ಆಸ್ಟ್ರೇಲಿಯಾದ ಕ್ರಿಕೆಟ್‌ ದಂತಕಥೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನ

ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಥಾಯ್ಲೆಂಡ್‌ನಲ್ಲಿ ಶಂಕಿತ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.
ವಾರ್ನ್ ಅವರು ಟೆಸ್ಟ್ ಕ್ರಿಕೆಟ್‌ನ ಎರಡನೇ ಅತ್ಯಂತ ಹೆಚ್ಚು ವಿಕೆಟ್-ಪಡೆದ ಆಟಗಾರರಾಗಿದ್ದಾರೆ. ಅವರನ್ನು ವಿಶ್ವದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.

ಶುಕ್ರವಾರ ಬಿಡುಗಡೆ ಮಾಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ ವಾರ್ನ್ ಅವರ ನಿರ್ವಹಣಾ ಕಂಪನಿಯು ಥೈಲ್ಯಾಂಡ್‌ನ ಕೊಹ್ ಸಮುಯಿಯಲ್ಲಿ ವಾರ್ನ್‌ ಅವರು ಶಂಕಿತ ಹೃದಯಾಘಾತದಿಂದ ನಿಧನರಾದರು ಎಂದು ದೃಢಪಡಿಸಿದೆ.
ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಪುನರುಜ್ಜೀವನಗೊಳಿಸಲು ಸಾಧ್ಯವಾಗಲಿಲ್ಲ” ಎಂದು ವಾರ್ನ್ ಅವರ ನಿರ್ವಹಣಾ ಕಂಪನಿಯು ಹೇಳಿಕೆಯಲ್ಲಿ ದೃಢಪಡಿಸಿದೆ.
ವಾರ್ನ್ ಅವರು 1992 ಮತ್ತು 2007 ರ ನಡುವೆ 145 ಟೆಸ್ಟ್ ಮತ್ತು 194 ಏಕದಿನದ ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 1001 ವಿಕೆಟುಗಳನ್ನು ಪಡೆದಿದ್ದಾರೆ.

ಶುಕ್ರವಾರ ಬೆಳಗ್ಗೆಯಷ್ಟೇ ಶೇನ್ ವಾರ್ನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಗುರುವಾರ ನಿಧನರಾದ ಆಸ್ಟ್ರೇಲಿಯಾದ ಮತ್ತೊಬ್ಬ ದಿಗ್ಗಜ ಕ್ರಿಕೆಟಿಗ ರಾಡ್ ಮಾರ್ಷ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ರಾಡ್ ಮಾರ್ಷ್ ಅವರು ನಿಧನರಾದ ಸುದ್ದಿ ಕೇಳಿ ಬೇಸರವಾಯಿತು. ಅವರು ನಮ್ಮ ಶ್ರೇಷ್ಠ ಆಟದ ದಂತಕಥೆಯಾಗಿದ್ದರು ಮತ್ತು ಅನೇಕ ಯುವಕರಿಗೆ ಸ್ಫೂರ್ತಿಯಾಗಿದ್ದರು. ವಿಶೇಷವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರಿಗೆ ತುಂಬಾ ಕೊಡುಗೆ ನೀಡಿದರು. ರೋಸ್ ಮತ್ತು ಕುಟುಂಬಕ್ಕೆ ಸಾಂತ್ವನ. RIP  ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ವಾರ್ನ್ ಅವರು 1992 ರಲ್ಲಿ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಆಸ್ಟ್ರೇಲಿಯಾಕ್ಕೆ ಪಾದಾರ್ಪಣೆ ಮಾಡಿದರು ಮತ್ತು
2007 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಆಡಿದರು. ಅವರ ಸುದೀರ್ಘ ಮತ್ತು ವಿಶಿಷ್ಟ ವೃತ್ತಿಜೀವನದ ಅವಧಿಯಲ್ಲಿ, ಅವರು ಟೆಸ್ಟ್‌ನಲ್ಲಿ 708 ವಿಕೆಟ್‌ಗಳು ಹಾಗೂ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 293 ವಿಕೆಟ್‌ಗಳನ್ನು ಪಡೆದರು.

ವಾರ್ನ್ ಅವರು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಯನ್ನು ಗೆದ್ದರು. ಅವರು ಶ್ರೇಷ್ಠ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದಾರೆ.
ಆಟಗಾರನಾಗಿ ನಿವೃತ್ತಿಯ ನಂತರ, ವಾರ್ನ್ ಸ್ಕೈ ಸ್ಪೋರ್ಟ್ಸ್, ಇಎಸ್‌ಪಿಎನ್ ಮತ್ತು ಭಾರತದ ಡಿಸ್ನಿ ಒಡೆತನದ ಸ್ಟಾರ್ ಟಿವಿಯಲ್ಲಿ ಪ್ರಸಿದ್ಧ ನಿರೂಪಕರಾದರು.

ಲೆಗ್‌ಸ್ಪಿನ್ನರ್ ಆಗಿ ಅವರು ಆಸ್ಟ್ರೇಲಿಯಾಕ್ಕಾಗಿ ಆಡುವ ಸಮಯದಲ್ಲಿ ಅವರನ್ನು ಪ್ರೀತಿಯಿಂದ ‘ವಾರ್ನಿ’ ಎಂದು ಕರೆಯಲಾಯಿತು. ಅವರು ನಿವೃತ್ತಿಯ ನಂತರ ಜನಪ್ರಿಯ ವ್ಯಕ್ತಿಯಾಗಿ ಉಳಿದರು, ನಿರೂಪಕ ಮತ್ತು ಪರಿಣಿತರಾಗಿ ಯಶಸ್ವಿ ಪ್ರಸಾರ ವೃತ್ತಿಯನ್ನು ರೂಪಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement