ನ್ಯೂಯಾರ್ಕ್: ಉಕ್ರೇನ್‌ನಲ್ಲಿ ಯುದ್ಧವು ಹೆಚ್ಚು ಭೀಕರವಾಗುತ್ತಿರುವುದರಿಂದ “ಮುಂಬರುವ ವಾರಗಳಲ್ಲಿ” 40 ಲಕ್ಷ ಜನರು ಇತರ ದೇಶಗಳಲ್ಲಿ ಆಶ್ರಯ ಪಡೆಯಬಹುದು ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಸುಮಾರು 4.40 ಕೋಟಿ ಜನರಿರುವ ದೇಶಕ್ಕೆ, ಅದರ ಜನಸಂಖ್ಯೆಯ ಸುಮಾರು 9%ರಷ್ಟು ಜನರು ಅಲ್ಲಿಂದ ಪಲಾಯನ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಇದುವರೆಗೆ ಸುಮಾರು 6,77,000 ಜನರು ಉಕ್ರೇನ್ ತೊರೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಂಗೇರಿ, ಪೋಲೆಂಡ್, ರೊಮೇನಿಯಾ ಮತ್ತು ಸ್ಲೋವಾಕಿಯಾ ನಾಯಕರು ನಿರಾಶ್ರಿತರ ಆಗಮನಕ್ಕೆ ಸಿದ್ಧರಾಗಿರುವುದಾಗಿ ಸೂಚಿಸಿದ್ದಾರೆ.
ಯುಕ್ರೇನ್‌ನಲ್ಲಿ ಯುದ್ಧದಿಂದ ಪಲಾಯನ ಮಾಡುವ ಯುರೋಪಿನವರಲ್ಲದ ನಿರಾಶ್ರಿತರು ನೆರೆಯ ದೇಶಗಳಿಗೆ ಪ್ರವೇಶಿಸಲು ಪ್ರಯತ್ನಿಸುವಾಗ ತಾರತಮ್ಯ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ತೀವ್ರವಾದ ಶೆಲ್ ದಾಳಿಯಿಂದ ತಪ್ಪಿಸಿಕೊಳ್ಳುವ ಕಪ್ಪು, ದಕ್ಷಿಣ ಏಷ್ಯಾ ಮತ್ತು ಮೆಡಿಟರೇನಿಯನ್ ಜನರು ಗಡಿ ದಾಟಿ ಪೋಲೆಂಡ್‌ಗೆ ಪ್ರವೇಶಿದಂತೆ ಭದ್ರತಾ ಅಧಿಕಾರಿಗಳು ನಿರ್ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಖಾರ್ಕಿವ್‌ನಲ್ಲಿ ಉಕ್ರೇನಿಯನ್ ಮತ್ತು ರಷ್ಯಾದ ಪಡೆಗಳ ನಡುವಿನ ಕಾದಾಟವು ಉಲ್ಬಣಗೊಳ್ಳುತ್ತಿದ್ದಂತೆ, ಭಾರತೀಯ ರಾಯಭಾರ ಕಚೇರಿಯು ಸಾಧ್ಯವಾದಷ್ಟು ಬೇಗ ಪಿಸೋಚಿನ್, ಬಾಬೈ ಮತ್ತು ಬೆಜ್ಲ್ಯುಡಿವ್ಕಾದಲ್ಲಿ ವಸಾಹತುಗಳಿಗೆ ತಕ್ಷಣ ತೆರಳುವಂತೆ ಭಾರತೀಯರನ್ನು ಕೇಳಿದೆ.
ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಬುಧವಾರ ತುರ್ತು ಸಲಹೆಗಳನ್ನು ನೀಡಿದ್ದು, ಖಾರ್ಕಿವ್‌ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯರನ್ನು ತಕ್ಷಣವೇ ಸಂಘರ್ಷ ವಲಯದಿಂದ ತೊರೆಯುವಂತೆ ಕೇಳಿಕೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ