ಶಿರಸಿ: ಉಪನ್ಯಾಸಕನ ಹುದ್ದೆ ಕೊಡಿಸುವುದಾಗಿ ನಂಬಿಸಿ ಬಲವಂತವಾಗಿ ಮಹಿಳೆ ಜೊತೆ ಅಶ್ಲೀಲ ಫೋಟೋ ತೆಗೆದು ಬ್ಲ್ಯಾಕ್‌ ಮೇಲ್ – ಮೂವರ ಬಂಧನ

ಶಿರಸಿ: ಉದ್ಯೋಗ ಕೊಡಿಸುವುದಾಗಿ ಹೇಳಿ ಬ್ಲ್ಯಾಕ್‌ ಮೇಲ್‌ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರನ್ನು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಶಿರಸಿ ಉಂಚಳ್ಳಿ  ಕೆರೆಜಡ್ಡಿಯ ಅಜಿತ ಶ್ರೀಕಾಂತ್ ನಾಡಿಗ (25), ಬನವಾಸಿಯ ಧನುಶ್ಯ ಕುಮಾರ್ ಅಲಿಯಾಸ್‌ ದಿಲೀಪ್ ಕುಮಾರ್ ಶೆಟ್ಟಿ (25) ಮತ್ತು ಶಿವಮೊಗ್ಗ ನಗರದ ರಂಗನಾಥ ಬಡಾವಣೆಯ  ಪದ್ಮಜಾ ಡಿ.ಎನ್ (50) ಬಂಧಿತ ಆರೋಪಿಗಳು.
ಇವರು ಶಿರಸಿ ಮೂಲದ ವ್ಯಕ್ತಿಗೆ ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ 17 ಜನವರಿ 2022ರಂದು ಶಿವಮೊಗ್ಗಕ್ಕೆ ಕರೆಸಿಕೊಂಡು ಕೋಣೆಯಲ್ಲಿ ಕೂಡಿ ಹಾಕಿ ನಗ್ನಗೊಳಸಿ ಮಹಿಳೆಯೊಂದಿಗೆ ನಿಲ್ಲಿಸಿ ಫೋಟೋ ತೆಗೆದು, ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ 15 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ಹಣ ನೀಡದಿದ್ದರೆ ಫೋಟೋ ಮತ್ತು ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
18 ಜನವರಿ 2022 ರಂದು ಶಿರಸಿ ಮೂಲದ ವ್ಯಕ್ತಿಯ ತಂದೆಯ ಬಳಿ ಅವುಗಳನ್ನು ಡಿಲೀಟ್ ಮಾಡಲು 15 ಲಕ್ಷ ರೂ. ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಲ್ಲದೇ ಬಲವಂತವಾಗಿ ನಕಲಿ ದಾಖಲೆ ಸೃಷ್ಟಿ ಮಾಡಿ ಸುಳ್ಳು ಕರಾರು ಪತ್ರ ಬರೆಸಿಕೊಂಡಿದ್ದಲ್ಲದೇ ಬ್ಲ್ಯಾಂಕ್ ಚೆಕ್ ಪಡೆದಿದ್ದರು ಎಂದು ಆರೋಪಿಸಲಾಗಿದೆ.
ಒಂದು ವೇಳೆ 15 ಲಕ್ಷ ರೂ. ಹಣ ಕೊಡದೇ ಇದ್ದರೆ ಬಲತ್ಕಾರದ ದೂರು ದಾಖಲಿಸುವುದಾಗಿ ಇಲ್ಲವೇ ಕೊಲೆ ಮಾಡುವುದಾಗಿ ಹೆದರಿಸಿದ್ದರು. ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ನೊಂದ ವ್ಯಕ್ತಿ ದೂರು ದಾಖಲಿಸಿದ್ದರು. ಕೂಡಲೇ ಕಾರ್ಯಪ್ರವೃತರಾದ ಪೊಲೀಸರು ಆರೋಪಿಗಳನ್ನು ಒಂದೇ ದಿನದಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement