ಇದು ಸಲಿಂಗಿಗಳ ಮದುವೆ..: ಮನೆಯಿಂದ ಓಡಿ ಹೋಗಿ ಮದುವೆಯಾದ ಇಬ್ಬರು ಹುಡುಗಿಯರು..!

ರತನ್‌ಗಢ್ (ಚುರು). ಈ ಸಣ್ಣ ಪಟ್ಟಣದ ಕುಟುಂಬದ ಹುಡುಗಿ, ಪ್ರಪಂಚದ ಸಂಪ್ರದಾಯಗಳನ್ನು ಮೀರಿ ಕುಟುಂಬ ಸದಸ್ಯರ ಒಪ್ಪಿಗೆಗೆ ವಿರುದ್ಧವಾಗಿ ಹರಿಯಾಣದ ಗೆಳತಿಯೊಂದಿಗೆ ಓಡಿಹೋಗಿ ಮದುವೆಯಾಗಿದ್ದಾಳೆ..! ಇಬ್ಬರೂ ಮೊದಲು ಸ್ನೇಹಿತರಾಗಿದ್ದರು ಮತ್ತು ನಂತರ ಅದು ಪ್ರೀತಿಗೆ ತಿರುಗಿ ಅದು ಮದುವೆಯಲ್ಲಿ ಮುಕ್ತಾಯವಾಗಿದೆ. ಇಬ್ಬರೂ ಸಂಬಂಧಿಕರು, ಒಂದು ವರ್ಷದ ಹಿಂದೆಯಷ್ಟೇ ಇಬ್ಬರೂ ಭೇಟಿಯಾಗಿದ್ದರು. ಚುರು ಹುಡುಗಿಯ ಕಣ್ಣು ಹರಿಯಾಣದ … Continued

ಅತಿದೀರ್ಘ ಕೊರೊನಾ ಚಿಕಿತ್ಸೆ… 8 ಕೋಟಿ ರೂ. ಖರ್ಚು…50 ಎಕರೆ ಜಮೀನು ಮಾರಾಟ.. ವಿದೇಶಿ ವೈದ್ಯರಿಂದ 254 ದಿನಗಳ ಕಾಲ ಚಿಕಿತ್ಸೆ.. ಆದ್ರೂ ಬದುಕ್ಲಿಲ್ಲ..

ಎಂಟು ತಿಂಗಳ ವರೆಗೆ ಕೊರೊನಾ ಹಾಗೂ ನಂತರದ ತೊಂದರೆಗೆ ಚಿಕಿತ್ಸೆಗೆ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆಗೆ ಸುಮಾರು 8 ಕೋಟಿ ರೂ.ವೆಚ್ಚ ಮಾಡಿದರೂ ಮಧ್ಯಪ್ರದೇಶದ ರೈತ ಮಂಗಳವಾರ ರಾತ್ರಿ ಕೊರೊನಾ ಸಂಬಂಧಿ ತೊಂದರೆಯಿಂದ ಕೊನೆಗೂ ಬದುಕುಳಿಯಲಿಲ್ಲ..! ಮೃತಪಟ್ಟಿದ್ದಾರೆ. ಏಪ್ರಿಲ್ 2021 ರಲ್ಲಿ ಮಧ್ಯಪ್ರದೇಶದ ರೇವಾ ರೈತ ಧರಂಜಯ್ ಸಿಂಗ್ (50) ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರ … Continued

ಬತ್ತದ ಉತ್ಸಾಹ.. 56ನೇ ಪ್ರಯತ್ನದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದ 77ರ ವೃದ್ಧ..! ಈಗ 12ನೇ ತರಗತಿ ಪರೀಕ್ಷೆಗೆ ದಾಖಲು..!!

ಜಲೋರ್: ನಿಮ್ಮಲ್ಲಿ ಉತ್ಸಾಹವಿದ್ದರೆ, ಏನು ಬೇಕಾದರೂ ಸಾಧ್ಯ ಮತ್ತು ಅದಕ್ಕೆ ಉಜ್ವಲ ಉದಾಹರಣೆಯೆಂದರೆ ರಾಜಸ್ಥಾನದ ವ್ಯಕ್ತಿ. ಕನಸುಗಳನ್ನು ನನಸಾಗಿಸಲು ತಡ ಎಂಬುದಿಲ್ಲ ಎಂದು ಸಾಬೀತುಪಡಿಸುವ ಮೂಲಕ, 77 ವರ್ಷದ ಜಲೋರ್‌ನ ನಿವೃತ್ತ ಸರ್ಕಾರಿ ನೌಕರ ಹುಕುಮ್‌ದಾಸ್ ವೈಷ್ಣವ್, ಹತ್ತನೇ ತರಗತಿ ಪರೀಕ್ಷೆಯನ್ನು ತಮ್ಮ 56ನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. 55 ಸಲದ ಪ್ರಯತ್ನದಲ್ಲಿ ಅವರಿಗೆ ಉತ್ತೀರ್ಣವಾಗಲು ಸಾಧ್ಯವಾಗಿರಲಿಲ್ಲ. … Continued

ಉತ್ತರ ಪ್ರದೇಶ: ಮತ್ತೊಬ್ಬ ಸಚಿವ ಧರಂ ಸಿಂಗ್ ಸೈನಿ ರಾಜೀನಾಮೆ, ಮೂರು ದಿನದಲ್ಲಿ ಮೂವರು ಸಚಿವರ ಕಳೆದುಕೊಂಡ ಬಿಜೆಪಿ..!

ಲಕ್ನೋ: ಉತ್ತರ ಪ್ರದೇಶದ ಸಚಿವ ಧರಂ ಸಿಂಗ್ ಸೈನಿ ಗುರುವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಮೂರ್ನಾಲ್ಕು ದಿನಗಳಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಒಂಬತ್ತನೇ ಶಾಸಕ ಹಾಗೂ ಮೂರನೇ ಸಚಿವರಾಗಿದ್ದಾರೆ. ಹಿಂದಿನ ದಿನ, ಧರಂ ಸಿಂಗ್ ಸೈನಿ ಅವರಿಗೆ ರಾಜ್ಯ ಸರ್ಕಾರ ಮಂಜೂರು ಮಾಡಿದ ಭದ್ರತೆ ಮತ್ತು ತಮಗೆ ನೀಡಿದ್ದ … Continued

ಕೋವಿಡ್‌ ಲಸಿಕೆ ಹಾಕಿಸಿಕೊಳ್ಳದವರಿಗೆ ಓಮಿಕ್ರಾನ್‌ ಅಪಾಯಕಾರಿ ವೈರಸ್‌: ವೈರಸ್, ಉಲ್ಬಣದ ಮಧ್ಯೆ ಡಬ್ಲ್ಯುಎಚ್‌ಒ ಮುಖ್ಯಸ್ಥರ ಎಚ್ಚರಿಕೆ

ಜಿನೀವಾ: ಭಾರತ ಸೇರಿದಂತೆ ಪ್ರಪಂಚದಾದ್ಯಂತ ಕೋವಿಡ್-19 ಪ್ರಕರಣಗಳ ಬೃಹತ್ ಉಲ್ಬಣದ ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು, ಓಮಿಕ್ರಾನ್ ರೂಪಾಂತರವು ವಿಶೇಷವಾಗಿ ಲಸಿಕೆ ಹಾಕಿಸಿಕೊಳ್ಳದವರಿಗೆ “ಅಪಾಯಕಾರಿ ವೈರಸ್” ಎಂದು ಎಚ್ಚರಿಸಿದ್ದಾರೆ. ಓಮಿಕ್ರಾನ್ ಡೆಲ್ಟಾಕ್ಕಿಂತ ಕಡಿಮೆ ತೀವ್ರವಾದ ರೋಗವನ್ನು ಉಂಟುಮಾಡುತ್ತದೆ, ಆದರೆ ಇದು ಅಪಾಯಕಾರಿ ವೈರಸ್ ಆಗಿ ಉಳಿದಿದೆ, ವಿಶೇಷವಾಗಿ … Continued

ಕಾಂಗ್ರೆಸ್‌ ನಾಯಕ ವೀರಪ್ಪ ಮೊಯ್ಲಿಗೆ ಕೊರೊನಾ ಸೋಂಕು

posted in: ರಾಜ್ಯ | 0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ಈಗ ಮನೆ ಪ್ರತ್ಯೇಕತೆಯಲ್ಲಿದ್ದಾರೆ. ಈ ಕುರಿತು ಅವರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನನಗೂ ಕೊರೊನಾ ಸೋಂಕು ದೃಢಪಟ್ಟಿದೆ. ನನಗೆ ಕೆಮ್ಮು ಮತ್ತು ಜ್ವರವಿದೆ. ನಾನು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದೇನೆ. ಹೀಗಾಗಿ ಕೊರೊನಾ ಹೆಚ್ಚು ಪರಿಣಾಮ … Continued

ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ರದ್ದು

posted in: ರಾಜ್ಯ | 0

ಬೆಂಗಳೂರು: ಕೋವಿಡ್‌ -19 ನಿರ್ಬಂಧ ಇದ್ದರೂ ಸರ್ಕಾರಕ್ಕೆ ಸಡ್ಡು ಹೊಡೆದ ಆರಂಭಿಸಿದ್ದ ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್‌ ನಾಯಕರು ಹೈಕೋರ್ಟ್‌ ತರಾಟೆಯ ನಂತರ ಇಂದು ಕೊನೆಗೊಳಿಸಿದ್ದಾರೆ. ಸರ್ಕಾರದ ಆದೇಶ ಮತ್ತು ಹೈಕೋರ್ಟ್‌ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಇಂದು, ಗುರುವಾರ ಬೆಳಿಗ್ಗೆ ರಾಮನಗರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಮೇಕೆದಾಟು ಪಾದಯಾತ್ರೆಯನ್ನು ಸದ್ಯಕ್ಕೆ ಮುಂದೂಡಲು ರಾಜ್ಯ ಕಾಂಗ್ರೆಸ್ … Continued

ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಕೊರೊನಾ ಸೋಂಕು

posted in: ರಾಜ್ಯ | 0

ಬೆಂಗಳೂರು: ಮೊದಲ ದಿನದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜನವರಿ 9ರಂದು ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿ ವೇದಿಕೆಯಲ್ಲಿ ಭಾಷಣ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊರೊನಾ ಲಕ್ಷಣ ರಹಿತ ಸೋಂಕು ತಗುಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಟ್ವೀಟ್‌ … Continued

ಡಿಎನ್​ಎ ಟೆಸ್ಟ್​ನಲ್ಲಿ ನಿಜಾಂಶ ಬಯಲಾಯ್ತು…14 ವರ್ಷಗಳಲ್ಲಿ ಹಾಲು ಮಾರಾಟಗಾರ 800 ಮಕ್ಕಳಿಗೆ ತಂದೆ..!

ದಕ್ಷಿಣ ಕ್ಯಾಲಿಫೋರ್ನಿಯಾದ ಹಾಲು ಮಾರಾಟಗಾರನೊಬ್ಬ 800 ಮಕ್ಕಳ ತಂದೆ ಎನ್ನುವ ಸತ್ಯವೊಂದು ಡಿಎನ್​ಎ ಪರೀಕ್ಷೆಯಲ್ಲಿ ಬಯಲಾಗಿದೆ ಎಂದು ಡೈಲಿ ಮೇಲ್​ ಸುದ್ದಿ ಸಂಸ್ಥೆ ವರದಿ ಮಾಡಿದೆ. 1950 ರಿಂದ 1964ರ ಅವಧಿಯಲ್ಲಿ ರಾಂಡಾಲ್​ ಎನ್ನುವ ವ್ಯಕ್ತಿ ಮನೆಮನೆಗೆ ಹಾಲು ಮಾರಾಟ ಮಾಡುತ್ತಿದ್ದ. ಆಗಿನ ಸಂದರ್ಭದಲ್ಲಿ ಹಾಲಿನ ಪ್ಯಾಕೆಟ್‌ಗಳು ಇಲ್ಲದ ಕಾರಣ ರಾಂಡಾಲ್​ ಸಾನ್​ ಡಿಗಿಯೋ ಸುತ್ತಮುತ್ತಲಿನ … Continued

ಸೈನಾ ನೆಹ್ವಾಲ್ ಟ್ವೀಟ್‌ಗೆ ಅಸಭ್ಯತೆಯ ಕಾಮೆಂಟ್ : ನಟ ಸಿದ್ಧಾರ್ಥ ಮೇಲೆ ಪ್ರಕರಣ ದಾಖಲು

ಹೈದರಾಬಾದ್‌: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರಿಗೆ ಮಾಡಿದ ಅಸಭ್ಯತೆಯ ಕಾಮೆಂಟ್ ನಟ ಸಿದ್ಧಾರ್ಥ್ ಅವರನ್ನು ಕಾಡುತ್ತಲೇ ಇದೆ. ಇದೀಗ, ಬಿಜೆಪಿ ನಾಯಕರಾದ ನೀಲಂ ಭಾರ್ಗವ ರಾಮ್ ಮತ್ತು ಪ್ರೇರಣಾ ಟಿ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಹೈದರಾಬಾದ್ ಪೊಲೀಸರು ನಟ ಸಿದ್ಧಾರ್ಥ್ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸಿದ್ದಾರೆ. ನಟನ ವಿರುದ್ಧ ಐಟಿ ಕಾಯ್ದೆಯ … Continued