ಸುಪ್ರೀಂಕೋರ್ಟ್‍ನಲ್ಲಿ ಮೇಕೆದಾಟು ಅರ್ಜಿ ವಿಚಾರಣೆ ಜನವರಿ 25ಕ್ಕೆ

ನವದೆಹಲಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ. ಜನವರಿ 25ಕ್ಕೆ ಈ ಬಗ್ಗೆ ವಿಸ್ತೃತ ವಿಚಾರಣೆ ನಡೆಸುವುದಾಗಿ ನ್ಯಾ.ಎ.ಎಂ ಖಾನ್ವಿಲ್ಕರ್ ನೇತೃತ್ವದ ದ್ವಿ ಸದಸ್ಯ ಪೀಠ ಹೇಳಿದೆ. ಮೇಕೆದಾಟು ಆಣೆಕಟ್ಟು ನಿರ್ಮಾಣ ವಿಚಾರವಾಗಿ ದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯಧೀಕರಣ ನೀಡಿದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಅರ್ಜಿ … Continued

ರಾಜ್ಯದ 68 ವಸತಿ ಶಾಲೆಗಳಿಗೆ ಡಾ. ಬಿ.ಆರ್ ಅಂಬೇಡ್ಕರ್ ಹೆಸರು

ಬೆಂಗಳೂರು: ಇತ್ತೀಚಿನ ರಾಜ್ಯ ಸರ್ಕಾರದ ಆದೇಶದ ನಂತರ, ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಶಾಲೆಗಳಿಗೆ ಭಾರತ ಸಂವಿಧಾನದ ಪಿತಾಮಹ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿಡಲು ನಿರ್ಧರಿಸಲಾಗಿದೆ. ಅಕ್ಟೋಬರ್ 25ರಂದು ಸಮಾಜ ಕಲ್ಯಾಣ ಆಯುಕ್ತ ಡಾ.ರವಿಕುಮಾರ್ ಸುರಪುರ ಅವರು ಕರ್ನಾಟಕ ಸರ್ಕಾರಕ್ಕೆ ಬರೆದ ಪತ್ರದ ಪರಿಣಾಮ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ … Continued

ವೇತನ ಮಟ್ಟ-ರ್‍ಯಾಂಡ್‌ಸ್ಟಡ್‌ನ‌ ಸ್ಯಾಲರಿ ಟ್ರೆಂಡ್‌ ವರದಿ: ಕಿರಿಯ-ಮಧ್ಯಮ ಮಟ್ಟದ ವೇತನ ಶ್ರೇಣಿಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನ

2021ರ ರ್‍ಯಾಂಡ್‌ಸ್ಟಡ್‌ನ‌ (Randstad) ಸ್ಯಾಲರಿ ಟ್ರೆಂಡ್‌ ವರದಿಯ ಆವೃತ್ತಿಯು ಭಾರತದ ಐಟಿ ರಾಜಧಾನಿ ಬೆಂಗಳೂರು ಟೈರ್‌-I ನಗರಗಳಲ್ಲಿ ಜೂನಿಯರ್ ಮತ್ತು ಮಧ್ಯಮ ಹಂತದ ವೇತನ ಶ್ರೇಣಿಗಳಲ್ಲಿ ಉದ್ಯೋಗ ಮಟ್ಟದ ಶ್ರೇಣಿಯಲ್ಲಿ ಅತಿ ಹೆಚ್ಚು ಸಂಬಳ ನೀಡುವುದರಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ಹೇಳಿದೆ. ಆದಾಗ್ಯೂ, ಸೀನಿಯರ್‌ ಮಟ್ಟದಲ್ಲಿ ಅತಿ ಹೆಚ್ಚು ವೇತನ ನೀಡುವ ನಗರವೆಂದರೆ ಮುಂಬೈ ಎಂದು … Continued

ಬುಲ್ಲಿ ಬಾಯಿ’ ಆ್ಯಪ್ ಪ್ರಕರಣ: ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧಿಸಿದ ಮುಂಬೈ ಪೊಲೀಸರು:ವರದಿ

ಮುಂಬೈ: ‘ಬುಲ್ಲಿ ಬಾಯಿ’ ಅಪ್ಲಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಸೈಬರ್ ಸೆಲ್ ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಸೋಮವಾರ ಬಂಧಿಸಿದೆ‌ ಎಂದು ಎನ್‌ಡಿಟಿವಿ.ಕಾಮ್‌ ವರದಿ ಮಾಡಿದೆ. ಬೆಂಗಳೂರಿನಿಂದ ಬಂಧಿತನಾಗಿರುವ ಶಂಕಿತನ ವಯಸ್ಸನ್ನು ಹೊರತುಪಡಿಸಿ ಮುಂಬೈ ಪೊಲೀಸರು ಇನ್ನೂ ಆತನ ಗುರುತನ್ನು ಬಹಿರಂಗಪಡಿಸಿಲ್ಲ. ಪೊಲೀಸರು ಅಪರಿಚಿತ ಅಪರಾಧಿಗಳ ವಿರುದ್ಧ ಐಪಿಸಿ ಮತ್ತು ಐಟಿ ಕಾಯ್ದೆಯ … Continued