ನಾಗರಿಕರನ್ನು ಸ್ಥಳಾಂತರಿಸಲು 4 ಉಕ್ರೇನಿಯನ್ ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

ನಾಗರಿಕರಿಗೆ ಉಕ್ರೇನ್ ತೊರೆಯಲು ಮಾನವೀಯ ಕಾರಿಡಾರ್‌ಗಳನ್ನು ತೆರೆಯಲು ರಷ್ಯಾ ಭಾಗಶಃ ಕದನ ವಿರಾಮವನ್ನು ಘೋಷಿಸಿದೆ.
ನೆರೆಯ ದೇಶ ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣಕ್ಕೆ ಇಂದು 12 ನೇ ದಿನ. ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಮನವಿಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ರಷ್ಯಾದ ಮಿಲಿಟರಿಯ ಹೇಳಿಕೆಯ ಪ್ರಕಾರ, ಮಾನವೀಯ ಕಾರಿಡಾರ್‌ಗಳನ್ನು ತೆರೆಯಲು ಕೀವ್, ಮಾರಿಯುಪೋಲ್, ಖಾರ್ಕಿವ್ ಮತ್ತು ಸುಮಿ ಪ್ರದೇಶಗಳಲ್ಲಿ ಕದನ ವಿರಾಮವು ಬೆಳಿಗ್ಗೆ 10 AM (ಮಾಸ್ಕೋ ಸಮಯ) ಕ್ಕೆ ಪ್ರಾರಂಭವಾಗುತ್ತದೆ. ರಷ್ಯಾದ ರಕ್ಷಣಾ ಸಚಿವಾಲಯವು ಕಳೆದ ವಾರ ಮರಿಯುಪೋಲ್ ಮತ್ತು ವೊಲ್ನೊವಾಖಾದಲ್ಲಿ ಕದನ ವಿರಾಮವನ್ನು ಘೋಷಿಸಿ ನಾಗರಿಕರಿಗೆ ತೆರಳಲು ಅವಕಾಶ ನೀಡಿತ್ತು.

ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಉಕ್ರೇನ್‌ನಲ್ಲಿನ ಪ್ರತ್ಯೇಕತಾವಾದಿ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ರಾಷ್ಟ್ರಗಳಾಗಿ ಗುರುತಿಸಿದ ನಂತರ ಫೆಬ್ರವರಿ 24 ರಂದು ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು. ಸುರಕ್ಷತೆಗೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಲಕ್ಷಾಂತರ ಉಕ್ರೇನಿಯನ್ ನಾಗರಿಕರು ರಷ್ಯಾದ ಶೆಲ್ ದಾಳಿಯಿಂದ ಬೇರೆಬೇರೆ ಕಡೆ ಆಶ್ರಯ ಪಡೆಯಬೇಕಾಯಿತು. ನೂರಾರು ಜನರು ಸಾವಿಗೀಡಾದರು.

ಕೀವ್‌ನ ಉಪನಗರಗಳಲ್ಲಿ ಸ್ಥಳಾಂತರಿಸುವ ವಿಫಲ ಪ್ರಯತ್ನಗಳ ಸಮಯದಲ್ಲಿ ಎರಡೂ ಕಡೆಯ ಅಧಿಕಾರಿಗಳು ಸೋಮವಾರ ಮೂರನೇ ಸುತ್ತಿನ ಮಾತುಕತೆಯನ್ನು ಯೋಜಿಸಿದ್ದಾರೆ.
ಉಕ್ರೇನ್‌ ಯುದ್ಧವನ್ನು ನಿಲ್ಲಿಸಿದರೆ ಮಾತ್ರ ದಾಳಿಯನ್ನು ನಿಲ್ಲಿಸಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಭಾನುವಾರ ಹೇಳಿದ್ದಾರೆ. ಪುತಿನ್ ಯುದ್ಧಕ್ಕೆ ಉಕ್ರೇನ್ ಅನ್ನು ದೂಷಿಸಿದರು ಮತ್ತು ಕೀವ್ ಎಲ್ಲಾ ಯುದ್ಧಗಳನ್ನು ನಿಲ್ಲಿಸಲು ಮತ್ತು ರಷ್ಯಾದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಅಗತ್ಯವಿದೆ ಎಂದು ಹೇಳಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement