ಈ ವರ್ಷ ಆಗಸ್ಟ್ ತಿಂಗಳಿಂದ ಬಿಎಸ್ಎನ್ಎಲ್ 4ಜಿ ಸೇವೆಯೊಂದಿಗೆ 5ಜಿ ಸಹ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಇತ್ತೀಚೆಗೆ ನಡೆದ ಆತ್ಮನಿರ್ಭರ ಭಾರತದ 5ಜಿ ಕಾಂಗ್ರೆಸ್ 2022ನಲ್ಲಿ ಬಿಎಸ್ಎನ್ಎಲ್ ಸಿ-ಡಾಟ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ, ಚೇರ್ ಮೆನ್ ರಾಜಕುಮಾರ ಉಪಾಧ್ಯಾಯ ಈ ಕುರಿತು ಮಾಹಿತಿ ನೀಡಿದ್ದಾರೆ. ಬಿಎಸ್ಎನ್ಎಲ್ 4ಜಿ ಸೇವೆಯನ್ನು ಆಗಸ್ಟ್ 15ರಿಂದ ಸಾರ್ವಜನಿಕರಿಗೆ ಒದಗಿಸಲು ಈಗಾಗಲೇ ಸಿದ್ಧತೆ ನಡೆಸಿದೆ. ಅದರ ಜತೆಗೆ ನಾನ್-ಸ್ಟ್ಯಾಂಡ್ ಎಲೋನ್ ಮೋಡ್ ನಲ್ಲಿ 5ಜಿ ಸೇವೆ ಸಹ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
Non Standalone modeನಲ್ಲಿ ಪೂರ್ಣಪ್ರಮಾಣದ 5ಜಿ ಸೇವೆ ಲಭ್ಯವಾಗುವುದಿಲ್ಲ, 4ಜಿ ಕೋರ್ ಜಾಲದ ಮೂಲಕವೇ 5ಜಿ ಸೇವೆ ಒದಗಿಸಲಾಗುತ್ತದೆ.
ಬಿಎಸ್ಎನ್ಎಲ್ ಪೂರ್ಣಪ್ರಮಾಣದಲ್ಲಿ ಸಾರ್ವಜನಿಕರಿಗೆ 4ಜಿ ಸೇವೆ ಒದಗಿಸಲು ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಟಾಟಾ ಕನ್ಸಲ್ಟನ್ಸಿ ಸರ್ವೀಸ್ ಕಂಪನಿ ಸಹಯೋಗದಲ್ಲಿ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಳಿಸಿದೆ. ಬಿಎಸ್ಎನ್ಎಲ್ 4ಜಿ ಮತ್ತು 5ಜಿ ಸೇವೆ ಲಭ್ಯವಾದರೆ ಗ್ರಾಮೀಣ ಭಾಗದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಬಿಎಸ್ಎನ್ಎಲ್ ಕಡಿಮೆ ದರದಲ್ಲಿ ಇಂಟರ್ನೆಟ್ ಸೇವೆ ಒದಗಿಸುತ್ತಿದೆ ಹಾಗೂ ಗ್ರಾಮೀಣ ಭಾಗಗಳಲ್ಲಿ ವ್ಯಾಪಕ ಜಾಲ ಹೊಂದಿದೆ.
ನಿಮ್ಮ ಕಾಮೆಂಟ್ ಬರೆಯಿರಿ