ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಸೋಂಕು ಇಂದು, ಗುರುವಾರ ಒಂದೇ ದಿನ 12 ಜನರಿಗೆ ದೃಢಪಟ್ಟ ವರದಿಯಾಗಿವೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
20 ವರ್ಷ ಯುವತಿ (ಬೆಂಗಳೂರು), 56 ವರ್ಷದ ಪುರುಷ, (ಬೆಂಗಳೂರು) 54 ವರ್ಷ ಮಹಿಳೆ (ಬೆಂಗಳೂರು), .27 ವರ್ಷದ ಪುರುಷ (ಮಂಗಳೂರು, ಘಾನಾದಿಂದ ಹಿಂದಿರುಗಿದವರು), 11 ವರ್ಷ ಬಾಲಕಿ (ಬೆಂಗಳೂರು-ಬ್ರಿಟನ್ನಿನಿಂದ ಹಿಂತಿರುಗಿದವರು) 59 ವರ್ಷ ಮಹಿಳೆ, ಬೆಂಗಳೂರು (ನೈಜೀರಿಯಾದಿಂದ ಹಿಂತಿರುಗಿದವರು ).9 ವರ್ಷದ ಬಾಲಕಿ, ಮೈಸೂರು (ಸ್ವಿಟ್ಜರ್ಲೆಂಡ್ನಿಂದ ಹಿಂತಿರುಗಿದದವರು), 31 ವರ್ಷ ಪುರುಷ (ಬೆಂಗಳೂರು), 42 ವರ್ಷ ಪುರುಷ (ಬೆಂಗಳೂರು), 18 ವರ್ಷದ ಯುವತಿ, (ಬೆಂಗಳೂರು)21 ವರ್ಷ ಪುರುಷ, ಬೆಂಗಳೂರು-ಎಲ್ಲರೂ ಬ್ರಿಟನ್ನಿನಿಂದ ಹಿಂದಿರುಗಿದವರು, 49 ವರ್ಷ ಮಹಿಳೆ, ಬೆಂಗಳೂರು, (ಡೆನ್ಮಾರ್ಕ್ನಿಂದ ಹಿಂತಿರುಗಿದವರು) ಎಂದು ಇಲಾಖೆ ಮಾಹಿತಿ ನೀಡಿದೆ.
ಡಿ.14ರಂದು ಬ್ರಿಟನ್ನಿಂದ ವಾಪಸ್ಸಾಗಿದ್ದ ಬೆಂಗಳೂರಿನ ಮಹಿಳೆಗೆ ಓಮಿಕ್ರಾನ್ ತಗುಲಿತ್ತು. ನಂತರ ಮಹಿಳೆ ಕುಟುಂಬದ ನಾಲ್ವರಿಗೂ ಸೋಂಕು ತಗುಲಿದೆ. ಮಹಿಳೆಯನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬರಲು ಹೋಗಿದ್ದ ಕುಟುಂಬಕ್ಕೆ ಓಮಿಕ್ರಾನ್ ತಗುಲಿದೆ. 26 ವರ್ಷದ ಮಹಿಳೆಯ ತಂದೆ, ತಾಯಿ ಹಾಗೂ ತಂಗಿಗೆ ಓಮಿಕ್ರಾನ್ ಸೋಂಕು ಖಚಿತವಾಗಿದೆ. ಮೂವರು ಕೂಡ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ. ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದ್ದ 10 ಮಂದಿಗೆ ಕೊವಿಡ್ ನೆಗೆಟಿವ್ ದೃಢಪಟ್ಟಿದೆ. ಇಡೀ ಕುಟುಂಬವನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ