ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ನ್ಯಾಯಾಧೀಶರನ್ನು ತಯಾರಿಸಿದ ಚೀನಾ, ಈ ನ್ಯಾಯಾಧೀಶರು 97% ನಿರ್ಧಾರಗಳನ್ನು ಸರಿಯಾಗಿ ನೀಡ್ತಾರಂತೆ..!

ಬೀಜಿಂಗ್: ಸೂಪರ್‌ ಕಂಪ್ಯೂಟರ್‌ನಿಂದ ರೋಬೋಟ್‌ಗಳ ವರೆಗೆ, ಚೀನಾ ಕೃತಕ ಬುದ್ಧಿಮತ್ತೆಯನ್ನು ಹೊಂದಿರುವ ನ್ಯಾಯಾಧೀಶರನ್ನು ರಚನೆ ಮಾಡಿದೆ..!
ಇದು ವಿಶ್ವದಲ್ಲೇ ಮೊದಲನೆಯದು. ಈ ನ್ಯಾಯಾಧೀಶರು ಮೌಖಿಕ ವಾದಗಳನ್ನು ಆಲಿಸಿದ ನಂತರ ಶೇಕಡಾ 97 ರಷ್ಟು ಸರಿಯಾದ ನಿರ್ಧಾರಗಳನ್ನು ನೀಡುತ್ತಾರೆ ಎಂದು ಹೇಳಲಾಗಿದೆ. ಈ ನ್ಯಾಯಾಧೀಶರನ್ನು ಶಾಂಘೈ ಪುಡಾಂಗ್ ಪೀಪಲ್ಸ್ ಪ್ರೊಕ್ಯುರೇಟರೇಟ್ ರಚನೆ ಮಾಡಿದೆ. ಇದು ಚೀನಾದ ಅತ್ಯಂತ ಜನನಿಬಿಡ ಪ್ರಾಸಿಕ್ಯೂಷನ್ ಕಚೇರಿಯಾಗಿದೆ. ಈ ತಂತ್ರಜ್ಞಾನದ ನೆರವಿನಿಂದ ಅಭಿಯೋಜಕರ ಕಾರ್ಯಭಾರ ಕಡಿಮೆಯಾಗಲಿದೆ ಎಂದು ರಚಿಸಿದ ಶಾಂಘೈ ಪುಡಾಂಗ್ ಪೀಪಲ್ಸ್ ಪ್ರೊಕ್ಯುರೇಟರೇಟ್ ಹೇಳಿದೆ.

ಕೆಲವು ಸಂದರ್ಭಗಳಲ್ಲಿ, ಈ ಕೃತಕ ಬುದ್ಧಿಮತ್ತೆ (artificial intelligence)-ಸುಸಜ್ಜಿತ ನ್ಯಾಯಾಧೀಶರು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರಾಸಿಕ್ಯೂಟರ್‌ಗಳನ್ನು ಬದಲಾಯಿಸಬಹುದು ಎಂದು ಕಚೇರಿ ಹೇಳಿಕೊಂಡಿದೆ. ಈ ಯಂತ್ರವನ್ನು ಡೆಸ್ಕ್‌ಟಾಪ್ ಕಂಪ್ಯೂಟರ್‌ನಲ್ಲಿ ಬಳಸಬಹುದು. ಈ ಕೃತಕ ಬುದ್ಧಿಮತ್ತೆ (artificial intelligence)ಯ ಈ ನ್ಯಾಯಾಧೀಶರು ತಮ್ಮ ಸಿಸ್ಟಂನಲ್ಲಿ ಶತಕೋಟಿ ಡೇಟಾವನ್ನು ವಿಶ್ಲೇಷಿಸುತ್ತಾರೆ. 2015 ರಿಂದ 2020 ರವರೆಗಿನ ಪ್ರಪಂಚದಾದ್ಯಂತದ ಸಾವಿರಾರು ಪ್ರಕರಣಗಳನ್ನು ಬಳಸಿ ಇದನ್ನು ನಿರ್ಮಿಸಲಾಗಿದೆ.

ಕ್ರೆಡಿಟ್ ಕಾರ್ಡ್ ವಂಚನೆ ಮತ್ತು ಕಳ್ಳತನ ಪತ್ತೆಹಚ್ಚುವ ಸಾಮರ್ಥ್ಯ
ಸದ್ಯಕ್ಕೆ, ಈ ನ್ಯಾಯಾಧೀಶರು ಅಪಾಯಕಾರಿ ಚಾಲಕರು, ಕ್ರೆಡಿಟ್ ಕಾರ್ಡ್ ವಂಚನೆ ಮತ್ತು ಕಳ್ಳತನವನ್ನು ಹಿಡಿಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ತರಹದ ನ್ಯಾಯಾಧೀಶರನ್ನು ರಚನೆ ಮಾಡಿರಬಹುದು, ತಾಂತ್ರಿಕವಾಗಿ, 97% ನಿಖರತೆ ಹೆಚ್ಚಿರಬಹುದು, ಆದರೆ ಯಾವಾಗಲೂ ದೋಷಕ್ಕೆ ಅವಕಾಶವಿರುತ್ತದೆ. ತಪ್ಪು ನಡೆದರೆ ಹೊಣೆ ಹೊರುವವರು ಯಾರು? ಪ್ರಾಸಿಕ್ಯೂಟರ್ ಅವರೋ, ಯಂತ್ರವೋ ಅಥವಾ ಅಲ್ಗಾರಿದಮ್ ವಿನ್ಯಾಸಕರೋ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಕೃತಕ ಬುದ್ಧಿಮತ್ತೆ ಸಹಾಯದಿಂದ ತಪ್ಪನ್ನು ಕಂಡುಹಿಡಿಯಬಹುದು ಆದರೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಅದು ಮನುಷ್ಯರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದು ಪ್ರಾಸಿಕ್ಯೂಟರ್ ಹೇಳಿದರು. ಈ ಭಾಗದಲ್ಲಿ ಚೀನಾ ಮತ್ತು ರಷ್ಯಾದಿಂದ ಬೆದರಿಕೆ ಹೆಚ್ಚುತ್ತಿದೆ ಎಂದು ಬ್ರಿಟನ್ ಗುಪ್ತಚರ ಸಂಸ್ಥೆ ಎಚ್ಚರಿಸಿರುವಾಗಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಚೀನಾ ಈ ಸಾಧನೆ ಮಾಡಿದೆ. ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಸಿಂಥೆಟಿಕ್ ಬಯಾಲಜಿಯನ್ನು ಕರಗತ ಮಾಡಿಕೊಳ್ಳಲು ಉದ್ದೇಶಿಸಿದೆ ಮತ್ತು ಅದರಲ್ಲಿ ಸಾಕಷ್ಟು ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ ಎಂದು ಬ್ರಿಟನ್ ಗುಪ್ತಚರ ಸಂಸ್ಥೆ. ಏಕೆಂದರೆ ಈ ತಂತ್ರಜ್ಞಾನಗಳು ಅವರಿಗೆ ಹೆಚ್ಚು ಅವಕಾಶವನ್ನು ನೀಡುತ್ತವೆ ಎಂದು ಅವರು ತಿಳಿದಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement