ಸವಾಲು ಹಾಕಿ, ಸ್ವಯಂ ಪ್ರೇರಿತವಾಗಿ ತಾನೇ ಕೋವಿಡ್‌ ವೈರಸ್‌ ಅಂಟಿಸಿಕೊಂಡಿದ್ದ ಗಾಯಕಿ ಹನಾ ಹೊರ್ಕಾ ಸಾವು..!

ಕೋವಿಡ್ ವೈರಸ್‌ ಅನ್ನು ಸ್ವಯಂ ಪ್ರೇರಿತವಾಗಿ ಕೊರೊನಾ ಅಂಟಿಸಿಕೊಂಡ ನಂತರ ಲಸಿಕಾ ವಿರೋಧಿ ಜೆಕ್ ಜನಪದ ಗಾಯಕಿ ಹನಾ ಹೊರ್ಕಾ ಸಾವಿಗೀಡಾಗಿದ್ದಾರೆ
ಅಸೋನಾನ್ಸ್ ಬ್ಯಾಂಡ್‌ಗೆ ಗಾಯಕರಾಗಿದ್ದ ಹನಾ ಹೊರ್ಕಾ ತಮ್ಮ 57 ನೇ ವಯಸ್ಸಿನಲ್ಲಿ ನಿಧನರಾದರು
ಕಳೆದ ವರ್ಷದ ಕ್ರಿಸ್‌ಮಸ್‌ಗೂ ಮುನ್ನ ಈಕೆಯ ಪತಿ ಹಾಗೂ ಪುತ್ರ ಲಸಿಕೆ ಹಾಕಿಸಿಕೊಂಡಾಗ ಇದನ್ನು ಹನಾ ತೀವ್ರವಾಗಿ ವಿರೋಧಿಸಿದ್ದರು. ಜೊತೆಗೆ ಸ್ವಯಂಪ್ರೇರಣೆಯಿಂದ ಕೊರೊನಾ ವೈರಸ್‌ಗೆ ತಮ್ಮನ್ನು ಒಡ್ಡಿಕೊಂಡಿದ್ದರು. ಲಸಿಕೆಯನ್ನು ಪಡೆಯದೆಯೇ ಅವರು ಸಾಮಾನ್ಯವಾಗಿ ಬದುಕಲು ನಿರ್ಧರಿಸಿದ್ದರು. ವ್ಯಾಕ್ಸಿನೇಷನ್ ಮಾಡುವುದಕ್ಕಿಂತ ರೋಗವನ್ನೇ ಅಂಟಿಸಿಕೊಳ್ಳಲು ಆದ್ಯತೆ ನೀಡಿದ್ದರು ಎಂದು ಹೇಳಿದ್ದಾರೆ.
ಕೋವಿಡ್‌ ಅಂಟಿಸಿಕೊಂಡ ಬಳಿಕ ಸ್ಥಿತಿ ತೀವ್ರವಾಗಿದ್ದರೂ ನಾನು ಬದುಕುಳಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದ ಎರಡೇ ದಿನಕ್ಕೆ ಖ್ಯಾತ ಗಾಯಕಿ ಹನಾ ಹೊರ್ಕಾ ಮೃತಪಟ್ಟಿದ್ದಾರೆ. 1 ಕೋಟಿ 70 ಸಾವಿರ ಜನರಿರುವ ಜೆಕ್‌ ಗಣರಾಜ್ಯದಲ್ಲಿ ನಿತ್ಯ 20 ಸಾವಿರ ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿವೆ.
ಹನಾ ಹೊರ್ಕಾ ಸಾವಿಗೆ ಸ್ಥಳೀಯ ವ್ಯಾಕ್ಸ್ ವಿರೋಧಿ ಆಂದೋಲನ ಕಾರಣ ಎಂದು ಅವರ ಪುತ್ರ ರೆಕ್ ಆರೋಪಿಸಿದ್ದಾರೆ. ಈ ವ್ಯಾಕ್ಸ್ ವಿರೋಧಿ ಆಂದೋಲನಕಾರರು ವ್ಯಾಕ್ಸಿನೇಷನ್ ವಿರುದ್ಧ ತನ್ನ ತಾಯಿಗೆ ಮನವರಿಕೆ ಮಾಡಿದ್ದಾರೆ ಮತ್ತು ಹೀಗಾಗಿ ಈ ಘಟನೆ ನಡೆಯಿತು ಎಂದು ಅವರು ಹೇಳಿದ್ದಾರೆ.
ಅವಳನ್ನು ಯಾರು ಪ್ರಭಾವಿಸಿದ್ದಾರೆಂದು ನನಗೆ ನಿಖರವಾಗಿ ತಿಳಿದಿದೆ … ಅವಳು ತನ್ನ ಕುಟುಂಬಕ್ಕಿಂತ ಹೆಚ್ಚಾಗಿ ಅಪರಿಚಿತರನ್ನು ನಂಬಿದ್ದಾಳೆಂದು ನನಗೆ ದುಃಖವಾಗುತ್ತದೆ” ಎಂದು ರೆಕ್ ಹೇಳಿದರು.

10.7 ಮಿಲಿಯನ್ ಜನರಿರುವ ದೇಶವು ಮಂಗಳವಾರ 20,000 ಕ್ಕೂ ಹೆಚ್ಚು ಹೊಸ ಕೋವಿಡ್ ಸೋಂಕುಗಳನ್ನು ದಾಖಲಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ