ಮಾನವೀಯತೆಯೆಂದರೆ ಇದೇ ಅಲ್ಲವೇ…ನೀರಿನ ಕೊಳಕ್ಕೆ ಬಿದ್ದು ಒದ್ದಾಡುತ್ತಿದ್ದ ಕಾಗೆಯ ಪ್ರಾಣ ಉಳಿಸಿದ ದೈತ್ಯ ಕರಡಿ-ವೀಕ್ಷಿಸಿ

ಇತ್ತೀಚಿನ ದಿನಗಳಲ್ಲಿ ಅಪಘಾತ ಮತ್ತಿತರ ಘಟನೆಗಳು ಸಂಭವಿಸಿದಾಗ ಅವರಿಗೆ ಸಹಾಯ ಮಾಡಲು ಹಿಂದುಮುಂದು ನೋಡಿದ ಘಟನೆಗಳು ವರದಿಯಾಗುತ್ತಿವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೊವೊಂದರಲ್ಲಿ ಕರಡಿಯಿಂದ ಸಾವಿನ ದವಡೆಯಲ್ಲಿದ್ದ ಕಾಗೆಯೊಂದಕ್ಕೆ ಸಹಾಯ ಮಾಡಿ ಅದನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ..!

ಈ ವಿಡಿಯೊದಲ್ಲಿ ಕರಡಿ ತೋರಿದ ವರ್ತನೆಗೆ ಮಾನವೀಯತೆಯ ಮೇಲೆ ನಂಬಿಕೆ ಮೂಡುವುದು ಖಂಡಿತ. @Animal_World ಹೆಸರಿನ ಟ್ವಿಟ್ಟರ್‌ ಹ್ಯಾಂಡಲ್‌ನೊಂದಿಗೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕಾಗೆಯೊಂದು ದೊಡ್ಡ ಕೊಳದಲ್ಲಿ ನೀರಿನಲ್ಲಿ ಬಿದ್ದಿದೆ.
ಹೊಂಡದೊಳಗೆ ಬಿದ್ದ ಕಾಗೆಯು ನೀರಿನಿಂದ ಹೊರಬರಲು ಶತಾಯ-ಗತಾಯ ಪ್ರಯತ್ನಿಸುತ್ತಿದೆ. ಅದರ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿವೆ. ಆಗ ಅಲ್ಲಿಗೆ ಆಹಾರಕ್ಕಾಗಿ ಬಂದ ಕರಡಿ ಕೊಳದೊಳಕ್ಕೆ ಕಾಗೆ ರೆಕ್ಕೆಗಳನ್ನು ಬಡಿಯುತ್ತಿದ್ದುದನ್ನು ಕಂಡು ಕಾಗೆ ಅಪಾಯದಲ್ಲಿದೆ ಎಂದು ಗ್ರಹಿಸಿದೆ. ಆಗ ನೆರವಿಗೆ ಧಾವಿಸಿದ ಕರಡಿ ನೀರಿಗೆ ಬಗ್ಗೆ ತನ್ನ ಬಾಯಿಯ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿ ಕಾಗೆಯ ಜೀವ ಉಳಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement