2022ರಲ್ಲಿ ಚೀನಾದ ಮಿಲಿಟರಿ ಬಜೆಟ್‌ 7.1% ರಷ್ಟು ಹೆಚ್ಚಳ, ವಾರ್ಷಿಕ ಜಿಡಿಪಿ ಗುರಿ 5.5% ಕ್ಕೆ ಇಳಿಕೆ..!

ಬೀಜಿಂಗ್: ಅಮೆರಿಕದ ನಂತರ ನಂತರ ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಬಜೆಟ್‌ ಆಗಿರುವ ಚೀನಾದ ಮಿಲಿಟರಿ ಬಜೆಟ್ 2022ರಲ್ಲಿ ಶೇಕಡಾ 7.1 ರಷ್ಟು ಹೆಚ್ಚಳವಾಗಲಿದೆ ಎಂದು ಬೀಜಿಂಗ್ ಶನಿವಾರ ಪ್ರಕಟಿಸಿದೆ.
ಸರ್ಕಾರದ ಬಜೆಟ್ ವರದಿಯ ಪ್ರಕಾರ ರಾಷ್ಟ್ರೀಯ ರಕ್ಷಣೆಗಾಗಿ ಸುಮಾರು 1.45 ಟ್ರಿಲಿಯನ್ ಯುವಾನ್ ($230 ಬಿಲಿಯನ್) ಮೀಸಲಿಡಲಾಗಿದೆ.
ಹೆಚ್ಚಳವು ಕಳೆದ ವರ್ಷ 6.8 ರಷ್ಟು ಏರಿಕೆ ಮಾಡಿದ್ದಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಇದು ಚೀನಾದ ವಾರ್ಷಿಕ ಜಿಡಿಪಿ ಬೆಳವಣಿಗೆಯ ಗುರಿಯನ್ನು ಮೀರಿದೆ. ಚೀನಾ  ಈ ವರ್ಷದ ಜಿಡಿಪಿ ಬೆಳವಣಿಗೆಯನ್ನು 5.5% ರಷ್ಟು ನಿಗದಿ ಪಡಿಸಲಾಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಚೀನಾದ ಸಂಸತ್ತಿನ ವಾರ್ಷಿಕ ಅಧಿವೇಶನದ ಉದ್ಘಾಟನಾ ಭಾಷಣದಲ್ಲಿ, ಬೀಜಿಂಗ್ “ಮಿಲಿಟರಿ ತರಬೇತಿ ಮತ್ತು ಯುದ್ಧ ಸನ್ನದ್ಧತೆಯನ್ನು ಹೆಚ್ಚಿಸುತ್ತದೆ, ಮಿಲಿಟರಿ ಹೋರಾಟದಲ್ಲಿ ದೃಢವಾಗಿ ಮತ್ತು ಹೊಂದಿಕೊಳ್ಳುತ್ತದೆ ಮತ್ತು ಚೀನಾದ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ಕಾಪಾಡುತ್ತದೆ” ಎಂದು ಪ್ರಧಾನಿ ಲಿ ಕೆಕಿಯಾಂಗ್ ಲಿ ಹೇಳಿದ್ದಾರೆ.
ಬೀಜಿಂಗ್ ಇತ್ತೀಚಿನ ವರ್ಷಗಳಲ್ಲಿ ರಕ್ಷಣಾ ಆಧುನೀಕರಣಕ್ಕೆ ಶತಕೋಟಿ ಡಾಲರ್‌ಗಳನ್ನು ಸುರಿದಿದೆ ಏಕೆಂದರೆ ಅದು ತನ್ನ ಬೃಹತ್ ಮಿಲಿಟರಿಯನ್ನು ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ಶಕ್ತಿಗಳಿಗೆ ಪ್ರತಿಸ್ಪರ್ಧಿಯಾಗಿ ವಿಶ್ವ ದರ್ಜೆಯ ಶಕ್ತಿಯಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.
ಚೀನಾದ ಮಿಲಿಟರಿ ಉದ್ವುಗ್ನತೆಗಳು ಅಮೆರಿಕ ಮತ್ತು ಭಾರತ ಸೇರಿದಂತೆ ಪ್ರತಿಸ್ಪರ್ಧಿಗಳ ನಡುವೆ ಕಳೆದ ವರ್ಷದಲ್ಲಿ ನಾಟಕೀಯವಾಗಿ ಹೆಚ್ಚಿವೆ, ಏಕೆಂದರೆ ಬೀಜಿಂಗ್ ದಕ್ಷಿಣ ಚೀನಾ ಸಮುದ್ರದಲ್ಲಿ ದ್ವೀಪ-ನಿರ್ಮಾಣ ವಿವಾದ, ಹಿಮಾಲಯದ ಗಡಿಯಲ್ಲಿ ಘರ್ಷಣೆಗಳು ಮತ್ತು ತೈವಾನ್ ಮೇಲೆ ಘರ್ಷಣೆಗಳು ಉದ್ವಿಗ್ನತೆ ಹೆಚ್ಚುವಂತೆ ಮಾಡಿದೆ.

ಇಂದಿನ ಪ್ರಮುಖ ಸುದ್ದಿ :-   ತನ್ನ ಕೆಲಸ ಬಿಟ್ಟ ಪೋಷಕರಿಗೆ ಪೂರ್ಣ ಸಮಯದ ಮಗಳಾದ ಚೀನಾ ಮಹಿಳೆ, ಅವಳಿಗೆ ತಿಂಗಳಿಗೆ 47,000 ರೂ. ಸಂಬಳ...!

ಬೀಜಿಂಗ್‌ನ ಮಿಲಿಟರಿ ಬಜೆಟ್ ಇನ್ನೂ ವಾಷಿಂಗ್ಟನ್‌ಗಿಂತ ತುಂಬಾ ಕಡಿಮೆಯಾಗಿದೆ, ಅಮೆರಿಕ 2022 ರ ರಕ್ಷಣಾ ವೆಚ್ಚಕ್ಕಾಗಿ 700 ಶತಕೋಟಿ ಡಾಲರರಗಳಿಗೂ ಹೆಚ್ಚು ಹಣವನ್ನು ಮೀಸಲಿಟ್ಟಿದೆ.
ಆದರೆ ಅನೇಕ ಸಾಗರೋತ್ತರ ಮಿಲಿಟರಿ ವಿಶ್ಲೇಷಕರು ನಿಜವಾದ ಖರ್ಚು ಸಾರ್ವಜನಿಕವಾಗಿ ಘೋಷಿಸಿದ ಬಜೆಟ್‌ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ನಂಬುತ್ತಾರೆ.
ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಚೀನೀ ಕಮ್ಯುನಿಸ್ಟ್ ಪಕ್ಷದ ಸಶಸ್ತ್ರ ವಿಭಾಗವಾಗಿದೆ ಮತ್ತು ಪಕ್ಷದ ನಾಯಕತ್ವವು ಮಿಲಿಟರಿ ನಾಯಕತ್ವದಿಂದ ನಿರಂತರ ಬೆಂಬಲವನ್ನು ಪಡೆದುಕೊಳ್ಳುವ ಅಗತ್ಯವಿದೆ” ಎಂದು ಸಿಂಗಾಪುರದ ನಾನ್ಯಾಂಗ್ ಟೆಕ್ನಾಲಜಿಕಲ್ ಯೂನಿವರ್ಸಿಟಿಯಲ್ಲಿ ಚೀನಾದ ಮಿಲಿಟರಿಯ ತಜ್ಞ ಜೇಮ್ಸ್ ಚಾರ್ ಹೇಳಿದರು.
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕಳೆದ ತಿಂಗಳು ಮಿಲಿಟರಿಗೆ “ಯುದ್ಧ-ಆಧಾರಿತ ಪರೀಕ್ಷೆಗಳನ್ನು” ನಡೆಸಲು ಮತ್ತು ಮಾಹಿತಿ ಆಧಾರಿತ ಯುದ್ಧ” ದ ಸಾಮರ್ಥ್ಯವನ್ನು ಹೆಚ್ಚಿಸಲು ಕರೆ ನೀಡಿದರು.
ಕಳೆದ ವರ್ಷದಲ್ಲಿ, ಚೀನಾ ಹೈಪರ್ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಎರಡು ಹಾರಾಟ ಪರೀಕ್ಷೆಗಳನ್ನು ನಡೆಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ತನ್ನ ಕೆಲಸ ಬಿಟ್ಟ ಪೋಷಕರಿಗೆ ಪೂರ್ಣ ಸಮಯದ ಮಗಳಾದ ಚೀನಾ ಮಹಿಳೆ, ಅವಳಿಗೆ ತಿಂಗಳಿಗೆ 47,000 ರೂ. ಸಂಬಳ...!

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement