ಗುಜರಾತ್:‌ ವಿಷಾಹಾರ ಸೇವಿಸಿ 116 ಹಸುಗಳು ಸಾವು-ವಿಧಾನಸಭೆಗೆ ಸರ್ಕಾರದಿಂದ ಮಾಹಿತಿ

ಗಾಂಧಿನಗರ (ಗುಜರಾತ): ಹದಿನೈದು ದಿನಗಳ ಹಿಂದೆ ಸಬರಕಾಂತ ಜಿಲ್ಲೆಯ ಇದಾರ್‌ನ ಪಂಜ್‌ಪೋಲ್‌ನಲ್ಲಿ ವಿಷ ಸೇವಿಸಿ 116 ಹಸುಗಳು ಮೃತಪಟ್ಟಿವೆ ಎಂದು ರಾಜ್ಯ ಸರ್ಕಾರ ಸೋಮವಾರ ವಿಧಾನಸಭೆಗೆ ತಿಳಿಸಿದೆ ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್‌.ಕಾಮ್‌ ವರದಿ ಮಾಡಿದೆ.

ಗುಜರಾತ್ ವಿಧಾನಸಭೆಯ ನಿಯಮ 116 ರ ಅಡಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕ ರಾಜೇಂದ್ರ ಸಿಂಗ್ ಠಾಕೂರ್, ಹಸಿರು ಮೇವಾಗಿ ಬಳಸುವ ಮೆಕ್ಕೆಜೋಳವನ್ನು ತಿಂದು ಜಾನುವಾರುಗಳು ಮೃತಪಟ್ಟಿವೆ ಎಂದು ಸೂಚಿಸಿದರು. 24 ಗಂಟೆಗೂ ಹೆಚ್ಚು ಕಾಲ ಹಸಿರು ಮೇವು ಶೇಖರಣೆಯಾಗಿರುವುದರಿಂದ ವಿಷಪೂರಿತವಾಗಿದೆ ಎಂದು ಶಾಸಕರು ತಿಳಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳ ವಿರುದ್ಧ ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಅವರು ಪ್ರಶ್ನಿಸಿದರು.

101 ಜಾನುವಾರುಗಳು ಸ್ಥಳದಲ್ಲೇ ಮೃತಪಟ್ಟಿದ್ದರೆ, ಪ್ರಾಥಮಿಕ ಚಿಕಿತ್ಸೆ ವೇಳೆ 15 ಹಸುಗಳು ಮೃತಪಟ್ಟಿವೆ ಎಂದು ಕೃಷಿ ಮತ್ತು ಪಶುಸಂಗೋಪನೆ ಸಚಿವ ರಾಘವಜಿ ಪಟೇಲ್ ಹೇಳಿದ್ದಾರೆ, ಸತ್ತ ಜಾನುವಾರುಗಳು ಹಸುಗಳು, ಎತ್ತುಗಳು ಮತ್ತು ಕರುಗಳನ್ನು ಒಳಗೊಂಡಿವೆ ಎಂದು ಹೇಳಿದರು.

ಮಾರ್ಚ್ 2 ರಂದು ಜಾನುವಾರುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ 114 ಹಸುಗಳನ್ನು ಉಳಿಸಲಾಗಿದೆ ಎಂದು ಅವರು ಹೇಳಿದರು. ಮೂರು ಜಾನುವಾರುಗಳ ಮರಣೋತ್ತರ ಪರೀಕ್ಷೆಯಲ್ಲಿ ಹಸಿರು ಮೇವಿನಿಂದ ವಿಷ ಕಾಣಿಸಿಕೊಂಡಿದೆ ಎಂದು ಸಚಿವರು ಹೇಳಿದರು. ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಪಟೇಲ್, ಹಸುಗಳ ಪಾಲನೆಗಾಗಿ 2.68 ಕೋಟಿ ರೂ.ಗಳನ್ನು ಸಂಬಂಧಪಟ್ಟ ಪಂಜರಪೋಳಕ್ಕೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement