ಒಂದು ವರ್ಷದ ಬಳಿಕ ಚೀನಾದಲ್ಲಿ ಕೋವಿಡ್​ನಿಂದ ಸಾವು, ಇಬ್ಬರ ಸಾವು ದೃಢಪಡಿಸಿದ ಅಧಿಕಾರಿಗಳು

ವುಹಾನ್‌: ಜಾಗತಿಕವಾಗಿ ಕೊರೊನಾ ವೈರಸ್​ ಪ್ರಕರಣ ತೀವ್ರ ಕುಸಿತ ಕಾಣುತ್ತಿರುವ ನಡುವೆಯೇ ಚೀನಾದಲ್ಲಿ ಈ ಸಾಂಕ್ರಾಮಿಕ ಉಲ್ಬಣಿಸಿದೆ. ಚೀನಾದಲ್ಲಿ 2021ರ ಜನವರಿ ನಂತರ ಕೊರೊನಾ ಸೋಂಕಿನಿಂದ ಮೊದಲ ಸಾವು ಸಂಭವಿಸಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಅಧಿಕಾರಿಗಳು ಶನಿವಾರ ಎರಡು ಕೊವೀಡ್ ಸಾವುಗಳನ್ನು ವರದಿ ಮಾಡಿದ್ದಾರೆ.

ಚೀನಾದಲ್ಲಿ ಕೊರೊನಾ ರೂಪಾಂತರಿ ವೈರಸ್‌ ಒಮಿಕ್ರಾನ್​ ಸಮುದಾಯಕ್ಕೆ ಹರಡಿದ್ದು, ಶನಿವಾರ 2,157 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಚೀನಾದ ಜಿಲಿನ್ ಪ್ರಾಂತ್ಯದಲ್ಲೆ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ.

ಈ ಮಧ್ಯೆ ಅಂತಾರಾಷ್ಟ್ರೀಯ ಪ್ರಯಾಣವನ್ನು ನಿರ್ಬಂಧಿಸುವ ಮತ್ತು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕಗಳನ್ನು ಕಡಿತಗೊಳಿಸುವ ನಿರ್ಧಾರದಿಂದ ವ್ಯಾಪಕವಾಗಿ ಟೀಕೆಗೊಳಗಾದ ಚೀನಾ ತನ್ನ ‘ ಶೂನ್ಯ-ಕೋವಿಡ್’ ನೀತಿ ಸಡಿಲಿಸುವುದನ್ನು ತಳ್ಳಿಹಾಕಿದೆ. ಚೀನಾದಲ್ಲಿ ಕಠಿಣ
ಲಾಕ್‌ಡೌನ್‌ಗಳು ಮುಂದುವರಿದಿದೆ.
ಶೂನ್ಯ-ಕೋವಿಡ್’ ನೀತಿಯ ತಂತ್ರವು ಸಾಮೂಹಿಕ ಪರೀಕ್ಷೆ ಮತ್ತು ಕಟ್ಟುನಿಟ್ಟಾದ ಲಾಕ್‌ಡೌನ್‌ಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಎಲ್ಲಾ ಹೊಸ ಪ್ರಕರಣಗಳು ಕ್ವಾರಂಟೈನ್‌ನಲ್ಲಿ ಅಥವಾ ಸಂಪರ್ಕ ಪತ್ತೆಹಚ್ಚುವಿಕೆ ಆಗುವವರೆಗೆ ನಿವಾಸಿಗಳು ತಮ್ಮ ಮನೆಗಳನ್ನು ತೊರೆಯುವುದನ್ನು ನಿಷೇಧಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement