ಕ್ರಿಸ್ಟಿಯಾನೋ ರೊನಾಲ್ಡೊ ಇನ್‌ಸ್ಟಾಗ್ರಾಮ್‌ನಲ್ಲಿ 400 ಮಿಲಿಯನ್ ((40 ಕೋಟಿ) ಫಾಲೋವರ್ಸ್ ತಲುಪುವ ಮೂಲಕ ಇತಿಹಾಸವನ್ನು ಸೃಷ್ಟಸಿದ್ದಾರೆ. ಇನ್‌ಸ್ಟಾಗ್ರಾಮ್ (Instagram)ನಲ್ಲಿ 40 ಕೋಟಿ ಅನುಯಾಯಿಗಳನ್ನು ತಲುಪಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೈಲಿ ಜೆನ್ನರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 309 ಮಿಲಿಯನ್ (30.9 ಕೋಟಿ) ಅನುಯಾಯಿಗಳೊಂದಿಗೆ ಪಟ್ಟಿಯಲ್ಲಿ ಮುಂದಿನ ಸೆಲೆಬ್ರಿಟಿಯಾಗಿದ್ದಾರೆ ಲಿಯೋನೆಲ್ ಮೆಸ್ಸಿ ಒಟ್ಟಾರೆ ಪಟ್ಟಿಯಲ್ಲಿ ಮೂರನೇ ಮತ್ತು 306 ಮಿಲಿಯನ್ (30.6 ಕೋಟಿ) ಅನುಯಾಯಿಗಳೊಂದಿಗೆ ಕ್ರೀಡಾಪಟುಗಳ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಕ್ರಿಸ್ಟಿಯಾನೋ ರೊನಾಲ್ಡೊ ಫುಟ್ಬಾಲ್ ಜಗತ್ತಿನಲ್ಲಿ ದಾಖಲೆಗಳನ್ನು ಮುರಿಯುವುದು ವಿಚಿತ್ರವೇನಲ್ಲ. ಅವರು ಆಡಿದ ವಿವಿಧ ಕ್ಲಬ್‌ಗಳು ಅಥವಾ ರಾಷ್ಟ್ರೀಯ ತಂಡಕ್ಕಾಗಿ, ರೊನಾಲ್ಡೊ ಫುಟ್‌ಬಾಲ್ ಮೈದಾನದಲ್ಲಿ ಅದ್ಭುತಗಳನ್ನು ಮಾಡಿದ್ದಾರೆ. ಆದಾಗ್ಯೂ, 37 ವರ್ಷ ವಯಸ್ಸಿನ ಕ್ರಿಸ್ಟಿಯಾನೋ ರೊನಾಲ್ಡೊ ಈಗ 40 ಕೋಟಿ ಇನ್‌ಸ್ಟಾಗ್ರಾಮ್ (Instagram) ಅನುಯಾಯಿಗಳನ್ನು ಹೊಂದುವ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ 40 ಕೋಟಿ ದಾಟಿದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ.
ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರಾದ ರೊನಾಲ್ಡೊ ಅವರು ಸಾಮಾಜಿಕ ಮಾಧ್ಯಮದಿಂದ ಅದ್ಭುತವಾದ ಆದಾಯವನ್ನು ಸಹ ಪಡೆಯುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ರೊನಾಲ್ಡೊ ಅವರ ಅಪಾರ ಬೆಳವಣಿಗೆಯು ಮುಂಬರುವ ವರ್ಷಗಳಲ್ಲಿ ಅವರಿಗೆ ದೊಡ್ಡ ಆದಾಯ ಗಳಿಸುವ ವೇದಿಕೆಯನ್ನು ನೀಡಲು ಸಿದ್ಧವಾಗಿದೆ.
ಸಪ್ಟೆಂಬರ್ 2021 ರಲ್ಲಿ, ಫೋಟೋ ಮತ್ತು ವಿಡಿಯೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಅವರ ಅಭಿಮಾನಿಗಳ ಸಂಖ್ಯೆ 237 ಮಿಲಿಯನ್‌ಗೆ ಹೆಚ್ಚಾದ ಕಾರಣ ರೊನಾಲ್ಡೊ ಇನ್‌ಸ್ಟಾಗ್ರಾಮ್ ನಲ್ಲಿ ಹೆಚ್ಚು ಅನುಸರಿಸುವ ವ್ಯಕ್ತಿಯಾಗಿದ್ದಾರೆ. ಸುಮಾರು 5 ತಿಂಗಳಲ್ಲಿ, ಇನ್‌ಸ್ಟಾಗ್ರಾಮ್ ನಲ್ಲಿ ಅವರ ಅನುಯಾಯಿಗಳ ಸಂಖ್ಯೆ ವೇಗವಾಗಿ ಏರಿದೆ.
ದಿ ಗಾರ್ಡಿಯನ್‌ನಲ್ಲಿನ ವರದಿಯ ಪ್ರಕಾರ, ರೊನಾಲ್ಡೊ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಸೆಲೆಬ್ರಿಟಿಗಳಲ್ಲಿ ಹೆಚ್ಚು ಶುಲ್ಕವನ್ನು ವಿಧಿಸುತ್ತಾರೆ, ಪ್ರತಿ ಪೋಸ್ಟ್‌ಗೆ USD 1.6 ಮಿಲಿಯನ್ (INR 11.9 ಕೋಟಿ) ಚಾರ್ಜ್ ಮಾಡುತ್ತಾರೆ.
ಒಟ್ಟಾರೆ ಸೆಲೆಬ್ರಿಟಿಗಳ ವಿಷಯಕ್ಕೆ ಬಂದರೆ, ಕೈಲಿ ಜೆನ್ನರ್ 309 ಮಿಲಿಯನ್ ಅನುಯಾಯಿಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ರೊನಾಲ್ಡೊ ಅವರ ದೊಡ್ಡ ಫುಟ್ಬಾಲ್ ಪ್ರತಿಸ್ಪರ್ಧಿ ಮೆಸ್ಸಿ ಪ್ರಸ್ತುತ 306 ಮಿಲಿಯನ್ ಅನುಯಾಯಿಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ನಟ ಡ್ವೇನ್ ಜಾನ್ಸನ್ ತಲಾ 295 ಮಿಲಿಯನ್ ಹಾಗೂ ಪಾಪ್ ಗಾಯಕಿ, ಸೆಲೆನಾ ಗೊಮೆಜ್ 294 ಅನುಯಾಯಿಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಸಂಗೀತಗಾರ್ತಿ ಮತ್ತು ನಟಿ ಅರಿಯಾನಾ ಗ್ರಾಂಡೆ 294 ಮಿಲಯನ್, ರೂಪದರ್ಶಿ ಕಿಮ್ ಕಾರ್ಡಶಿಯಾನ್ 285 ಮಿಲಿಯನ್, ಸಂಗೀತಗಾರ್ತಿ, ನಟಿ, ನಿರ್ಮಾಪಕಿ ಮತ್ತು ಉದ್ಯಮಿ ಬೆಯಾನ್ಸ್ 237 ಮಿಲಿಯನ್, ಸಂಗೀತಗಾರ ಜಸ್ಟಿನ್ ಮಿಲಿಯನ್ ಫಾಲೋವರ್ಸ್‌ನೊಂದಿಗೆ ಅನುಕ್ರಮವಾಗಿ 7, 8, 9 ಮತ್ತು 10ನೇ ಸ್ಥಾನದಲ್ಲಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ