ಗುರುಗ್ರಹಕ್ಕಿಂತ ದೊಡ್ಡದಾದ ಮತ್ತೊಂದು ಗ್ರಹ ಪತ್ತೆ.. ಈ ಗ್ರಹದಲ್ಲಿ ಪ್ರತಿ 16 ಗಂಟೆಗೊಮ್ಮೆ ನೂತನ ವರ್ಷ…! ವೀಕ್ಷಿಸಿ

ಪ್ರತಿ 16 ಗಂಟೆಗಳಿಗೊಮ್ಮೆ ಹೊಸ ವರ್ಷ ಬರುವ ಗ್ರಹದಲ್ಲಿ ಜೀವಿಸುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ! ಹೌದು,
ನಾಸಾದ (NASA) ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಸ್ಯಾಟಲೈಟ್ (TESS), ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ನೇತೃತ್ವದ ಕಾರ್ಯಾಚರಣೆಯ ವಿಜ್ಞಾನಿಗಳು, ಗುರುಗ್ರಹದ ದ್ರವ್ಯರಾಶಿಯ ಐದು ಪಟ್ಟು ಹೆಚ್ಚು ಎಂದು ಅಂದಾಜಿಸಲಾದ ಗುರು ಗ್ರಹದಂತಹದ್ದೇ ಮತ್ತೊಂದು ಗ್ರಹವನ್ನು ಅನ್ವೇಷಣೆ ಮಾಡಿದ್ದಾರೆ…!
TOI-2109b ಎಂದು ಗುರುತಿಸಲಾದ ಈ ಗ್ರಹವು ಕೇವಲ 16 ಗಂಟೆಗಳಲ್ಲಿ ಅದರ ನಕ್ಷತ್ರದ ಸುತ್ತ ಸುತ್ತುತ್ತದೆ. ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ಮಾಡಿದ ಈ ಕುರಿತ ಸಂಶೋಧನೆಗಳನ್ನು ಆಸ್ಟ್ರೋನಾಮಿಕಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ನವೆಂಬರ್ 23, 2021 ರಂದು ಪ್ರಕಟವಾದ ಅಧ್ಯಯನವು, ಹೊಸ ಗ್ರಹದ ಅತ್ಯಂತ ಬಿಗಿಯಾದ ಕಕ್ಷೆ ಮತ್ತು ಅದರ ನಕ್ಷತ್ರದ ಅತಿ ಹತ್ತಿರ ಇರುವ ಕಾರಣಕ್ಕಾಗಿ ತಾಪಮಾನವು ಸುಮಾರು 3,500 ಕೆಲ್ವಿನ್ ಅಥವಾ 3227 ಡಿಗ್ರಿ ಸೆಲ್ಸಿಯಸ್‌ಗೆ ಹತ್ತಿರದಲ್ಲಿದೆ ಎಂದು ಅಂದಾಜಿಸಿದೆ.
ಮೇ 13, 2020 ರಂದು, ನಾಸಾದ TESS ಉಪಗ್ರಹವು ಭೂಮಿಯಿಂದ 855 ಜ್ಯೋತಿರ್​ವರ್ಷಗಳ ದೂರದಲ್ಲಿರುವ ಹರ್ಕ್ಯುಲಸ್ ನಕ್ಷತ್ರಪುಂಜದ ದಕ್ಷಿಣ ಭಾಗದಲ್ಲಿರುವ TOI-2109b ಅನ್ನು ವೀಕ್ಷಿಸಲು ಪ್ರಾರಂಭಿಸಿತು. ಸಂಶೋಧಕರು ನಕ್ಷತ್ರದ ಬೆಳಕಿನ ಮಾಪನಗಳನ್ನು ಸಂಗ್ರಹಿಸಿದರು. ಅಂದರೆ ಗ್ರಹವು ನಕ್ಷತ್ರದ ಮುಂದೆ ಹಾದುಹೋಗುವಾಗ ನಕ್ಷತ್ರದ ಬೆಳಕಿನ ಪ್ರಮಾಣ ಸ್ವಲ್ಪ ಕಡಿಮೆಯಾಗುತ್ತದೆ. ಅದನ್ನೇ ಆಧಾರವಾಗಿಟ್ಟು ಗ್ರಹದ ಚಲನೆಯ ಅವಧಿಯನ್ನು ಲೆಕ್ಕ ಹಾಕಲಾಗಿದೆ.
ಅಧ್ಯಯನದ ಪ್ರಮುಖ ಲೇಖಕ ಇಯಾನ್ ವಾಂಗ್ ಹೇಳುವ ಪ್ರಕಾರ, ಇನ್ನೊಂದು 10 ಮಿಲಿಯನ್ ವರ್ಷಗಳಲ್ಲಿ ಗ್ರಹವು ತಾನು ಸುತ್ತುವ ನಕ್ಷತ್ರಕ್ಕೆ ಬೀಳಬಹುದು ಎಂದು ಎಂದು ಅಂದಾಜಿಸಲಾಗಿದೆ. ಮುಂಬರುವ ಅಧ್ಯಯನಗಳಲ್ಲಿ ಮತ್ತಷ್ಟು ಅಂಶಗಳು ಪತ್ತೆಯಾಗಲಿವೆ ಎಂದು ಸಂಶೋಧಕರು ಭಾವಿಸಿದ್ದಾರೆ. ಅದರ ಕಕ್ಷೆಯು ಅತ್ಯಂತ ಚಿಕ್ಕದಾಗಿರುವುದರಿಂದ, ವಿಜ್ಞಾನಿಗಳು ಅದರ ನಕ್ಷತ್ರದ ಕಡೆಗೆ ಎಳೆಯಲು ಪ್ರಾರಂಭಿಸಿದ ನಂತರ ಅದರ ಅಂತಿಮ ಹಂತದಲ್ಲಿ ಗ್ರಹಕ್ಕೆ ಏನಾಗುತ್ತದೆ ಎಂಬುದನ್ನು ಅಧ್ಯಯನ ಮಾಡುವ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ ಇಂತಹ ಗ್ರಹಗಳ ರಚನೆಗೆ ಕಾರಣಗಳೇನು? ಇವುಗಳು ಏಕೆ ನಮ್ಮ ಸೌರವ್ಯೂಹದ ಭಾಗವಾಗಿಲ್ಲ? ಮೊದಲಾದ ವಿಚಾರಗಳು ಮತ್ತಷ್ಟು ಅಧ್ಯಯನದ ಬಳಿಕ ಹೊರಬರಲಿವೆ ಎಂದು ವಾಂಗ್ ಹೇಳಿದ್ದಾರೆ.

ಭೂಮಿಯಿಂದ 855 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಈ ಗ್ರಹವನ್ನು ಮೊದಲು ಮೇ 2020 ರಲ್ಲಿ ಪತ್ತೆಹಚ್ಚಲಾಯಿತು, ಹೆಚ್ಚಿನ ಅವಲೋಕನಗಳು ಮತ್ತು ಡೇಟಾದ ವಿಶ್ಲೇಷಣೆಯು TOI-2109b ಒಂದು ಕ್ರಾಂತಿಗೆ ಕೇವಲ 16 ಗಂಟೆಗಳನ್ನು ತೆಗೆದುಕೊಂಡಿತು ಎಂದು ದೃಢಪಡಿಸಿತು

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement