ಪಾಕಿಸ್ತಾನದ ಸಿಂಧ್‌ನಲ್ಲಿ ಹಿಂಗ್ಲಜ್ ಮಾತಾ ದೇವಾಲಯ ಧ್ವಂಸ: ಇದು 22 ತಿಂಗಳಲ್ಲಿ 11ನೇ ಘಟನೆ

ಸಿಂಧ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಥಾರ್ಪಾರ್ಕರ್ ಜಿಲ್ಲೆಯ ಹಿಂಗ್ಲಜ್ ಮಾತಾ ದೇವಸ್ಥಾನವನ್ನು ದುಷ್ಕರ್ಮಿಗಳ ಗುಂಪೊಂದು ಧ್ವಂಸಗೊಳಿಸಿದೆ.
ಕಳೆದ 22 ತಿಂಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂ ದೇಗುಲಗಳ ಮೇಲೆ ನಡೆದ 11ನೇ ದಾಳಿ ಇದಾಗಿದೆ.
ಘಟನೆಯನ್ನು ಖಂಡಿಸಿರುವ ಪಾಕಿಸ್ತಾನ ಹಿಂದೂ ಮಂದಿರ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಕ್ರಿಶೇನ್ ಶರ್ಮಾ, ಇಸ್ಲಾಂ ಮೂಲಭೂತವಾದಿಗಳು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಅಲ್ಪಸಂಖ್ಯಾತರ ಹಕ್ಕುಗಳ ಆಯೋಗದ ಇತ್ತೀಚಿನ ವರದಿಯು ದೇಶದ ಅತ್ಯಂತ ಪೂಜ್ಯ ಹಿಂದೂ ತಾಣಗಳ ತೊಂದರೆಯಯನ್ನು ಬಹಿರಂಗಪಡಿಸಿದೆ.
ಕಳೆದ ತಿಂಗಳು ದೇಶದ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಪಾಕಿಸ್ತಾನ ಸರ್ಕಾರದ ಶಾಸನಬದ್ಧ ಮಂಡಳಿಯಾದ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಅಲ್ಪಸಂಖ್ಯಾತ ಸಮುದಾಯದ ಪ್ರಾಚೀನ ಮತ್ತು ಪವಿತ್ರ ಸ್ಥಳಗಳನ್ನು ನಿರ್ವಹಿಸಲು ವಿಫಲವಾಗಿದೆ ಎಂದು ಹೇಳುತ್ತದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಅಲ್ಪಸಂಖ್ಯಾತರು ಮತ್ತು ಇಸ್ಲಾಮಿಕ್ ಅಲ್ಲದ ಧಾರ್ಮಿಕ ರಚನೆಗಳ ಮೇಲಿನ ದಾಳಿಗಳ ಬಗ್ಗೆ ಭಾರತವು ಹಲವಾರು ಸಂದರ್ಭಗಳಲ್ಲಿ ಕಳವಳ ವ್ಯಕ್ತಪಡಿಸಿದೆ.
ಕಳೆದ ವರ್ಷ, ಸಿಂಧ್‌ನ ಮಾತಾ ರಾಣಿ ಭಾಟಿಯಾನಿ ಮಂದಿರ, ಗುರುದ್ವಾರ ಶ್ರೀ ಜನಮ್ ಸ್ಥಾನ, ಖೈಬರ್ ಪಖ್ತುಂಖ್ವಾದಲ್ಲಿನ ಕರಾಕ್‌ನಲ್ಲಿರುವ ಹಿಂದೂ ದೇವಾಲಯ ಸೇರಿದಂತೆ ಹಲವಾರು ದೇವಾಲಯಗಳ ಮೇಲೆ ಪಾಕಿಸ್ತಾನದಲ್ಲಿ ದಾಳಿ ನಡೆಸಲಾಗಿತ್ತು.
ಪಾಕಿಸ್ತಾನದಲ್ಲಿ ಹಿಂದೂಗಳು ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯ. ಅಧಿಕೃತ ಅಂದಾಜಿನ ಪ್ರಕಾರ, 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ, ಹೆಚ್ಚಾಗಿ ಸಿಂಧ್ ಪ್ರಾಂತ್ಯದಲ್ಲಿ ಅವರು ವಾಸಿಸುತ್ತಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement