಾಂಬೆ ಹೈಕೋರ್ಟ್‌ ಸೋಮವಾರ ನಿರಾಕರಿಸಿದೆ. ಸಮೀರ್‌ ಅವರ ತಂದೆ ಧ್ಯಾನದೇವ್‌ ವಾಂಖೆಡೆ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ … Continued

ನಿಗದಿತ ಸಮಯಕ್ಕೆ ಶುಲ್ಕ ಪಾವತಿಸಲು ಸಾಧ್ಯವಾಗದ ದಲಿತ ವಿದ್ಯಾರ್ಥಿಗಳಿಗೆ ಸೀಟು ಸೃಷ್ಟಿಸುವಂತೆ ಐಐಟಿ-ಬಾಂಬೆಗೆ ಆದೇಶ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯಲ್ಲಿ ಶಿಕ್ಷಣ ಪಡೆಯಲು ಅರ್ಹತೆ ಹೊಂದಿದ್ದರೂ ತಾಂತ್ರಿಕ ದೋಷದಿಂದಾಗಿ ಗಡುವಿನೊಳಗೆ ಶುಲ್ಕ ಪಾವತಿಸಲಾಗದೆ ಸೀಟು ವಂಚಿತನಾಗಿದ್ದ ದಲಿತ ಸಮುದಾಯದ 17 ವರ್ಷದ ಬಾಲಕನಿಗೆ ಸೀಟು ನಿಗದಿಪಡಿಸುವಂತೆ ಸುಪ್ರೀಂಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ. ಸಂವಿಧಾನದ 142ನೇ ವಿಧಿಯಡಿಯಲ್ಲಿ ತನ್ನ ಅಧಿಕಾರ ಚಲಾಯಿಸಿ ವಿದ್ಯಾರ್ಥಿಗೆ ಸೀಟು ನಿಗದಿಪಡಿಸುವಂತೆ ಜಂಟಿ ಸೀಟು ಹಂಚಿಕೆ … Continued

ಸ್ಟ್ರೀಟ್ ಕ್ರಿಕೆಟ್ ಆಟದಲ್ಲಿ ವಿಕೆಟ್ ಕೀಪರ್ ಆದ ನಾಯಿ..! ವೈರಲ್ ವಿಡಿಯೊ ಶೇರ್‌ ಮಾಡಿದ ಸಚಿನ್ ತೆಂಡೂಲ್ಕರ್

ನಾಯಿಗಳು ನಿಸ್ಸಂದೇಹವಾಗಿ ಒಬ್ಬರು ಹೊಂದಬಹುದಾದ ಅತ್ಯುತ್ತಮ ಒಡನಾಡಿ ಮತ್ತು ಅಂತರ್ಜಾಲದಲ್ಲಿ ಹಲವಾರು ವಿಡಿಯೊಗಳು ಅದನ್ನು ಸಾಬೀತುಪಡಿಸುತ್ತವೆ. ಅದು ನಿಮ್ಮೊಂದಿಗೆ ಟಿವಿ ವೀಕ್ಷಿಸಬಹುದು ಮತ್ತು ನಿಮ್ಮೊಂದಿಗೆ ಕ್ರಿಕೆಟ್ ಆಡಬಹುದು. ಈಗ ಭಾರತದ ಕ್ರಿಕೆಟ್‌ ದಂತಕತೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವೈರಲ್ ವಿಡಿಯೊ ನಾಯಿಯ ವಿಶೇಷತೆ ಬಗ್ಗೆ ಹೇಳುತ್ತದೆ. ರಸ್ತೆಯೊಂದರಲ್ಲಿ ಕೋಲುಗಳಿಂದ ಮಾಡಿದ … Continued

ಶಬರಿಮಲೆಯಲ್ಲಿ ಹಲಾಲ್‌ ಬೆಲ್ಲ ಬಳಕೆ ಪ್ರಕರಣ: ಆಹಾರ -ಭದ್ರತಾ ಇಲಾಖೆ ಪ್ರತಿಕ್ರಿಯೆ ಕೇಳಿದ ಕೇರಳ ಹೈಕೋರ್ಟ್‌

ತಿರುವನಂತಪುರಂ: ಶಬರಿಮಲೆ ದೇವಸ್ಥಾನದಲ್ಲಿ ಅವಧಿ ಮುಗಿದ ಮತ್ತು ಇಸ್ಲಾಂ ಧರ್ಮಕ್ಕನುಗುಣವಾಗಿ ಹಲಾಲ್‌ ಮಾಡಲಾದ ಬೆಲ್ಲ ಬಳಸಿ ನೈವೇದ್ಯ ಅಥವಾ ಪ್ರಸಾದ ತಯಾರಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ಭದ್ರತಾ ಇಲಾಖೆಯ ಆಯುಕ್ತರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೋಮವಾರ ಕೇರಳ ಹೈಕೋರ್ಟ್‌ ನಿರ್ದೇಶಿಸಿದೆ. ಶಬರಿಮಲೆ ಕರ್ಮ ಸಮಿತಿಯ ಸಂಚಾಲಕರು ಅಶುದ್ಧವಾದ ಹಲಾಲ್‌ ಬೆಲ್ಲ ಬಳಕೆ ನಿಷಿದ್ಧಗೊಳಿಸುವಂತೆ ಕೋರಿ … Continued

ವಿಧಾನ ಪರಿಷತ್‌ ಚುನಾವಣೆ: ಕಾಂಗ್ರೆಸ್ಸಿನಿಂದ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಲಾಗಿದೆ. ಮಂಥರ್ ಗೌಡಗೆ ಕೊಡಗಿನಿಂದ ಟಿಕೆಟ್ ನೀಡಲಾಗಿದೆ. ಬಿಜೆಪಿ ನಾಯಕ ಎ. ಮಂಜು ಪುತ್ರನಿಗೆ ಕೊಡಗು ‘ಕೈ’ ಟಿಕೆಟ್ ನೀಡಲಾಗಿದೆ. ತುಮಕೂರಿನಲ್ಲಿ ಆರ್.ರಾಜೇಂದ್ರಗೆ ಕಾಂಗ್ರೆಸ್​ ಟಿಕೆಟ್ ಲಭಿಸಿದೆ. ಮಾಜಿ ಶಾಸಕ‌ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರಗೆ ಟಿಕೆಟ್ ಲಭಿಸಿದೆ. ಬಳ್ಳಾರಿಯಿಂದ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರಾಗಿರುವ ಕೆ.ಸಿ.ಕೊಂಡಯ್ಯಗೆ … Continued

ನವೆಂಬರ್‌ ಮಳೆಗೆ ಕರ್ನಾಟಕದಲ್ಲಿ 24 ಮಂದಿ ಸಾವು, 2203 ಕಿಮೀ ರಸ್ತೆಗೆ ಹಾನಿ, 5 ಲಕ್ಷ ಹೆಕ್ಟೇರ್ ಬೆಳೆ ಹಾನಿ, ಮತ್ತೆ ಮೂರು ದಿನ ಮಳೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕದಲ್ಲಿ ಮಳೆ ಮುಂದುವರಿದಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಹಾಸನ ಜಿಲ್ಲೆಗಳು ವ್ಯಾಪಕ ಹಾನಿಯನ್ನು ಅನುಭವಿಸಿವೆ ಎಂದು ಮುಖ್ಯಮಂತ್ರಿಗಳ ಕಚೇರಿ (CMO) ಪತ್ರಿಕಾ ಪ್ರಕಟಣೆ ತಿಳಿಸಿದೆ. ನವೆಂಬರ್ 1ರಿಂದ ಸತತ ಮಳೆಯಿಂದಾಗಿ ಈವರೆಗೆ ಕನಿಷ್ಠ 24 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 658 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, … Continued

ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಮತ್ತೆ ಮಳೆ ಅಬ್ಬರ, ಹಲವೆಡೆ ನೀರು ನಿಂತು ತೊಂದರೆ

ಬೆಂಗಳೂರು: ನವೆಂಬರ್ 21 ರ ಭಾನುವಾರ ರಾತ್ರಿ ಭಾರೀ ಮಳೆಯ ನಂತರ ಬೆಂಗಳೂರಿನ ಹಲವಾರು ಭಾಗಗಳು ಜಲಾವೃತಗೊಂಡವು. ಸ್ವಲ್ಪ ಸಮಯದ ವಿರಾಮದ ನಂತರ ಮಳೆಯು ಮತ್ತೆ ಭಾನುವಾರ ಅಬ್ಬರಿಸಿದೆ. ಭಾನುವಾರ ರಾತ್ರಿ, ಉತ್ತರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಮಳೆ ಸುರಿದಿದೆ. ಬಾಗಲೂರಿನಲ್ಲಿ ರಾತ್ರಿ 11.15ಕ್ಕೆ 74ಮಿ.ಮೀ., ಬೆಂಗಳೂರು ಪೂರ್ವದ ಕಣ್ಣೂರಿನಲ್ಲಿ … Continued

ಕುಟುಂಬದಿಂದ ಒಬ್ಬರೇ ಚುನಾವಣೆಗೆ ನಿಲ್ಲುವ ಕಾನೂನು ತರಲಿ: ಹೆಚ್.ಡಿ ರೇವಣ್ಣ

ಹಾಸನ: ಬೇಕಾದರೆ ಕುಟುಂಬದಿಂದ ಒಬ್ಬರೇ ಚುನಾವಣೆಗೆ ನಿಲ್ಲಲಿ ಎಂದು ಕಾನೂನು ತರಲಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ. ವಿಧಾನ ಪರಿಷತ್‌ ಚುನಾವಣೆಗೆ ಸೂರಜ್ ರೇವಣ್ಣ ಸ್ಪರ್ಧೆಗೆ ಬಿಜೆಪಿ-ಕಾಂಗ್ರೆಸ್ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ ಪಕ್ಷ ಯಾವುದು..? ಅಲ್ಲಿ ಇಂಧಿರಾಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ … Continued