ರಷ್ಯಾ-ಉಕ್ರೇನ್ ಬಿಕ್ಕಟ್ಟು ಉಲ್ಬಣ: ಪೂರ್ವ ಉಕ್ರೇನ್‌ಗೆ ತೆರಳಲು ರಷ್ಯಾ ಸೈನ್ಯಕ್ಕೆ ಅಧ್ಯಕ್ಷ ಪುಟಿನ್‌ ಆದೇಶ, ಹೆಚ್ಚಿದ ಯುದ್ಧದ ಭಯ

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪೂರ್ವ ಉಕ್ರೇನ್‌ನ ಎರಡು ಮಾಸ್ಕೋ ಬೆಂಬಲಿತ ಬಂಡಾಯ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ ಅನ್ನು ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಎಂದು ಮಾನ್ಯತೆ ನೀಡಿದ್ದಾರೆ ಮತ್ತು ನಂತರ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ಸೈನ್ಯದ ನಿಯೋಜನೆಗೆ ಆದೇಶಿಸಿದ್ದಾರೆ.
ಇದು ಸ ರಷ್ಯಾದ ಆಕ್ರಮಣದ ಭಯಕ್ಕೆ ಕಾರಣವಾಗಿದೆ ಮತ್ತು ವಿವಿಧ ದೇಶಗಳಿಂದ ತೀವ್ರ ಟೀಕೆಗಳನ್ನು ಆಹ್ವಾನಿಸಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಸೈನ್ಯಕ್ಕೆ ಪೂರ್ವ ಉಕ್ರೇನ್‌ಗೆ ಹೋಗುವಂತೆ ಆದೇಶಿಸಿದ್ದಾರೆ. ಪೂರ್ವ ಉಕ್ರೇನ್‌ನ ಡಾನ್‌ಬಾಸ್ ಪ್ರದೇಶದಲ್ಲಿ ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಅನ್ನು ಎರಡು ಬೇರ್ಪಟ್ಟ ರಾಜ್ಯಗಳೆಂದು ಮಾನ್ಯತೆ ನಂತರ ರಷ್ಯಾದ ಈ ಕ್ರಮವು ಬಂದಿದೆ. ಪುಟಿನ್‌ ರಕ್ಷಣಾ ಸಚಿವಾಲಯವನ್ನು ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ “ಶಾಂತಿಪಾಲನೆಯ ಕಾರ್ಯ ನಿರ್ವಹಿಸುವಂತೆ ಆದೇಶಿಸಿದ್ದಾರೆ.‌
ತನ್ನ ಕ್ರೆಮ್ಲಿನ್ ಕಚೇರಿಯಿಂದ 65 ನಿಮಿಷಗಳ ದೂರದರ್ಶನದ ರಾಷ್ಟ್ರೀಯ ಭಾಷಣದಲ್ಲಿ, ವ್ಲಾದಿಮಿರ್‌ ಪುಟಿನ್ ಉಕ್ರೇನ್ ಅನ್ನು ವಿಫಲ ರಾಷ್ಟ್ರ ಮತ್ತು ಪಶ್ಚಿಮದ ಕೈಗೊಂಬೆ” ಎಂದು ಬಣ್ಣಿಸಿದರು. ಎರಡು ಪ್ರದೇಶಗಳ ಸ್ವಾತಂತ್ರ್ಯವನ್ನು ತಕ್ಷಣವೇ ಗುರುತಿಸಲು ಬಹಳ ದಿನಗಳಿಂದ ಹಾಗೆಯೇ ಉಳಿದಿದ್ದ ನಿರ್ಧಾರವನ್ನು ತೆಗೆದುಕೊಳ್ಳುವುದು” ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನ ಎರಡು ಪ್ರತ್ಯೇಕತಾವಾದಿ ಪ್ರದೇಶಗಳಿಗೆ ಸೈನ್ಯವನ್ನು ಕಳುಹಿಸಲು ಆದೇಶಿಸಿದ ನಂತರ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಮಾತುಕತೆಗೆ ಸಿದ್ಧರಾಗಿದ್ದಾರೆ ಎಂದು ಮಾಸ್ಕೋ ಮಂಗಳವಾರ ಹೇಳಿದೆ. “ಅತ್ಯಂತ ಕಷ್ಟದ ಕ್ಷಣಗಳಲ್ಲಿಯೂ ಸಹ … ನಾವು ಹೇಳುತ್ತೇವೆ: ನಾವು ಮಾತುಕತೆಗೆ ಸಿದ್ಧರಿದ್ದೇವೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಯುಟ್ಯೂಬ್‌ನಲ್ಲಿ ಪ್ರಸಾರವಾದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಓದಿರಿ :-   ಭಯೋತ್ಪಾದನೆಗೆ ಹಣಕಾಸು ಪ್ರಕರಣ: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ದೋಷಿ ಎಂದು ಎನ್‌ಐಎ ನ್ಯಾಯಾಲಯ ತೀರ್ಪು

ಉಕ್ರೇನ್‌ನಲ್ಲಿ ಹೆಚ್ಚಿನ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ವಿಮಾನಗಳನ್ನು ಆಯೋಜಿಸಲಾಗುತ್ತಿದೆ ಎಂದು ಉಕ್ರೇನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ. ಫೆಬ್ರವರಿ 25, 27 ಮತ್ತು ಮಾರ್ಚ್ 6 ರಂದು ಕೈವ್‌ನಿಂದ ದೆಹಲಿಗೆ ನಾಲ್ಕು ವಿಮಾನಗಳು ಕಾರ್ಯನಿರ್ವಹಿಸಲಿವೆ ಎಂದು ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ

ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಸುತ್ತಲಿನ ಪ್ರಮುಖ ಬೆಳವಣಿಗೆಗಳು ಇಲ್ಲಿವೆ:

1. ರಷ್ಯಾ-ಉಕ್ರೇನ್ ಗಡಿಯಲ್ಲಿ ಉದ್ವಿಗ್ನತೆಯ ದಿನಗಳ ನಂತರ, ಎರಡೂ ಕಡೆಯವರು ಮಿಲಿಟರಿ ಡ್ರಿಲ್‌ಗಳನ್ನು ನಡೆಸುವುದರೊಂದಿಗೆ, ರಷ್ಯಾ ಸೋಮವಾರ ಪೂರ್ವ ಉಕ್ರೇನ್‌ನ ಡಾನ್‌ಬಾಸ್ ಪ್ರದೇಶದಲ್ಲಿ ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಎಂದು ಎರಡು ಬೇರ್ಪಟ್ಟ ರಾಜ್ಯಗಳನ್ನು ಗುರುತಿಸಿದೆ.

2. ತಕ್ಷಣವೇ ಎರಡು ಪ್ರದೇಶಗಳನ್ನು ಗುರುತಿಸಿದ ನಂತರ, ವ್ಲಾಡಿಮಿರ್ ಪುಟಿನ್ ತನ್ನ ಸೈನ್ಯವನ್ನು ಪೂರ್ವ ಉಕ್ರೇನ್‌ಗೆ ಹೊರಡುವಂತೆ ಆದೇಶಿಸಿದ್ದಾರೆ. ರಷ್ಯಾ ಈ ಕ್ರಮವನ್ನು “ಶಾಂತಿಯನ್ನು ಕಾಪಾಡುವ” ಅಗತ್ಯ ಎಂದು ಬಣ್ಣಿಸಿದೆ.

3. ಪ್ರತ್ಯೇಕತಾವಾದಿ ಪ್ರದೇಶಗಳಲ್ಲಿ ನೆಲೆಗಳನ್ನು ನಿರ್ಮಿಸುವ ಹಕ್ಕನ್ನು ನೀಡಿದ ಎರಡು ಒಂದೇ ರೀತಿಯ ಸ್ನೇಹ ಒಪ್ಪಂದಗಳಿಗೆ ಸಹಿ ಹಾಕಲು ರಷ್ಯಾ ವೇಗವಾಗಿ ಕ್ರಮಕೈಗೊಂಡಿತು.

4. ಅಮೆರಿಕ ಎರಡು ಪ್ರದೇಶಗಳ ಮೇಲೆ ವ್ಯಾಪಾರ ಮತ್ತು ಹೂಡಿಕೆ ನಿರ್ಬಂಧಗಳನ್ನು ವಿಧಿಸಿತು ಮತ್ತು ಬ್ರಿಟನ್‌ ರಶಿಯಾ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸುವ ಬೆದರಿಕೆ ಹಾಕಿತು. ಆದಾಗ್ಯೂ, ಉಕ್ರೇನ್‌ ಮೇಲೆ ಮತ್ತಷ್ಟು ಆಕ್ರಮಣ ಮಾಡುವವರೆಗೆ ರಷ್ಯಾದೊಂದಿಗೆ ತನ್ನ ರಾಜತಾಂತ್ರಿಕತೆಯನ್ನು ಮುಂದುವರಿಸುತ್ತದೆ ಎಂದು ಾಮೆರಿಕದ ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

5. ವಿಶ್ವಸಂಸ್ಥೆಯು ತನ್ನ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದಿದೆ, ಅಲ್ಲಿ ಭಾರತವು ಉಕ್ರೇನ್‌ನಲ್ಲಿರುವ ತನ್ನ ನಾಗರಿಕರ ಸುರಕ್ಷತೆಯ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿತು. ಬಿಕ್ಕಟ್ಟನ್ನು ಕೊನೆಗೊಳಿಸಲು ಯುದ್ಧವನ್ನು ನಿಲ್ಲಿಸಲು ಮತ್ತು ಶಾಂತಿಯುತ ಮಾತುಕತೆಗಳನ್ನು ಉತ್ತೇಜಿಸಲು ಭಾರತ ಕರೆ ನೀಡಿತು.

ಓದಿರಿ :-   ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ನಾಯಕ ಸುನಿಲ್ ಜಾಖರ್

6. ಉಕ್ರೇನ್ ಮತ್ತು ರಷ್ಯಾ ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಬಿಕ್ಕಟ್ಟಿಗೆ ಪರಸ್ಪರ ದೂಷಿಸಿತು. ಉಕ್ರೇನ್ ರಷ್ಯಾದ ಕ್ರಮಗಳನ್ನು “ಕ್ರೆಮ್ಲಿನ್‌ನಿಂದ ಹರಡಿದ ವೈರಸ್” ಎಂದು ಕರೆದರೆ, ಡಾನ್‌ಬಾಸ್‌ನಲ್ಲಿರುವ ಜನರ ಹಕ್ಕುಗಳನ್ನು ರಕ್ಷಿಸಬೇಕು ಎಂದು ರಷ್ಯಾ ಹೇಳಿದೆ. ಉಕ್ರೇನ್ ಮಾಸ್ಕೋದ ಲಾಭವನ್ನು ಪಡೆದುಕೊಂಡಿದೆ ಮತ್ತು ಅದನ್ನು ಆರ್ಥಿಕ “ಬ್ಲಾಕ್‌ಮೇಲ್” ಗೆ ಒಳಪಡಿಸಿದೆ ಎಂದು ರಷ್ಯಾ ಹೇಳಿದೆ.

7. ಅಮೆರಿಕ ತನ್ನ ಮಿತ್ರರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಮತ್ತು ಮಾಸ್ಕೊವು ಉಕ್ರೇನ್‌ನನಿಂದ ಒಡೆದುಕೊಂಡ ಎರಡು ಪ್ರದೇಶಗಳನ್ನು ಸ್ವತಂತ್ರ ಘಟಕಗಳಾಗಿ ಗುರುತಿಸಿದ ನಂತರ ಮತ್ತು ಅಲ್ಲಿಗೆ “ಶಾಂತಿಪಾಲನಾ” ಪಡೆಗಳನ್ನು ಕಳುಹಿಸಿದ ನಂತರ ಮಂಗಳವಾರ ರಷ್ಯಾದ ವಿರುದ್ಧ ಹೊಸ ನಿರ್ಬಂಧಗಳನ್ನು ಪ್ರಕಟಿಸಲಾಗುತ್ತದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.
8. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ತಮ್ಮ ರಾಷ್ಟ್ರವು ಯಾವುದಕ್ಕೂ ಅಥವಾ ಯಾರಿಗೂ ಹೆದರುವುದಿಲ್ಲ ಎಂದು ಹೇಳಿದ್ದಾರೆ. “ನಾವು ನಮ್ಮದೇ ನೆಲದಲ್ಲಿದ್ದೇವೆ. ನಾವು ಯಾವುದಕ್ಕೂ ಅಥವಾ ಯಾರಿಗಾದರೂ ಹೆದರುವುದಿಲ್ಲ” ಎಂದು ರಷ್ಯಾ ತನ್ನ ಸೈನ್ಯವನ್ನು ಪೂರ್ವ ಉಕ್ರೇನ್‌ಗೆ ಕಳುಹಿಸಲು ಆದೇಶಿಸಿದ ನಂತರ ಅವರು ಹೇಳಿದ್ದಾರೆ.

9. ಫೆಬ್ರವರಿ 20 ರಂದು ಉಕ್ರೇನ್ ತನ್ನ ಇಬ್ಬರು ಸೈನಿಕರು ಪ್ರತ್ಯೇಕತಾವಾದಿ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿತು.

10. ಕಳೆದ ಕೆಲವು ದಿನಗಳಲ್ಲಿ ರಷ್ಯಾ-ಉಕ್ರೇನ್ ಗಡಿಯಲ್ಲಿ 2,000 ಕದನ ವಿರಾಮ ಉಲ್ಲಂಘನೆಗಳು ದಾಖಲಾಗಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ