ಮೊಬೈಲ್‌ ದುರಸ್ತಿ ಮಾಡುವಾಗಲೇ ಬ್ಲಾಸ್ಟ್‌.. ಹೊತ್ತಿ ಉರಿದ ಮೊಬೈಲ್‌..ಸಿಸಿಟಿಯಲ್ಲಿ ಸೆರೆ..

ಮೊಬೈಲ್ ರಿಪೇರಿ ಮಾಡುತ್ತಿರುವಾಗಲೇ ಮೊಬೈಲ್ ಸ್ಫೋಟಗೊಂಡ ಘಟನೆಯೊಂದು ನಡೆದಿದೆ. ಈ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ ಎನ್ನಲಾಗಿದ್ದು, ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ವಿಡಿಯೊದಲ್ಲಿ ಕೆಲಸಗಾರನೊಬ್ಬ ಅಂಗಡಿಯಲ್ಲಿ ಮೊಬೈಲ್ ರಿಪೇರಿ ಮಾಡುತ್ತಿರುವಾಗ ಫೋನ್ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡು ಉರಿದಿದೆ.ವಿಯೆಟ್ನಾಂನ ಥಾಯ್​ನಲ್ಲಿರುವ ರಿಪೇರಿ ಅಂಗಡಿಯೊಳಗೆ ಕುಳಿತು ವ್ಯಕ್ತಿ ಮೊಬೈಲ್ ರಿಪೇರಿ ಮಾಡುತ್ತಿದ್ದಾನೆ. ವಿಡಿಯೊದಲ್ಲಿ ಗಮನಿಸುವಂತೆ, ವ್ಯಕ್ತಿ ಟೇಬಲ್ ಮುಂದೆ ಕುರ್ಚಿಯಲ್ಲಿ ಕುಳಿತು ಕೈಗಳಲ್ಲಿ ಮೊಬೈಲ್ ಹಿಡಿದಿದ್ದಾನೆ. ಇದ್ದಕ್ಕಿದ್ದಂತೆ ಫೋನ್ ಬ್ಲಾಸ್ಟಾಗಿ ಬೆಂಕಿ ಹೊತ್ತಿಕೊಂಡು ಉರಿದಿದೆ. ಕಂಗಾಲಾದ ವ್ಯಕ್ತಿ ಮೊಬೈಲ್ ಎಸೆದಿರುವುದನ್ನು ದೃಶ್ಯದಲ್ಲಿ ನೋಡಬಹುದು.
ನವೆಂಬರ್ 17ರಂದು ಏಳು ಸೆಕೆಂಡುಗಳಿರುವ ವಿಡಿಯೊವನ್ನು ಯೂಟ್ಯೂಬ್​ನಲ್ಲಿ ಹಂಚಿಕೊಳ್ಳಲಾಗಿದೆ. ಅದೃಷ್ಟವಶಾತ್ ಯಾರಿಗೂ ಏನೂ ಅಪಾಯವಾಗಿಲ್ಲ ಎಂದು ಶೀರ್ಷಿಕೆಯಲ್ಲಿ ಬರೆಯುವ ಮೂಲಕ ವಿಡಿಯೊ ಪೋಸ್ಟ್ ಮಾಡಲಾಗಿದೆ.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ