ಇದೆಂಥ ಸೇಡು…7ನೇ ವಯಸ್ಸಿನಲ್ಲಿ ಶಿಕ್ಷಕಿ ಅವಮಾನಿಸಿದ್ದರೆಂಬ ಕಾರಣಕ್ಕೆ 30 ವರ್ಷಗಳ ನಂತರ ಅವರನ್ನು 101 ಬಾರಿ ಇರಿದು ಕೊಂದ ಹಳೆಯ ವಿದ್ಯಾರ್ಥಿ…!

ಬ್ರಸೆಲ್ಸ್ (ಬೆಲ್ಜಿಯಂ): 37 ವರ್ಷದ ವ್ಯಕ್ತಿಯೊಬ್ಬ 7 ವರ್ಷದನಾಗಿದ್ದಾಗ ತನ್ನ ಟೀಚರ್ ಕ್ಲಾಸಿನಲ್ಲಿ ಅವಮಾನ ಮಾಡಿದರೆಂಬ ಕಾರಣಕ್ಕೆ 30 ವರ್ಷಗಳ ನಂತರ ಅವರನ್ನು 101 ಬಾರಿ ಇರಿದು ಸೇಡು ತೀರಿಸಿಕೊಂಡ ಘಟನೆ ನಡೆದ ಬಗ್ಗೆ ವರದಿಯಾಗಿದೆ..!
ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರೊಬ್ಬರಿಂದ ಅವಮಾನಿತನಾಗಿದ್ದೇನೆ ಎಂದು ಹೇಳಿಕೊಂಡ 37 ವರ್ಷದ ವ್ಯಕ್ತಿಯೊಬ್ಬ ಸೇಡು ತೀರಿಸಿಕೊಳ್ಳಲು ಮೂವತ್ತು ವರ್ಷಗಳ ನಂತರ ಅಂದರೆ 2020ರಲ್ಲಿ ತನಗೆ ಅವಮಾನ ಮಾಡಿದ ಶಿಕ್ಷಕಿಯನ್ನು ಇರಿದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಬೆಲ್ಜಿಯಂ ಪ್ರಾಸಿಕ್ಯೂಟರ್‌ಗಳು ಗುರುವಾರ ತಿಳಿಸಿದ್ದಾರೆ.

1990ರ ದಶಕದ ಆರಂಭದಲ್ಲಿ ಶಿಕ್ಷಕಿ ಮಾರಿಯಾ ವೆರ್ಲಿಂಡೆನ್ ಅವರು ತಾನು ಏಳು ವರ್ಷದ ಶಾಲಾ ಬಾಲಕನಾಗಿದ್ದಾಗ ತರಗತಿಯಲ್ಲಿ ತನಗೆ ಮಾಡಿದ ಕಾಮೆಂಟ್‌ಗಳನ್ನು ತಾನು ಎಂದಿಗೂ ಮರೆತಿಲ್ಲ ಎಂದು ಕೊಲೆ ಆರೋಪಿ ಗುಂಟರ್ ಉವೆಂಟ್ಸ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.
2020 ರಲ್ಲಿ ಆಂಟ್‌ವರ್ಪ್ ಬಳಿಯ ಹೆರೆಂಟಲ್ಸ್‌ನಲ್ಲಿರುವ ತನ್ನ ಮನೆಯಲ್ಲಿ 59 ವರ್ಷದ ವೆರ್ಲಿಂಡೆನ್‌ನ ಘೋರವಾಗಿ ಹತ್ಯೆಯಾಗಿದ್ದರು. ಬೆಲ್ಜಿಯಂ ಪೋಲೀಸ್ ವಿಚಾರಣೆಗಳು ಮತ್ತು ನೂರಾರು ಡಿಎನ್‌ಎ ಮಾದರಿಗಳ ಹೊರತಾಗಿಯೂ ಈ ಶಿಕ್ಷಕಿಯ ಕೊಲೆಗಾರ ಯಾರೆಂದು ಹುಡುಕಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಆಕೆಯ ಪತಿ ಸಾಕ್ಷಿಗಳಿಗಾಗಿ ಸಾರ್ವಜನಿಕ ಮನವಿಯನ್ನು ಮಾಡಿದ್ದರು.

ಮಾಧ್ಯಮ ವರದಿಗಳ ಪ್ರಕಾರ ಶಿಕ್ಷಕಿ ವೆರ್ಲಿಂಡೆನ್‌ ಅವರನ್ನು ಕೊಲೆ ಆರೋಪಿ ಗುಂಟರ್ ಉವೆಂಟ್ಸ್ 101 ಬಾರಿ ಇರಿದು ಕೊಂದಿದ್ದಾನೆ..! ಆಕೆಯ ಶವದ ಪಕ್ಕದಲ್ಲಿರುವ ಡೈನಿಂಗ್ ಟೇಬಲ್‌ನಲ್ಲಿ ಆಕೆಯ ನಗದು ಹಣವಿದ್ದ ಪರ್ಸ್ ಮುಟ್ಟದೆ ಬಿಟ್ಟಿರುವುದು ಅವರನ್ನು ದರೋಡೆ ಮಾಡುವ ಉದ್ದೇಶಕ್ಕೆ ಕೊಲೆ ಮಾಡಲಾಗಿಲ್ಲ ಎಂದು ಪೊಲೀಸರು ತೀರ್ಮಾನಿಸಿದ್ದರು.
ನವೆಂಬರ್ 20, 2020 ರಂದು ಕೊಲೆಯಾದ ಹದಿನಾರು ತಿಂಗಳ ನಂತರ, ಉವೆಂಟ್ಸ್ ತನ್ನ ಸ್ನೇಹಿತರ ಮುಂದೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ. ಆತನನ್ನು ಭಾನುವಾರ ಬಂಧಿಸಲಾಗಿದೆ.
ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಕುರುಹುಗಳೊಂದಿಗೆ ಹೋಲಿಸಲು ಉವೆಂಟ್ಸ್ ಡಿಎನ್ಎ ಮಾದರಿ ಪರೀಕ್ಷೆಗೆ ಕಳುಹಿಸಿದ್ದಾರೆ.

ಸ್ಥಳೀಯ ಪ್ರಾಸಿಕ್ಯೂಟರ್‌ಗಳ ಕಚೇರಿಯು ಉವೆಂಟ್ಸ್ ತನ್ನ ಕೃತ್ಯಕ್ಕೆ “ವಿವರವಾದ ವಿವರಣೆಗಳನ್ನು” ನೀಡಿದ್ದಾನೆ, ಅದು ತಪ್ಪೊಪ್ಪಿಗೆಗೆ ಸಮಾನವಾಗಿದೆ. ತನ್ನ ಶಿಕ್ಷಕರಿಂದಾಗಿ ಪ್ರಾಥಮಿಕ ಶಾಲೆಯಲ್ಲಿ ತೊಂದರೆ ಅನುಭವಿಸಿದ್ದೇನೆ ಎಂದು ಆತ ಹೇಳಿದ್ದಾನೆ ಎಂದು AFP ಗೆ ತಿಳಿಸಿದ್ದಾರೆ.
ಗುಂಟರ್ ಉವೆಂಟ್ಸ್ ಹೆಸರಿನ ಅಪರಾಧಿಗೆ 1990 ರಲ್ಲಿ, ಅವನು 7 ವರ್ಷದ ಬಾಲಕನಾಗಿದ್ದಾಗ ಟೀಚರ್ ವರ್ಲಿನ್ಡೆನ್ ಮಾಡಿದ ಅವಹೇಳನಕಾರಿ ಕಾಮೆಂಟ್​ಗಳನ್ನು ಮರೆಯುವುದು ಸಾಧ್ಯವೇ ಅಗಿಲಿಲ್ಲ ಎಂದು ಪೊಲೀಸರಿಗೆ ಹೇಳಿದ್ದಾನೆ.
ತನಿಖೆಯು ಆತ ಹೇಳಿದ್ದನ್ನು ದೃಢೀಕರಿಸುತ್ತದೆಯೇ ಎಂದು ನಾವು ನೋಡುತ್ತಿದ್ದೇವೆ ಎಂದು ಪ್ರಾಸಿಕ್ಯೂಟರ್ ಹೇಳಿದರು.ಉವೆಂಟ್ಸ್ ನ್ಯಾಯಾಧೀಶರ ಮುಂದೆ ಹಾಜರಾದರು ಮತ್ತು ಕೊಲೆ ಆರೋಪದ ಮೇಲೆ ಆತನನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ.ಉವೆಂಟ್ಸ್ ಒಬ್ಬ ಧರ್ಮನಿಷ್ಠ ಕ್ರಿಶ್ಚಿಯನ್ ಹಾಗೂ ರಾಶ್ರಿತರಿಗೆ ಸಹಾಯ ಮಾಡುವ ಮೂಲಕ ಹೆಸರುವಾಸಿಯಾಗಿದ್ದಾನೆ ಎಂದು ಬೆಲ್ಜಿಯಂ ಮಾಧ್ಯಮ ವರದಿ ಮಾಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement