ಭಾರತದ ವಿರುದ್ಧ ತನ್ನ ಕೆಟ್ಟ ಉದ್ದೇಶ ಈಡೇರಿಸಿಕೊಳ್ಳಲು ಪಾಕಿಸ್ತಾನದಿಂದ ಸಿಖ್ಖರ ದರ್ಬಳಕೆ:ಮಾಜಿ ಖಲಿಸ್ತಾನಿ ನಾಯಕ

ನವದೆಹಲಿ: ಭಾರತದ ವಿರುದ್ಧ ತನ್ನ ದುಷ್ಟ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಪಾಕಿಸ್ತಾನವು ಸಿಖ್ಖರನ್ನು ಬಳಸಿಕೊಳ್ಳುತ್ತಿದೆ ಎಂದು ದಾಲ್ ಖಾಲ್ಸಾ ಸಂಸ್ಥಾಪಕ ಹಾಗೂ ಬ್ರಿಟನ್ ಮೂಲದ ಸಿಖ್ ಪ್ರತ್ಯೇಕತಾವಾದಿ ನಾಯಕ ಜಸ್ವಂತ್ ಸಿಂಗ್ ಥೇಕೆದಾರ್ ಆರೋಪಿಸಿದ್ದಾರೆ.
ಟೈಮ್ಸ್ ನೌಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಖಲಿಸ್ತಾನ್ ಪರ ನಾಯಕರಾಗಿರುವ ತೆಕೆದಾರ್, ಸಿಖ್ಖರ ಕಲ್ಯಾಣದ ಬಗ್ಗೆ ಪಾಕಿಸ್ತಾನ ಕಕಿಂಚಿತ್ತೂ ಕಾಳಜಿ ಹೊಂದಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನ ಎಂದಿಗೂ ಸಿಖ್ಖರ ಸಹಾನುಭೂತಿ ಹೊಂದಿಲ್ಲ ಮತ್ತು ಅದು ಎಂದಿಗೂ ಸಹಾನುಭೂತಿ ತೋರುವುದಿಲ್ಲ. ಅವರು ಎಂದಿಗೂ ಖಲಿಸ್ತಾನಿಗಳಿಗೆ ಸಹಾಯ ಮಾಡುವುದಿಲ್ಲ. ಪಾಕಿಸ್ತಾನವು ಖಲಿಸ್ತಾನಿಗಳಿಗೆ ಸಹಾಯ ಮಾಡಲು ಬಯಸಿದರೆ, ಅದು ರಾಜಕೀಯ ಆಶ್ರಯ ಬಯಸುವವರಿಗೆ ಪಾಸ್‌ಪೋರ್ಟ್‌ಗಳನ್ನು ಏಕೆ ನೀಡಲಿಲ್ಲ? ಅವರ ಬಳಿ ನಿವಾಸ ಪರವಾನಗಿಯೂ ಇಲ್ಲ. ಕೇವಲ ಭಾರತವನ್ನು ಗುರಿಯಾಗಿಸಲು ಪಾಕಿಸ್ತಾನ ಕಳೆದ 40 ವರ್ಷಗಳಿಂದ ಸಿಖ್ಖರನ್ನು ಆಸರೆಯಾಗಿ ಬಳಸುತ್ತಿದೆ ಎಂದು ಅವರು ಹೇಳಿದರು.
ಸಿಖ್ಖರ ಕಲ್ಯಾಣಕ್ಕಾಗಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಅವರು ಒಪ್ಪಿಕೊಂಡರು. ಪಾಕಿಸ್ತಾನ ನಮ್ಮ ಶತ್ರು ದೇಶ ಎಂಬುದನ್ನು ಸಿಖ್ಖರು ಅರಿತುಕೊಂಡಿದ್ದಾರೆ. 1947ರ ನಂತರ, ಭಾರತ ಸರ್ಕಾರವು ಎರಡು ವಕ್ಫ್ ಬೋರ್ಡ್‌ಗಳನ್ನು ಸ್ಥಾಪಿಸಿತು – ಒಂದು ಸುನ್ನಿಗಳಿಗೆ ಮತ್ತು ಇನ್ನೊಂದು ಶಿಯಾಗಳಿಗೆ ಆದರೆ ಪಾಕಿಸ್ತಾನದಲ್ಲಿ, ಅವರು ಹಿಂದೂ ದೇವಾಲಯಗಳು ಅಥವಾ ಸಿಖ್ ಗುರುದ್ವಾರಗಳಿಗೆ ಒಂದೇ ಒಂದು ವಕ್ಫ್ ಬೋರ್ಡ್ ಅನ್ನು ಸಹ ಮಾಡಲಿಲ್ಲ. ಬದಲಿಗೆ ಪಾಕಿಸ್ತಾನವು ಈ ಆಸ್ತಿಗಳ ಮಾಲೀಕತ್ವವನ್ನು ಪಡೆದುಕೊಂಡಿದೆ ಮತ್ತು ಇಂದಿನವರೆಗೆ ಲಕ್ಷಾಂತರ ಹಣವನ್ನು ಗಳಿಸುತ್ತಿದೆ. ಗುರುದ್ವಾರಗಳಲ್ಲಿ ಕುಳಿತಾಗ ಜೇಬಿನಲ್ಲಿ ಸಿಗರೇಟು ಹಿಡಿದುಕೊಂಡು ಹೋಗುತ್ತಾರೆ” ಎಂದು ಹೇಳಿದರು.
ಪಾಕಿಸ್ತಾನದಲ್ಲಿ, ಇಸ್ಲಾಂ ಧರ್ಮವನ್ನು ಅನುಸರಿಸದ ಎಲ್ಲರಿಗೂ – ಅದು ಸಿಖ್ಖರು, ಹಿಂದೂಗಳು ಅಥವಾ ಕ್ರಿಶ್ಚಿಯನ್ನರು – ಕಾಫಿರ್ ಎಂದು ಹೆಸರಿಸಲಾಗಿದೆ … ಭಾರತದ ವಿರುದ್ಧ ಹೋರಾಡುವ ನೆಪದಲ್ಲಿ, ಅವರು ಸಿಖ್ಖರ ಸಹಾಯವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಹೇಳಿದರು.
ನಿಷೇಧಿತ ಖಲಿಸ್ತಾನ್ ಪರ ಸಂಘಟನೆಯ ಸಿಖ್ಸ್ ಫಾರ್ ಜಸ್ಟಿಸ್‌ನ ಅಮೆರಿಕ ಮೂಲದ ಸದಸ್ಯ ಗುರುಪತ್‌ವಂತ್ ಸಿಂಗ್ ಪನ್ನುನ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ಗುರ್ಪತ್ವಂತ್ ಸಿಂಗ್ ಪನ್ನೂನ್ ಸಿಖ್ ಕೂಡ ಅಲ್ಲ, ಅವರು ಪಾಕಿಸ್ತಾನದ ಲಿಪಿಯನ್ನು ಗಿಳಿಪಾಠ ಮಾಡುತ್ತಾರೆ. ಅವರು ಪಾಕಿಸ್ತಾನದ ನಿರ್ದೇಶನದಂತೆ ಮತ್ತು ಕೇವಲ ಹಣಕ್ಕಾಗಿ ಹೇಳಿಕೆ ನೀಡುತ್ತಾರೆ. ಅವರು ಎಂದಿಗೂ ಖಲಿಸ್ತಾನಕ್ಕಾಗಿ ಹೋರಾಡುವುದಿಲ್ಲ. ಮತ್ತು ಹಿಂದೆಂದೂ ಮಾಡಲಿಲ್ಲ. ಅವರ ಉದ್ದೇಶ ಕೇವಲ ಹಣ ಮಾಡುವುದೇ ಹೊರತು ಖಾಲ್ಸಾ ಅಲ್ಲ. ಅವರು ಕೇವಲ ಭಾರತದ ಜನರನ್ನು ಪ್ರಚೋದಿಸುತ್ತಿದ್ದಾರೆ. ಭಾರತದ ವಿರುದ್ಧ ಹೇಳಿಕೆ ನೀಡಿ ಹಿಂಸಾಚಾರ ಎಸಗಲು ಹಣ ಪಡೆಯುತ್ತಾರೆ ಎಂದು ಅವರು ಹೇಳಿದರು.

ಓದಿರಿ :-   ಟೋಕಿಯೊದಲ್ಲಿ ಜಪಾನಿನ ಮಕ್ಕಳೊಂದಿಗೆ ಪ್ರಧಾನಿ ಮೋದಿ ಹಿಂದಿ ಸಂವಾದ ವೈರಲ್ | ವೀಕ್ಷಿಸಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ