17ನೇ ವಯಸ್ಸಿನಲ್ಲಿ 609 ಕೆಜಿ ಇದ್ದ ವ್ಯಕ್ತಿಯ ತೂಕ 29 ನೇ ವಯಸ್ಸಿನಲ್ಲಿ ಕೇವಲ 63 ಕೆ.ಜಿ.! ಇದು ವಿಶ್ವದ ಅತ್ಯಂತ ಭಾರದ ವ್ಯಕ್ತಿ ತನ್ನ ತೂಕ ಇಳಿಸಿಕೊಂಡ ಕತೆ

17 ನೇ ವಯಸ್ಸಿನಲ್ಲಿ 609 ಕೆಜಿ ತೂಕವನ್ನು ಹೊಂದಿದ್ದ “ವಿಶ್ವದ ಅತ್ಯಂತ ಭಾರವಾದ ಹದಿಹರೆಯದ”ಖಲೀದ್ ಮೊಹ್ಸೆನ್ ಅಲ್ ಶಾರಿ ಅವರನ್ನು ನಂಬಲಾಗದ ತೂಕ ನಷ್ಟದ ನಂತರ ಈಗ ಗುರುತಿಸಲಾಗುತ್ತಿಲ್ಲ ಎಂದು ದಿ ಸನ್ ವರದಿ ಮಾಡಿದೆ.
ಖಲೀದ್ ಮೊಹ್ಸೆನ್ ಅಲ್ ಶಾರಿ ಅವರು ತನ್ನ ತೂಕವನ್ನು 546kg ಕಡಿಮೆ ಮಾಡಿಕೊಂಡಿದ್ದಾರೆ..! ಆಸ್ಪತ್ರೆಯಲ್ಲಿ ಕಟ್ಟುನಿಟ್ಟಾದ ಆಹಾರ ಮತ್ತು ವ್ಯಾಯಾಮದ ಕಟ್ಟುಪಾಡುಗಳನ್ನು ಅನುಸರಿಸಿದ ನಂತರ ವರ್ಷಗಳಲ್ಲಿ ಮೊದಲ ಬಾರಿಗೆ ಅವರು ನಡೆದಾಡಿದ್ದಾರೆ.
ಅವರು ತಮ್ಮ ಹದಿಹರೆಯದ ವರ್ಷಗಳಲ್ಲಿ ಬಲೂನಿಂಗ್ ನಂತರ ಅವರ ತೂಕ ನಷ್ಟದ ಪ್ರಕ್ರಿಯೆಯ ವಿವಿಧ ಹಂತಗಳನ್ನು ಪ್ರದರ್ಶಿಸಿ ಅದ್ಭುತ ರೂಪಾಂತರವನ್ನು ದಾಖಲಿಸಿದ್ದಾರೆ.
ಈಗ 29 ವರ್ಷದ ಖಲೀದ್ ಮೊಹ್ಸೆನ್ ಅಲ್ ಶಾರಿಗೆ ಒಂದು ಸಮಯದಲ್ಲಿ ಮನೆಯಿಂದ ಆಸ್ಪತ್ರೆಗೆ ಸಾಗಿಸಲು ಹೆಲಿಕಾಪ್ಟರ್ ಅನ್ನೇ ಕರೆತರಲಾಗಿತ್ತು. ಏಕೆಂದರೆ ಅವರು ಅಷ್ಟು ತೂಕ ಹೊಂದಿದ್ದರು. ಆದರೆ ಈಗ ಅವರ ತೂಕ ಎಷ್ಟಿದೆ ಎಂದು ಕೇಳಿದರೆ ಅಚ್ಚರಿ ಆಗುತ್ತದೆ. ಅವರ ತೂಕ ಈಗ 63 ಕೆಜಿಗೆ ಇಳಿದಿದೆ
17ರ ಹರೆಯದ ಮೊಹ್ಸೆನ್ ಅಲ್ ಶೇರಿ ಅತತ ದಪ್ಪವಾಗಿದ್ದು ಮಾಂಸದ ಪರ್ವತವಾಗಿದ್ದ.ಕುಳಿತಲ್ಲಿಂದ ಚಲಿಸಲೂ ಸಾಧ್ಯವಾಗದೇ ಹಾಸಿಗೆ ಹಿಡಿದಿದ್ದ.
ಖಲೀದ್ ಮೊಹ್ಸೆನ್ ಅಲ್ ಶೇರಿಸೌದಿ ಅರೇಬಿಯಾದ ಈ ಯುವಕ ಮೂರು ವರ್ಷಗಳ ಕಾಲ ಹಾಗೆಯೇ ಹಾಸಿಗೆ ಮೇಲೆ ತನ್ನ ಜೀವನ ಸಾಗಿಸಿದ್ದನಂತೆ. ಸೌದಿಯ ದಿವಂಗತ ರಾಜ ಅಬ್ದುಲ್ಲಾ ಅವರ ಆದೇಶದ ಮೇರೆಗೆ ಖಲೀದ್​ಗೆ ಆಸ್ಪತ್ರೆಯಲ್ಲಿ ತೂಕ ಇಳಿಕೆಯ ಚಿಕಿತ್ಸೆಗೆ ಅವಕಾಶ ಸಿಕ್ಕಿತು. 609 ಕೆಜಿ ತೂಕದ ಖಲೀದ್‌ನನ್ನು ತಮ್ಮ ಮನೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಹೆಲಿಕಾಪ್ಟರ್​ ಸಹಾಯ ಪಡೆಯಲಾಗಿತ್ತು. ಅಸಾಧಾರಣವಾದ ತೂಕ ಇಳಿಸುವಿಕೆಯ ಚಿಕಿತ್ಸೆಗಾಗಿ ವೈದ್ಯಕೀಯ ಹೆಲಿಕಾಪ್ಟರ್ ಮೂಲಕ ಅವರನ್ನು ರಿಯಾದ್ ರಾಜಧಾನಿ ಕಿಂಗ್ ಫಹದ್ ವೈದ್ಯಕೀಯ ನಗರಕ್ಕೆ ಕರೆದೊಯ್ಯಲಾಯಿತು.
30 ಮಂದಿ ನುರಿತ ವೈದ್ಯಕೀಯ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿಯ ತಂಡವು ಖಲೀದ್‌ ಅವರಿಗೆ ತೂಕ ಇಳಿಸುವ ಚಿಕಿತ್ಸೆಯಲ್ಲಿ ತೊಡಗಿಕೊಂಡಿತು.. ಹೀಗೆ ಚಿಕಿತ್ಸೆ ದೊರೆತ ಕೇವಲ ಆರು ತಿಂಗಳಲ್ಲೇ ಖಲೀದ್ ಅರ್ಧಕ್ಕಿಂತ ಹೆಚ್ಚು ದೇಹದ ತೂಕವನ್ನು ಕಳೆದುಕೊಂಡರು. ಕಟ್ಟುನಿಟ್ಟಾದ ಆಹಾರ ಕ್ರಮ, ನಿರಂತರ ವ್ಯಾಯಾಮ​ ಮಾಡಿದರು. ಖಲೀದ್​ ಆರಂಭದಲ್ಲಿ ದೇಹವನ್ನು ಚಲಿಸಲು ಬಹಳ ಕಷ್ಟಪಟ್ಟರು. ಅವರು ಹೆಚ್ಚು ಚಲಿಸಲು ಮತ್ತು ಅವರ ದೈಹಿಕ ಚಿಕಿತ್ಸೆಗೆ ಸಹಾಯ ಮಾಡಲು ವೈದ್ಯರಿಂದ ಬೃಹತ್ ಗಾಲಿಕುರ್ಚಿಯನ್ನು ನಿರ್ಮಿಸಲಾಯಿತು.
ಚಿಕಿತ್ಸೆ ಫಲವಾಗಿ ಅವರು ನಂಬಲಾಗದ ತೂಕ ನಷ್ಟವನ್ನು ದಾಖಲಿಸುತ್ತಾ ಸಾಗಿದರು. ಇದೇ ವೇಳೆ, 2018 ರಲ್ಲಿ ಹೆಚ್ಚುವರಿ ಚರ್ಮವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾದರು. ಈಗ ಅವರಿಗೆ 29 ವರ್ಷ ವಯಸ್ಸು. ಸದ್ಯ​ ದೇಹದ ತೂಕ 63 ಕೆಜಿಗೆ ಇಳಿದಿದೆ!.
ಪೀಪಲ್ ಮ್ಯಾಗಜೀನ್‌ನ ಪ್ರಕಾರ, ಅವರು ಕೇವಲ ಆರು ತಿಂಗಳಲ್ಲಿ ಅರ್ಧಕ್ಕಿಂತ ಹೆಚ್ಚು ದೇಹದ ತೂಕವನ್ನು ಕಳೆದುಕೊಂಡರು, ಹಾಗೂ ನಂತರ ಕಟ್ಟುನಿಟ್ಟಾದ ವ್ಯಾಯಾಮ, ಸೂಕ್ತ ಆಹಾರ ಕ್ರಮ ಮತ್ತು ತೀವ್ರವಾದ ಫಿಟ್‌ನೆಸ್ ಯೋಜನೆ ನಂತರ ತುಕ ಇಳಿಯುತ್ತ ಬಂತು. ಖಲೀದ್‌ನ ಗಮನಾರ್ಹ ಚೇತರಿಕೆಯು ಶಕ್ತಿಯಿಂದ ಅವರೀಗ 63 ಕೆಜಿ ತೂಗುತ್ತಾರಂತೆ. .ಈಗ 29 ವರ್ಷ ವಯಸ್ಸಿನ ಶೇರಿ ಫೋಟೋಗಳು ಶೇರ್‌ ಆಗಿದ್ದು, 17 ವರ್ಷ ವಯಸ್ಸಿನ ಫೋಟೋ ಹಾಗೂ ಈಗಿನ ನೋಡಿದರೆ ಗುರುತಿಸಲಾಗುವುದಿಲ್ಲ.

 

1 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement