ದೆಹಲಿ-ರಾಜಸ್ಥಾನದಲ್ಲಿ ತಲಾ 4 ಓಮಿಕ್ರಾನ್ ಪ್ರಕರಣಗಳು ದೃಢ..: ಭಾರತದಲ್ಲಿ ಸೋಂಕಿತರ ಸಂಖ್ಯೆ 49ಕ್ಕೆಏರಿಕೆ

ನವದೆಹಲಿ: ದೆಹಲಿಯಲ್ಲಿ ಮತ್ತೆ 4 ಓಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ದೆಹಲಿಯಲ್ಲಿ ಓಮಿಕ್ರಾನ್​ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಅಲ್ಲದೆ, ರಾಜಸ್ಥಾನದಲ್ಲಿಯೂ ಮತ್ತೆ 4 ಕೇಸ್​ ದಾಖಲಾಗಿದ್ದು, ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 49ಕ್ಕೆ ಏರಿದೆ.
ನಿನ್ನೆ ಗುಜರಾತ್​​ನಲ್ಲಿ ವ್ಯಕ್ತಿಯೊಬ್ಬರಲ್ಲಿ ಓಮಿಕ್ರಾನ್​ ದೃಢಪಟ್ಟಿತ್ತು. ಅವರು ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದವರಾಗಿದ್ದು, ಕೊವಿಡ್​ 19 ಪಾಸಿಟಿವ್​ ಬಂದಿತ್ತು. ಮಾದರಿಯನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಅವರಲ್ಲಿ ಓಮಿಕ್ರಾನ್​ ಇರುವುದು ದೃಢಪಟ್ಟಿತ್ತು. ಮಹಾರಾಷ್ಟ್ರದಲ್ಲಿ ಕೂಡ ಇಬ್ಬರು ದುಬೈನಿಂದ ಆಗಮಿಸಿದವರಲ್ಲಿ ಓಮಿಕ್ರಾನ್​ ಇರುವುದು ಕಂಡುಬಂದಿತ್ತು.
ದೆಹಲಿಯಲ್ಲಿ ದೃಢಪಟ್ಟ ನಾಲ್ವರಲ್ಲಿ ಎಲ್ಲರಿಗೂ ಸೌಮ್ಯ ಲಕ್ಷಣವಿದೆ. ದೆಹಲಿಯಲ್ಲಿರುವ ಒಟ್ಟಾರೆ 6 ಸೋಂಕಿತರಲ್ಲಿ ಒಬ್ಬರು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. ರಾಜಸ್ಥಾನದಲ್ಲಿ ಇಂದು, ಮಂಗಳವಾರ ದೃಢಪಟ್ಟ ಓಮಿಕ್ರಾನ್​ ಸೋಂಕಿತರ ಆರೋಗ್ಯವೂ ಸ್ಥಿರವಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಪ್ರಸಾದಿ ಲಾಲ್​ ಮೀನಾ ಹೇಳಿದ್ದಾರೆ.
ದೇಶದಲ್ಲಿ ಮಹಾರಾಷ್ಟ್ರದಲ್ಲಿ 20, ರಾಜಸ್ಥಾನದಲ್ಲಿ 13, ಕರ್ನಾಟಕದಲ್ಲಿ 3, ಗುಜರಾತ್​ನಲ್ಲಿ 4, ದೆಹಲಿಯಲ್ಲಿ 6, ಚಂಡಿಗಢ್​​, ಕೇರಳ, ಆಂಧ್ರಪ್ರದೇಶಗಳಲ್ಲಿ ತಲಾ ಒಂದು ಓಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿವೆ.
ಓಮಿಕ್ರಾನ್​ ಮೊದಲು ಕರ್ನಾಟಕದಲ್ಲಿ ಪತ್ತೆಯಾಗಿದ್ದರೂ, ಸದ್ಯ ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳಿವೆ. ಓಮಿಕ್ರಾನ್ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಸರಣಗೊಳ್ಳುತ್ತಿರುವ ತಳಿಯಾಗಿದ್ದು, ಸಹಜವಾಗಿಯೇ ಆತಂಕ ಮೂಡಿಸಿದೆ. ಈಗಾಗಲೇ ಸೋಮವಾರ ಬ್ರಿಟನ್ನಿನಲ್ಲಿ ಈ ಸೋಂಕಿನಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಈ ಸೋಮಕಿನಿಂದ ಮೃತಪಟ್ಟ ವಿಶ್ವದ ಮೊದಲ ಪ್ರಕರಣವಾಗಿದೆ.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement