ರಷ್ಯಾದ ‘ಟ್ಯಾಂಕ್’ ಅಡಿಯಲ್ಲಿ ಸಿಕ್ಕಿಬಿದ್ದು ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಉಕ್ರೇನಿಯನ್ ವ್ಯಕ್ತಿ…ವೀಕ್ಷಿಸಿ

ಉಕ್ರೇನ್‌ನ ನಿರ್ಜನ ರಸ್ತೆಯೊಂದರಲ್ಲಿ ವೇಗವಾಗಿ ಬಂದ ಸೇನಾ ಯುದ್ಧ ವಾಹನವೊಂದು ಕಾರನ್ನು ಪುಡಿಗೈದಿರುವ ವಿಡಿಯೊ ವೈರಲ್ ಆಗುತ್ತಿದೆ. ರಷ್ಯಾದ ಪಡೆಗಳು ಉಕ್ರೇನಿಯನ್ ಸೈನ್ಯದೊಂದಿಗೆ ಭಾರೀ ಹೋರಾಟದಲ್ಲಿ ತೊಡಗಿರುವ ಸಮಯದಲ್ಲಿ ಕೈವ್‌ನ ಹೊರವಲಯದಲ್ಲಿ ಕಾರಿನ ಮೇಲೆ ‘ಟ್ಯಾಂಕ್’ ಓಡುತ್ತಿರುವಂತೆ ತೋರುವ ವೀಡಿಯೊ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.

ನಾಗರಿಕರು ಚಿತ್ರೀಕರಿಸಿದ್ದಾರೆ ಎಂದು ಹೇಳಲಾದ ವೈರಲ್ ವೀಡಿಯೊದಲ್ಲಿ, ಹಿನ್ನಲೆಯಲ್ಲಿ ಮಹಿಳೆಯರು ಅಳುತ್ತಿರುವುದನ್ನು ಕೇಳಬಹುದು. ಗುಂಡು ಹಾರಿಸುವುದನ್ನು ಸಹ ಕೇಳಬಹುದು.
ಶಸ್ತ್ರಸಜ್ಜಿತ ವಾಹನವು ಕಾರನ್ನು ಪುಡಿಮಾಡುತ್ತಿದೆ. ಹಿನ್ನೆಲೆಯಲ್ಲಿ ಇತರ ಎರಡು ಕಾರುಗಳನ್ನು ಸಹ ಕಾಣಬಹುದು. ರೈಲ್ವೆ ಹಳಿ ಬಳಿ ಈ ಘಟನೆ ನಡೆದಿರುವುದು ವಿಡಿಯೋದಲ್ಲಿ ಗೋಚರಿಸುತ್ತಿದೆ.
ಅಪಘಾತದ ನಂತರ, ನಾಗರಿಕರು ಕಾರಿನೊಳಗಿದ್ದ ವಯಸ್ಸಾದ ವ್ಯಕ್ತಿಯನ್ನು ಹೊರತೆಗೆಯಲು ಜಾಮ್ ಆದ ಕಾರಿನ ಬಾಗಿಲುಗಳನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಪವಾಡಸದೃಶ ರೀತಿಯಲ್ಲಿ ಪಾರಾಗಿರುವುದು ಜಗತ್ತಿನ ಹಲವರನ್ನು ಬೆಚ್ಚಿ ಬೀಳಿಸಿತ್ತು. ವಾಸ್ತವವಾಗಿ, ಅವರು ಸಣ್ಣ ಮೂಗೇಟುಗಳೊಂದಿಗೆ ಪುಡಿಮಾಡಿದ ಕಾರಿನ ಅವಶೇಷಗಳಿಂದ ಹೊರಬಂದರು.

ಇದೀಗ ಶಸ್ತ್ರಸಜ್ಜಿತ ವಾಹನ ಕಾರನ್ನು ಪುಡಿಗೈದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ವೀಡಿಯೊದಲ್ಲಿರುವ ಶಸ್ತ್ರಸಜ್ಜಿತ ವಾಹನವು ‘ರಷ್ಯನ್ ಟ್ಯಾಂಕ್’ ಎಂದು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ.

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement