ಈ ಸಾಹಸಕ್ಕೆ ನೀವು ಬೆರಗಾಗಲೇಬೇಕು…ತಲೆ ಮೇಲೆ ಸಹೋದರನನ್ನು ತಲೆಕೆಳಗಾಗಿ ಹೊತ್ತುಕೊಂಡು 53 ಸೆಕೆಂಡ್​ಗಳಲ್ಲಿ 100 ಮೆಟ್ಟಿಲು ಹತ್ತಿದ ವ್ಯಕ್ತಿ..! ವೀಕ್ಷಿಸಿ

ಕೆಲವು ಸಾಹಸಗಳು ನಮ್ಮ ಮೈನವಿರೇಳಿಸುತ್ತವೆ. ಮತ್ತೆ ಕೆಲವು ಸಾಹಸಗಳು ನಮ್ಮ ಉಸಿರು ಬಿಗಿಹಿಡಿಯುವಂತೆ ಮಾಡುತ್ತವೆ. ಇಂಥ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಹಾಗೂ ಇವರ ಅದ್ಭುತ ಸಾಹಸಕ್ಕೆ ಬಹುತೇಕ ಎಲ್ಲರೂ ತಲೆದೂಗಿದ್ದಾರೆ.
ವಿಯೆಟ್ನಾಂನ ಇಬ್ಬರು ಒಬ್ಬರ ಮೇಲೊಬ್ಬರು ನಿಂತುಕೊಂಡು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತಿ ನೂತನ ಗಿನ್ನಿಸ್​ ದಾಖಲೆ ಮಾಡಿದ್ದಾರೆ. ಸ್ಪೇನ್​ನ ಗಿರೋನಾದಲ್ಲಿರುವ ಸೆಂಟ್​ ಮೆರೀಸ್​ ಕ್ಯಾಥ್ರೋಡಲ್​ನಲ್ಲಿರುವ ಚರ್ಚಿನ ಹೊರಭಾಗದಲ್ಲಿ ಡಿಸೆಂಬರ್‌ 23ರಂದು ಈ ಅವರು ಈ ಚಮತ್ಕಾರಿಕ ದಾಖಲೆ ನಿರ್ಮಿಸಿದ್ದಾರೆ. 37 ವರ್ಷದ ಗಿಯಾಂಗ್​ ಕ್ವೋಕ್​ ಕೋ ಮತ್ತು 32 ವರ್ಷದ ಆತನ ಸಹೋದರ ಗಿಯಾಂಗ್​ ಕ್ವೋಕ್​ ಎನ್ಘಿಪ್​ ಎನ್ನುವವರು ದುರ್ಲಭ ಸಾಹಸದ ಸಾಧನೆ ಮಾಡಿದ್ದಾರೆ.
2016 ರ ಡಿಸೆಂಬರ್​ನಲ್ಲಿ ಇದೇ ರೀತಿ ಒಬ್ಬರ ತಲೆಯಮೇಲೆ ಇನ್ನೊಬ್ಬರು ತಲೆಯಿಟ್ಟು ಉಲ್ಟಾ ನಿಂತು 52 ಸೆಕೆಂಡುಗಳಲ್ಲಿ 90 ಮೆಟ್ಟಿಲನ್ನು ಹತ್ತಿದ್ದರು. ಇದೀಗ ಅವರದೇ ದಾಖಲೆಯನ್ನು ಮುರಿದು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತುವ ಮೂಲಕ ಇವರು ಹೊಸ ಗಿನ್ನಿಸ್​ ದಾಖಲೆ ಮಾಡಿದ್ದಾರೆ.
2016ರಲ್ಲೂ ದಾಖಲೆ ಮಾಡಿದ್ದರು..
ಇಬ್ಬರೂ ಸಹೋದರರಾದ ಜಿಯಾಂಗ್ ಕ್ವಾಕ್ ಕೊ (37) ಮತ್ತು ಜಿಯಾಂಗ್ ಕ್ವಾಕ್ ನೀಪ್ (32) ಇಬ್ಬರೂ ವೃತ್ತಿಪರ ಸರ್ಕಸ್ ಕಲಾವಿದರು ಮತ್ತು ಈ ಹಿಂದೆ 2016 ರಲ್ಲಿ 52 ಸೆಕೆಂಡುಗಳಲ್ಲಿ 90 ಮೆಟ್ಟಿಲುಗಳನ್ನು ಏರಿ ದಾಖಲೆ ಮಾಡಿದ್ದರು, ಆದರೆ ಅವರ ದಾಖಲೆಯನ್ನು 2018 ರಲ್ಲಿ ಪೆರುವಿನಲ್ಲಿ ಮುರಿದರು. ಪೆರುವಿಯನ್ ಕಲಾವಿದರು 52 ಸೆಕೆಂಡುಗಳಲ್ಲಿ 91 ಮೆಟ್ಟಿಲುಗಳನ್ನು ಏರುವ ಮೂಲಕ ಅವರ ದಾಖಲೆಯನ್ನು ಮುರಿದಿದ್ದರು.
2018ರಲ್ಲಿ ಇವರಿಬ್ಬರ ಈ ಸಾಧನೆಯಿಂದ ಜನರು ಅಚ್ಚರಿಗೊಂಡಿದ್ದರು.
ಡಿಸೆಂಬರ್ 2018 ರಲ್ಲಿ, ವಿಯೆಟ್ನಾಂನ ಈ ಇಬ್ಬರು ಸಹೋದರರು ಇದೇರೀತಿ ಕಣ್ಣುಮುಚ್ಚಿ 10 ಮೆಟ್ಟಿಲುಗಳನ್ನು ಹತ್ತುವ ಮತ್ತು ಇಳಿಯುವ ಸಾಹಸವನ್ನು ಮಾಡಿದರು. ದೂರದರ್ಶನ ಕಾರ್ಯಕ್ರಮವೊಂದರಲ್ಲಿ ದಾಖಲೆ ಸಮಯದಲ್ಲಿ ಈ ಸಾಧನೆ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸೇರಿದ್ದಾರೆ.

 

ದಾಖಲೆಗಾಗಿ ಪ್ರತಿನಿತ್ಯ ಬೆಳಗ್ಗೆಯಿಂದ ರಾತ್ರಿಯವರೆಗೂ ಅಭ್ಯಾಸ..
ಈ ಹೊಸ ಗಿನ್ನೆಸ್‌ ದಾಖಲೆ ಮಾಡಿದ ಸಹೋದರರಿಬ್ಬರೂ ಮಾತನಾಡಿದ್ದಾರೆ. ಇದಕ್ಕಾಗಿ ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯ ವರೆಗೆ ಅಭ್ಯಾಸ ನಡೆಸುತ್ತಿದ್ದೆವು. 2016 ರಲ್ಲಿ ಅವರು ದಾಖಲೆ ಮಾಡಿದ ಅದೇ ಸ್ಥಳದಲ್ಲಿ ಅವರು ಹೊಸ ದಾಖಲೆಯನ್ನು ಮಾಡಿದ್ದಾರೆ. ಗಿರೋನಾದ ಸೇಂಟ್ ಮೇರಿ ಕ್ಯಾಥೆಡ್ರಲ್ ಚರ್ಚ್‌ನ ಮೆಟ್ಟಿಲುಗಳ ಮೇಲೆ. ಅವರ ಹಿಂದಿನ ದಾಖಲೆಯನ್ನು ಮುರಿಯಲು ಈ ಸ್ಥಳದಲ್ಲಿ ಇನ್ನೂ 10 ಮೆಟ್ಟಿಲುಗಳನ್ನು ನಿರ್ಮಿಸಬೇಕಾಯಿತು ಎಂದು ಅವರು ಹೇಳಿದರು.
ಈ 10 ಮೆಟ್ಟಿಲುಗಳು ವಿಭಿನ್ನ ಎತ್ತರ ಮತ್ತು ವಿಭಿನ್ನ ಲೋಹದಿಂದ ಮಾಡಲ್ಪಟ್ಟಿದೆ, ಅವುಗಳ ನಿರ್ಮಾಣವು ಈಗಾಗಲೇ ನಿರ್ಮಿಸಲಾದ 90 ಮೆಟ್ಟಿಲುಗಳಿಗಿಂತ ವಿಭಿನ್ನವಾಗಿದೆ ಮತ್ತು ಈ ಮೆಟ್ಟಿಲುಗಳ ಮೇಲೆ ಅಭ್ಯಾಸ ಮಾಡುವ ಅವಕಾಶವೂ ನಮಗೆ ಸಿಕ್ಕಿರಲಿಲ್ಲ, ಆದರೂ ಅದನ್ನು ಬಳಸಿ ದಾಖಲೆ ನಿರ್ಮಿಸಿದ್ದಾರೆ. ಅಭ್ಯಾಸದ ಸಮಯದಲ್ಲಿ, ಅವರಿಗೆ ಅನೇಕ ಸಲ ಗಾಯಗಳಾದವು. ಆದರೆ ಅವರು ತಮ್ಮ ಭಯವನ್ನು ನಿವಾರಿಸಿ ಯಶಸ್ಸನ್ನು ಸಾಧಿಸಿದರು.

ನಿಮ್ಮ ಕಾಮೆಂಟ್ ಬರೆಯಿರಿ

advertisement