12-17 ವರ್ಷ ವಯಸ್ಸಿನವರಿಗೆ ತುರ್ತು ಬಳಕೆಗಾಗಿ ಡಿಸಿಜಿಐ ಅನುಮೋದನೆ ಪಡೆದ ಕೊವೊವ್ಯಾಕ್ಸ್‌

ನವದೆಹಲಿ: ಭಾರತದ ಔಷಧ ನಿಯಂತ್ರಕ ( DCGI) 12-17 ವರ್ಷ ವಯಸ್ಸಿನವರಿಗೆ ಕೆಲವು ಷರತ್ತುಗಳಿಗೆ ಒಳಪಟ್ಟು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಡ್ -19 ಲಸಿಕೆ ಕೋವೊವಾಕ್ಸ್‌ಗೆ ನಿರ್ಬಂಧಿತ ತುರ್ತು ಬಳಕೆಯ ಅಧಿಕಾರ ನೀಡಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಇದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಬಳಕೆಗಾಗಿ ನಿಯಂತ್ರಕರ ಅನುಮೋದನೆ ಪಡೆದ ನಾಲ್ಕನೇ ಲಸಿಕೆಯಾಗಿದೆ. CDSCO ದ ಕೋವಿಡ್‌-19 ಕುರಿತ ವಿಷಯ ತಜ್ಞರ ಸಮಿತಿಯು 12 ರಿಂದ 17 ವಯಸ್ಸಿನವರಿಗೆ ಕೋವೊವಾಕ್ಸ್‌ಗೆ ತುರ್ತು ಬಳಕೆಯ ಅಧಿಕಾರವನ್ನು (EUA) ನೀಡುವಂತೆ ಕಳೆದ ವಾರ ಶಿಫಾರಸು ಮಾಡಿದ ನಂತರ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(DCGI)ದ ಅನುಮೋದನೆ ಬಂದಿದೆ.

15 ವರ್ಷದೊಳಗಿನವರಿಗೆ ಲಸಿಕೆ ಹಾಕುವ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಚುಚ್ಚುಮದ್ದಿನ ಹೆಚ್ಚುವರಿ ಅಗತ್ಯತೆ ಮತ್ತು ಲಸಿಕೆಗಾಗಿ ಜನಸಂಖ್ಯೆಯನ್ನು ಸೇರಿಸುವುದನ್ನು ನಿರಂತರವಾಗಿ ಪರಿಶೀಲಿಸಲಾಗುತ್ತದೆ ಎಂದು ಆರೋಗ್ಯ ಸಚಿವಾಲಯವು ಹೇಳಿದೆ.
ಡಿಸಿಜಿಐಗೆ ತುರ್ತು ಬಳಕೆಯ ಅಧಿಕಾರ ನೀಡುವಂತೆ ಸಲ್ಲಿಸಿದ ಅರ್ಜಿಯಲ್ಲಿ, ಫೆಬ್ರವರಿ 21 ರಂದು ಎಸ್‌ಐಐ(SII)ನಲ್ಲಿ ನಿರ್ದೇಶಕ (ಸರ್ಕಾರ ಮತ್ತು ನಿಯಂತ್ರಕ ವ್ಯವಹಾರಗಳು) ಪ್ರಕಾಶ್ ಕುಮಾರ್ ಸಿಂಗ್ ಅವರು, 12 ರಿಂದ 17 ವರ್ಷ ವಯಸ್ಸಿನ ಸುಮಾರು 2707 ಮಕ್ಕಳ ಮೇಲಿನ ಎರಡು ಅಧ್ಯಯನಗಳ ಡೇಟಾವು ಕೋವೊವಾಕ್ಸ್‌ ಹೆಚ್ಚು ಪರಿಣಾಮಕಾರಿ, ಇಮ್ಯುನೊಜೆನಿಕ್, ಸುರಕ್ಷಿತವಾಗಿದೆ ಎಂದು ತೋರಿಸುತ್ತದೆ ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

ಡಿಸಿಜಿಐ ಈಗಾಗಲೇ ಡಿಸೆಂಬರ್ 28 ರಂದು ವಯಸ್ಕರಲ್ಲಿ ತುರ್ತು ಸಂದರ್ಭಗಳಲ್ಲಿ ನಿರ್ಬಂಧಿತ ಬಳಕೆಗಾಗಿ ಕೋವೊವಾಕ್ಸ್‌ ಅನ್ನು ಅನುಮೋದಿಸಿದೆ. ಇದನ್ನು ಇನ್ನೂ ದೇಶದ ವ್ಯಾಕ್ಸಿನೇಷನ್ ಡ್ರೈವ್‌ನಲ್ಲಿ ಸೇರಿಸಲಾಗಿಲ್ಲ.
ಫೆಬ್ರವರಿ 21 ರಂದು ಡಿಸಿಜಿಐ ಕೆಲವು ಷರತ್ತುಗಳಿಗೆ ಒಳಪಟ್ಟು 12 ರಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಬಯಾಲಾಜಿಕಲ್ ಇ ‌ಕೋವಿಡ್‌-19 ಲಸಿಕೆ ಕೊರ್ಬೆವ್ಯಾಕ್ಸ್‌ಗೆ ನಿರ್ಬಂಧಿತ ತುರ್ತು ಬಳಕೆ ಅಧಿಕಾರವನ್ನು ನೀಡಿದೆ.
ಕೊವೊವ್ಯಾಕ್ಸ್‌ ಅನ್ನು ನೊವೊವ್ಯಾಕ್ಸ್‌ ನಿಂದ ತಂತ್ರಜ್ಞಾನ ವರ್ಗಾವಣೆ ಮೂಲಕ ತಯಾರಿಸಲಾಗುತ್ತದೆ ಮತ್ತು ಷರತ್ತುಬದ್ಧ ಮಾರ್ಕೆಟಿಂಗ್ ಅಧಿಕಾರಕ್ಕಾಗಿ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿಯಿಂದ ಅನುಮೋದಿಸಲಾಗಿದೆ ಮತ್ತು ಡಿಸೆಂಬರ್ 2017, 2020 ರಂದು ವಿಶ್ವ ಆರೋಗ್ಯ ಸಂಸ್ಥೆ(WHO)ಯಿಂದ ತುರ್ತು ಬಳಕೆಯ ಪಟ್ಟಿಯನ್ನು ಸಹ ನೀಡಲಾಗಿದೆ.

ಭಾರತವು ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಅನ್ನು 15-18 ವರ್ಷಗಳ ನಡುವಿನ ಹದಿಹರೆಯದವರಿಗೆ ಲಸಿಕೆ ಹಾಕಲು ಬಳಸುತ್ತಿದೆ.
ZyCov-D ಕಳೆದ ವರ್ಷ ಆಗಸ್ಟ್‌ನಲ್ಲಿ 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಇನಾಕ್ಯುಲೇಶನ್‌ಗಾಗಿ ಭಾರತದ ಔಷಧ ನಿಯಂತ್ರಕದಿಂದ ತೆರವುಗೊಳಿಸಿದ ಮೊದಲ ಲಸಿಕೆಯಾಗಿದೆ. ಸ್ಥಳೀಯವಾಗಿ-ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಕಳೆದ ವರ್ಷ ಡಿಸೆಂಬರ್‌ನಲ್ಲಿ 12 ರಿಂದ 18 ರಲ್ಲಿ ತುರ್ತು ಬಳಕೆಗಾಗಿ ಅನುಮೋದನೆಯನ್ನು ಪಡೆಯಿತು.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement