ಪಂಜಾಬಿನಲ್ಲಿ ರಾಹುಲ್ ಗಾಂಧಿ ಭದ್ರತೆಯಲ್ಲಿ ಲೋಪ, ಲುಧಿಯಾನದಲ್ಲಿ ಅವರ ಮುಖಕ್ಕೆ ಧ್ವಜ ಎಸೆದ ಕಾರ್ಯಕರ್ತ..! ದೃಶ್ಯ ವಿಡಿಯೊದಲ್ಲಿ ಸೆರೆ

ನವದೆಹಲಿ:  ರಸ್ತೆ ಮಾರ್ಗವಾಗಿ  ಪಂಜಾಬಿನ ಲೂಧಿಯಾನಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭದ್ರತಾ ಲೋಪ ಎಸಗಿರುವ ಘಟನೆ ನಡೆದಿದೆ.
ಪಕ್ಷದ ಜನರನ್ನು ಸ್ವಾಗತಿಸಲು ರಾಹುಲ್ ಗಾಂಧಿ ಅವರು ತಮ್ಮ ಕಾರಿನ ಕಿಟಕಿಯನ್ನು ತೆಗೆದಾಗ ಇದ್ದಕ್ಕಿದ್ದಂತೆ ಕಾರ್ಯಕರ್ತರಲ್ಲೊಬ್ಬರು ಅವರ ಮುಖಕ್ಕೆ ಧ್ವಜವನ್ನು ಎಸೆದ ಘಟನೆ ನಡೆದಿದೆ. ಧ್ವಜವನ್ನು ಎಸೆದ ವ್ಯಕ್ತಿಯನ್ನು ಗುರುತಿಸಲಾಗಿದೆ ಮತ್ತು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಭಾವೋದ್ವೇಗಕ್ಕೆ ಒಳಗಾಗಿ ರಾಹುಲ್‌ ಗಾಂಧಿ ಮೇಲೆ ಧ್ವಜ ಎಸೆದಿರುವುದಾಗಿ ಕಾಂಗ್ರೆಸ್ ಕಾರ್ಯಕರ್ತ ಪೊಲೀಸರಿಗೆ ತಿಳಿಸಿದ್ದಾರೆ. ಲುಧಿಯಾನದಲ್ಲಿ ನಡೆದ ವರ್ಚುವಲ್ ರ್ಯಾಲಿಯಲ್ಲಿ ರಾಹುಲ್ ಗಾಂಧಿಯವರು ಚರಣಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್ ಚುನಾವಣೆಗೆ ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ.
ಗರೀಬ್ ಘರ್” (ಬಡ ಕುಟುಂಬ) ನಿಂದ ನಮಗೆ ಮುಖ್ಯಮಂತ್ರಿ ಬೇಕು ಎಂದು ಪಂಜಾಬ್ ಜನರು ಹೇಳಿದ್ದಾರೆ,” ಎಂದು ಅವರು ಹೇಳಿದ್ದರು.

ಈ ವರ್ಷ ಪಂಜಾಬ್‌ನಲ್ಲಿ ವಿವಿಐಪಿ ಭದ್ರತಾ ಲೋಪದ ಎರಡನೇ ಘಟನೆ ಇದಾಗಿದೆ. ಕಳೆದ ತಿಂಗಳು ಪಂಜಾಬ್‌ನ ಫಿರೋಜ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಭಾರೀ ಲೋಪವಾಗಿತ್ತು.
ಜನವರಿ 5 ರಂದು ಫಿರೋಜ್‌ಪುರದಲ್ಲಿ ರೈತರ ಪ್ರತಿಭಟನೆಯಿಂದಾಗಿ ಪ್ರಧಾನಿಯವರ ಬೆಂಗಾವಲು ಪಡೆ ಮೇಲ್ಸೇತುವೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು, ನಂತರ ಅವರು ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗದೆ ಪಂಜಾಬ್‌ನಿಂದ ವಾಪಸ್ಸಾಗಿದ್ದರು.
ಫೆಬ್ರವರಿ 14 ರಂದು ಪಂಜಾಬ್ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಪ್ರಮುಖ ಸುದ್ದಿ :-   ವಿಶ್ವದಾದ್ಯಂತ ಕೋವಿಡ್ ಲಸಿಕೆ ಹಿಂತೆಗೆದುಕೊಂಡ ಆಸ್ಟ್ರಾಜೆನೆಕಾ : ವರದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement