ಪಾಕಿಸ್ತಾನದಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೇರಿದ ಮೊದಲ ಹಿಂದೂ ಅಧಿಕಾರಿ

ಪಾಕಿಸ್ತಾನ ಆರ್ಮಿಯ ಹಿಂದೂ ಅಧಿಕಾರಿ, ಕೈಲಾಶ್ ಕುಮಾರ ಲೆಫ್ಟಿನೆಂಟ್ ಹುದ್ದೆಗೆ ಭಡ್ತಿ ಪಡೆದಿದ್ದಾರೆ. ಈ ಮೂಲಕ ಪಾಕಿಸ್ತಾನ ಸೇನೆಯಲ್ಲಿ ಈ ಹುದ್ದೆಗೇರಿದ ಮೊದಲ ಹಿಂದೂ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಈ ಸುದ್ದಿ ಪಾಕಿಸ್ತಾನ ಟಿವಿಯಲ್ಲಿ ಶುಕ್ರವಾರ ಪ್ರಸಾರವಾಗಿದೆ. ಜತೆಗೆ ದೇಶದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲಿಯ ಹಿರಿಯ ಅಧಿಕಾರಿಗಳು ಕೈಲಾಶ್ ಕುಮಾರ ನಮ್ಮ ದೇಶದ ಹೆಮ್ಮೆ ಎಂದು ಬಣ್ಣಿಸಿದ್ದಾರೆ. ಪಾಕಿಸ್ತಾನದ ಹವಾಮಾನ ಬದಲಾವಣೆ ಇಲಾಖೆ ಸಚಿವ ಝರ್ತಾಜ್ ಗುಲ್ ವೈಜಿರ್ ಅವರು, ಇದೊಂದು ದೇಶಕ್ಕೆ ಹೆಮ್ಮೆಯ ಕ್ಷಣ ಎಂದಿದ್ದಾರೆ. ಲೇಖಕಿ ಶಮಾ ಜುನೇಜೋ ಎಂಬವರು ಪಾಕಿಸ್ತಾನದಲ್ಲಿ ಇತಿಹಾಸ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಕೈಲಾಶ್ ಜನರಲ್ ಹುದ್ದೆಗೇರಲಿ ಎಂದು ಹಾರೈಸಿದ್ದಾರೆ. ಪಾಕಿಸ್ತಾನದ ಮಾಹಿತಿ ಇಲಾಖೆ ಸಚಿವ ಫವಾದ್ ಛೌದರಿ ಅವರು ಕೈಲಾಶ್ ಕುಮಾರ ಅವರನ್ನು ಅಭಿನಂದಿಸಿ, ನಮ್ಮ ಹೆಮ್ಮೆ ಎಂದು ಕೊಂಡಿದ್ದಾರೆ.

 

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

ಓದಿರಿ :-   ಬೋನಿನಲ್ಲಿದ್ದ ಸಿಂಹದ ಜೊತೆ ಚೆಲ್ಲಾಟವಾಡಲು ಹೋಗಿ ಕೈ ಬೆರಳು ಕಳೆದುಕೊಂಡ ವ್ಯಕ್ತಿ...! ದೃಶ್ಯ ಸಿಸಿಟಿವಿಯಲ್ಲಿ ಸೆರೆ
advertisement

ನಿಮ್ಮ ಕಾಮೆಂಟ್ ಬರೆಯಿರಿ