ರಷ್ಯಾದ ದಾಳಿಗೆ ಉಕ್ರೇನ್​ನ 202 ಶಾಲೆ, 34 ಆಸ್ಪತ್ರೆಗಳು, 1,500 ವಸತಿ ಕಟ್ಟಡಗಳು ಧ್ವಂಸ

ಕೀವ್​: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಮುಂದುವರೆದಿದ್ದು, ರಷ್ಯಾದ ದಾಳಿಯಿಂದ ಉಕ್ರೇನ್​ನ 202 ಶಾಲೆಗಳು, 34 ಆಸ್ಪತ್ರೆಗಳು ಧ್ವಂಸವಾಗಿವೆ ಎಂದು ಉಕ್ರೇನ್‌ ಹೇಳಿದೆ.
ರಷ್ಯಾದ ಕ್ಷಿಪಣಿಗಳು ಕೀವ್ ಸಮೀಪದ ಪಟ್ಟಣವಾದ ಝೈಟೊಮಿರ್‌ನಲ್ಲಿರುವ ಶಾಲೆಯನ್ನು ನಾಶಪಡಿಸಿವೆ. ಎಲ್ಲ ಶಿಕ್ಷಣ ಸಂಸ್ಥೆಗಳು ಬಂದ್ ಆಗಿರುವುದರಿಂದ ಪ್ರಾಣಹಾನಿ ಸಂಭವಿಸಿಲ್ಲ. ರಷ್ಯಾದ ಪಡೆಗಳು ಇದುವರೆಗೆ 202 ಶಾಲೆಗಳು, 34 ಆಸ್ಪತ್ರೆಗಳು ಮತ್ತು 1,500 ವಸತಿ ಕಟ್ಟಡಗಳನ್ನು ನಾಶಪಡಿಸಿವೆ. ಸುಮಾರು 900 ವಸಾಹತುಗಳಲ್ಲಿ ವಿದ್ಯುತ್, ನೀರು ಸಂಪರ್ಕವಿಲ್ಲ ಎಂದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಸಹಾಯಕ ಮೈಖೈಲೊ ಪೊಡೊಲ್ಯಕ್ ಹೇಳಿದ್ದಾರೆ.

ಆಗ್ನೇಯ ಉಕ್ರೇನ್‌ನಲ್ಲಿ ಉಕ್ರೇನ್ ಭದ್ರತಾ ಪಡೆಗಳು ಕೈಬಿಟ್ಟಿದ್ದ ಮಿಲಿಟರಿ ನೆಲೆಯನ್ನು ರಷ್ಯಾ ಆಕ್ರಮಿಸಿಕೊಂಡಿದೆ. ಆಗ್ನೇಯ ಉಕ್ರೇನ್‌ನ ಬರ್ಡಿಯಾನ್ಸ್ಕ್‌ನ ಹೊರವಲಯದಲ್ಲಿ ಮಿಲಿಟರಿ ಉಪಕರಣಗಳು, ಫಿರಂಗಿ ಮತ್ತು ಇಂಧನ ಡಿಪೋಗಳಿದ್ದ ಭದ್ರತಾ ನೆಲೆಯನ್ನು ಉಕ್ರೇನಿಯನ್ ತೊರೆದಿದ್ದರು. ಈಗ ಈ ನೆಲೆಯನ್ನು ರಷ್ಯಾದ ಮಿಲಿಟರಿ ಆಕ್ರಮಿಸಿಕೊಂಡಿದೆ. 26 ಉಕ್ರೇನಿಯನ್ ಮಿಲಿಟರಿ ರಚನೆಗಳು ವೈಮಾನಿಕ ದಾಳಿಯಲ್ಲಿ ನಾಶವಾಗಿವೆ ಎಂದು ರಷ್ಯಾ ಹೇಳಿಕೊಂಡಿದೆ.
ಉಕ್ರೇನ್‌ನ ಮಿಲಿಟರಿ ಮೂಲಸೌಕರ್ಯದ ಮೇಲಿನ ದಾಳಿ ಮುಂದುವರಿದಿವೆ. ರಷ್ಯಾದ ವಾಯು ದಾಳಿಯಿಂದ 26 ಮಿಲಿಟರಿ ಶಸ್ತ್ರಾಸ್ತಗಳು ಹಾಗೂ ನೆಲೆಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾದ ಒಕ್ಕೂಟದ ರಕ್ಷಣಾ ಸಚಿವಾಲಯ ತಿಳಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement