ಎತ್ತಿನಹೊಳೆ ಯೋಜನೆ ಜಾರಿಯಾದ್ರೆ ನೇಣು ಹಾಕಿಕೊಳ್ತೇನೆ; ವಿಧಾನಪರಿಷತ್ತಿನಲ್ಲಿ ಸಚವಾಲು ಹಾಕಿದ ಭೋಜೇಗೌಡ …!

posted in: ರಾಜ್ಯ | 0

ಬೆಂಗಳೂರು: ಇಂದು ಸೋಮವಾರ ವಿಧಾನಪರಿಷತ್ತಿನ ಕಲಾಪದಲ್ಲಿ ಜೆಡಿಎಸ್‌ ಸದಸ್ಯ ಭೋಜೇಗೌಡ ಅವರು, ಎತ್ತಿನಹೊಳೆ ಯೋಜನೆ ಆದರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಸವಾಲು ಹಾಕಿ ಸದನವನ್ನೇ ತಬ್ಬಿಬ್ಬುಗೊಳಿಸಿದ್ದಾರೆ.
ಎತ್ತಿನಹೊಳೆ ಯೋಜನೆ ವಿಳಂಬದ ವಿಚಾರವಾಗಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು ಈ ರೀತಿ ಸವಾಲು ಹಾಕಿದರು.
22 ಸಾವಿರ ಕೋಟಿ ರೂ.ಗಳು ಖರ್ಚಾದರೂ ಯೋಜನೆ ಮುಗಿಸಿಲ್ಲ. 50 ಸಾವಿರ ಕೋಟಿ ಖರ್ಚು ಮಾಡಿದರೂ ನೀರು ಕೊಡಲಾಗುವುದಿಲ್ಲ. ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲಾಗುವುದಿಲ್ಲ ಎಂಬುದು ಇದು ನನ್ನ ಸವಾಲು ಎಂದು ಯೋಜನೆ ವಿಳಂಬಕ್ಕೆ ರೋಸಿ ಹೋಗಿ ವಿಧಾನಪರಿಷತ್ತಿಲ್ಲಿ ಈ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಸದಸ್ಯ ರಾಜೇಂದ್ರ ರಾಜಣ್ಣ ಎತ್ತಿನಹೊಳೆ ಯೋಜನೆ ಕುರಿತು ವಿಷಯ ಪ್ರಸ್ತಾಪ ಮಾಡಿ, ಬಯಲು ಸೀಮೆಯ 7 ಜಿಲ್ಲೆಗಳಿಗೆ ನೀರು ಕೊಡುವ ಎತ್ತಿನಹೊಳೆ ಯೋಜನೆ ಸ್ಥಗಿತಗೊಂಡಿದೆ. ತಕ್ಷಣವೇ ಪ್ರಾರಂಭ ಮಾಡಬೇಕು ಎಂದು ಒತ್ತಾಯ ಮಾಡಿದರು. ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲ. ಕೂಡಲೇ ಪರಿಹಾರ ಕೊಟ್ಟು ಕುಡಿಯುವ ನೀರಿನ ಯೋಜನೆ ಮುಗಿಸಬೇಕು ಎಂದು ಒತ್ತಾಯಿಸಿದರು.

ಓದಿರಿ :-   ಧಾರವಾಡದ ಅಪಘಾತದಲ್ಲಿ ಸಾವಿನ ಸಂಖ್ಯೆ 9ಕ್ಕೆ ಏರಿಕೆ : ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಸಚಿವ ಗೋವಿಂದ ಕಾರಜೋಳ ಉತ್ತರಿಸಿ, ಎತ್ತಿನಹೊಳೆ ಯೋಜನೆಗೆ 12,912.36 ಕೋಟಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಎರಡು ಹಂತದ ಯೋಜನೆ ಇದಾಗಿದ್ದು, ಮೊದಲ ಹಂತದ ಲಿಫ್ಟ್ ಕಾಮಗಾರಿ 5 ಪ್ಯಾಕೇಜ್‍ಗಳಲ್ಲಿ 2014ರಲ್ಲಿ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಅರಣ್ಯ ಪರಿಸರ ಇಲಾಖೆಯಿಂದ ಅನುಮತಿ ಪಡೆದು ಕಾಮಗಾರಿ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಯೋಜನೆ ಪ್ರಾರಂಭದಿಂದ ಜನವರಿ 2022 ಅಂತ್ಯದ ವರೆಗೆ 9268.76 ಕೋಟಿ ಸಂಚಿತ ವೆಚ್ಚ ಮಾಡಲಾಗಿರುತ್ತದೆ. ಭೂ ಸ್ವಾಧೀನ ಸಮಸ್ಯೆ, ಪರಿಸರ, ಅರಣ್ಯ ತೀರುವಳಿ, ಗ್ರೀನ್ ಟ್ರುಬ್ಯುನಲ್, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಕೋವಿಡ್‍ನಿಂದಾಗಿ ಯೋಜನೆ ವಿಳಂಬವಾಗಿದೆ. ಅಡೆತಡೆಗಳನ್ನು ನಿವಾರಣೆ ಮಾಡಿ ಕಾಮಗಾರಿ ಅನುಷ್ಠಾನ ಮಾಡುವ ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಜೆಡಿಎಸ್‍ನ ಭೋಜೇಗೌಡ, ಎತ್ತಿನಹೊಳೆ ಯೋಜನೆ ಆದರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಸವಾಲು ಹಾಕಿದರು. 22 ಸಾವಿರ ಕೋಟಿ ರೂ.ಗಳಲ್ಲ, 50 ಸಾವಿರ ಕೋಟಿ ಖರ್ಚು ಮಾಡಿದರು ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಸಾಧ್ಯವಿಲ್ಲ. ಎತ್ತಿನಹೊಳೆ ಕೆಲವರಿಗೆ ಕಾಮಧೇನು. ಒಂದು ವೇಳೆ ಈ ಯೋಜನೆ ಆದರೆ ನಾನು ನೇಣು ಹಾಕಿಕೊಕಿಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.
ಇದಕ್ಕೆ ಸಚಿವರು ಉತ್ತರಿಸಿ, ಸರ್ಕಾರಕ್ಕೆ ಬದ್ಧತೆ ಇರುವುದರಿಂದ ಎತ್ತಿನಹೊಳೆ ಯೋಜನೆಗೆ ಬಜೆಟ್‍ನಲ್ಲಿ 3 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಿದ್ದೇವೆ. ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.

ಓದಿರಿ :-   ಭಟ್ಕಳ: ಆಟ ಆಡುತ್ತಿದ್ದಾಗ ಮಳೆ ನೀರಿನ ಕಾಲುವೆಗೆ ಬಿದ್ದು 4 ವರ್ಷದ ಮಗು ಸಾವು

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ